ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಂತರ ಮತ್ತೊಂದು ಬಿಗ್ ಬಾಸ್ ಜೋಡಿಯ ದಾಂಪತ್ಯದಲ್ಲಿ ಬಿರುಕು ?
| Sep 1, 2025, 21:39 IST
ಹೌದು, ಐಶ್ವರ್ಯ ಶರ್ಮಾ- ನೀಲ್ ಭಟ್.. ಹಿಂದಿ ಕಿರುತೆರೆಯ ಖ್ಯಾತ ಜೋಡಿ. ''ಘುಮ್ ಹೈ ಕಿಸಿಕೇ ಪ್ಯಾರ್ ಮೇ'' ಧಾರಾವಾಹಿಯಲ್ಲಿ ಜೊತೆಯಾಗಿ ಅಭಿನಯಿಸಿದವರು ಇಬ್ಬರು. ಧಾರಾವಾಹಿಯಲ್ಲಿ ಅಭಿನಯಿಸುತ್ತಲೇ ಪ್ರೀತಿಯಲ್ಲಿ ಬಿದ್ದು ಆ ನಂತರ 2021ರಲ್ಲಿ ಮದುವೆಯಾದ ಇಬ್ಬರು ''ಬಿಗ್ ಬಾಸ್'' ಮನೆಯನ್ನು ಕೂಡ ಒಟ್ಟಿಗೆ ಪ್ರವೇಶಿಸಿದ್ದರು. ಹಿಂದಿಯ ''ಬಿಗ್ ಬಾಸ್'' ಸೀಸನ್ 17ರಲ್ಲಿ ಜೊತೆಯಾಗಿಯೇ ಭಾಗವಹಿಸಿದ್ದರು.
ಹೆಚ್ಚು ಕಡಿಮೆ ಹನ್ನೊಂದು ವಾರ ''ಬಿಗ್ ಬಾಸ್'' ಮನೆಯಲ್ಲಿ ಜೊತೆಯಾಗಿಯೇ ಇದ್ದ ಇಬ್ಬರು ತಮ್ಮ ಅಭಿಮಾನಿಗಳ ಹೃದಯಕ್ಕೆ ಈ ಕಾರ್ಯಕ್ರಮದ ಮೂಲಕ ಇನ್ನೂ ಹತ್ತಿರವಾಗಿದ್ದರು. 70ನೇ ದಿನಕ್ಕೆ ಮನೆಯಿಂದ ಐಶ್ವರ್ಯ ಶರ್ಮಾ ಹೊರ ಬಂದರೆ ಆ ನಂತರ ನೀಲ್ ಭಟ್ ಮನೆಯಿಂದ ಎಲಿಮಿನೇಟ್ ಆಗಿದ್ದರು.
ಇಂಥಾ ಐಶ್ವರ್ಯ ಶರ್ಮಾ ಮತ್ತು ನೀಲ್ ಭಟ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಚಾಲ್ತಿಯಲ್ಲಿದೆ. ಇದಕ್ಕೆ ಪೂರಕವಾಗಿ ಇವರಿಬ್ಬರ ನಡೆ ಮತ್ತು ನುಡಿ ಕೂಡ ಹಾಗೇ ಇದೆ. ಕಳೆದ ಹಲವು ದಿನಗಳಿಂದ ಜೊತೆಯಾಗಿ ಇಬ್ಬರು ಕಾಣಿಸಿಕೊಂಡಿಲ್ಲ. ಒಟ್ಟಿಗೆ ಇರುವ ಫೋಟೊವನ್ನು ಹಂಚಿಕೊಂಡಿಲ್ಲ. ಹೀಗಾಗಿ ಹಲವರಲ್ಲಿನ ಅನುಮಾನ ಹೆಚ್ಚಾಗಿದೆ. ಹೀಗಿರುವಾಗ ಇದೀಗ ಐಶ್ವರ್ಯ ಶರ್ಮಾ ಏಕಾಂಗಿಯಾಗಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಬ್ಬದ ಸಂಭ್ರಮದ ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ.
ಐಶ್ವರ್ಯ ಶರ್ಮಾ ಹಂಚಿಕೊಂಡ ಈ ಫೋಟೊಗಳಿಂದ ಇವರ ಅಭಿಮಾನಿಗಳ ಆತಂಕ ಈಗ ಇನ್ನೂ ಹೆಚ್ಚಾಗಿದೆ. ಐಶ್ವರ್ಯ ಮತ್ತು ನೀಲ್ ಭಟ್ ಡಿವೋರ್ಸ್ ವಿಚಾರ ಈ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಇದಕ್ಕೆ ಕೈಗನ್ನಡಿ ಎಂಬಂತೆ ಹಲವರು ನೀಲ್ ಎಲ್ಲಿ..? ಎನ್ನುವ ಪ್ರಶ್ನೆಯನ್ನು ಐಶ್ವರ್ಯ ಅವರಲ್ಲಿ ಕೇಳಿದ್ದಾರೆ. ಇಷ್ಟೇ ಅಲ್ಲ ಹಬ್ಬದ ಸಂಭ್ರಮದಲ್ಲಿ ಅವರು ಯಾಕೆ ಭಾಗಿಯಾಗಿಲ್ಲ..? ನಿಜವಾಗಿಯೂ ನೀವು ವಿಚ್ಚೇದನ ಪಡೆಯುತ್ತಿದ್ದೀರಾ..? ಅವರ ಜೊತೆ ಫೋಟೊ ಯಾಕೆ ನೀವು ಹಂಚಿಕೊಳ್ಳುತ್ತಿಲ್ಲ..? ಸೋಶಿಯಲ್ ಮೀಡಿಯಾದಲ್ಲಿ ನೀಲ್ ಯಾಕೆ ಆಕ್ಟಿವ್ ಆಗಿಲ್ಲ..? ಹೀಗೆ ಹತ್ತಾರು ಪ್ರಶ್ನೆಗಳನ್ನು ಸದ್ಯ ಹಲವರು ಐಶ್ವರ್ಯ ಅವರಲ್ಲಿ ಕೇಳುತ್ತಿದ್ದಾರೆ. ಅಭಿಮಾನಿಗಳ ಈ ಪ್ರಶ್ನೆಗಳಿಗೆ ಐಶ್ವರ್ಯ ಉತ್ತರ ಕೊಡುವ ಗೋಜಿಗೆ ಹೋಗಿಲ್ಲ. ಐಶ್ವರ್ಯ ಅವರ ಈ ಮೌನ ಅಭಿಮಾನಿಗಳ ಆತಂಕವನ್ನು ಇನ್ನೂ ಹೆಚ್ಚಿಸಿರುವುದು ಕೂಡ ಸುಳ್ಳಲ್ಲ.