ಚಂದನ್ ಶೆಟ್ಟಿ ಡಿವೋರ್ಸ್ ಬೆನ್ನಲ್ಲೇ ಮತ್ತೊಂದು ಜೋಡಿ ವಿಚ್ಚೇದನ, ಕನ್ನಡಿಗರಿಗೆ ಬಾರಿ‌ ನಿರಾಶೆ

 | 
ಕಕಗ
ಕಿರುತೆರೆಯಲ್ಲಿ ಕಳೆದ ಏಳೆಂಟು ವರ್ಷಗಳಿಂದ ನಟಿ ಅದಿತಿ ಶರ್ಮಾ ಸಕ್ರಿಯರಾಗಿದ್ದಾರೆ. 2018ರಲ್ಲಿ 'ಕಲೀರೀನ್' ಧಾರಾವಾಹಿ ಮೂಲಕ ಅದಿತಿ ಶರ್ಮಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಸದ್ಯ ಬಾಲಿವುಡ್ ಕಿರುತೆರೆಯಲ್ಲಿ ಯಶಸ್ವಿಯಾಗಿರುವ ಅದಿತಿ ಶರ್ಮಾ ಇದೀಗ ದಾಂಪತ್ಯ ಮುರಿದುಬಿದ್ದ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಅಷ್ಟಕ್ಕೂ ಇವರ ಮದುವೆ ಮುರಿದುಬೀಳಲು ಅದಿತಿಗೆ ಇದ್ದ ಅಕ್ರಮ ಸಂಬಂಧವೇ ಕಾರಣವಂತೆ.
ಬಾಲಿವುಡ್ ಕಿರುತೆರೆ ನಟಿ ಅದಿತಿ ಶರ್ಮಾ ದಾಂಪತ್ಯ ಬದುಕಿನಲ್ಲಿ ಬಿರುಗಾಳಿ ಬೀಸಿದೆ. ನಾಲ್ಕು ತಿಂಗಳ ಹಿಂದೆ ನಡೆದ ಮದುವೆ ಈಗ ಡಿವೋರ್ಸ್ ಹಂತ ತಲುಪಿದೆ. ಅಭಿನೀತ್ ಕೌಶಿಕ್ ಮತ್ತು ಅದಿತಿ ಶರ್ಮಾ ಬಹಳ ಗುಟ್ಟಾಗಿಯೇ ಮದುವೆ ಆಗಿದ್ದರು. ಆದರೆ ನಾಲ್ಕೇ ತಿಂಗಳಲ್ಲೇ ಮದುವೆ ಮುರಿದುಬೀಳುವ ಹಂತ ತಲುಪಿದೆ. ಅಷ್ಟಕ್ಕೂ ಈ ದಂಪತಿಯ ಸಂಬಂಧ ಹದಗೇಡಲು ಕಾರಣ, ನಟಿ ಅದಿತಿ ಶರ್ಮಾಗೆ ಇದ್ದ ಮತ್ತೊಂದು ಸಂಬಂಧ.
ಅಭಿನೀತ್ ಕೌಶಿಕ್ ಜೊತೆಗೆ ಕಳೆದ ವರ್ಷ ನವೆಂಬರ್ 12ರಂದು ಅದಿತಿ ಶರ್ಮಾ ಗುಟ್ಟಾಗಿ ಮದುವೆ ಆಗಿದ್ದರು. ಅದಕ್ಕೂ ಈ ಜೋಡಿ ಹಲವು ಸಮಯದಿಂದ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಅದಕ್ಕಾಗಿ ಈ ಜೋಡಿ 5ಬಿಎಚ್‌ಕೆ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ಇದ್ದರು. ಅಭಿನೀತ್‌ಗೆ ಮದುವೆ ಆಗೋಣ ಎಂದು ಅದಿತಿಯೇ ಪದೇಪದೇ ಒತ್ತಾಯ ಮಾಡಿದ್ದರಂತೆ. ಆ ಪರಿಣಾಮ ಈ ಮದುವೆ ನಡೆದಿತ್ತು ಎಂದು ಅಭಿನೀತ್ ಪರ ವಕೀಲರು ತಿಳಿಸಿದ್ದಾರೆ. ಅಲ್ಲದೆ, ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಅದಿತಿ ಮತ್ತು ಅಭಿನೀತ್ ಮದುವೆ ಆಗಿದ್ದರಂತೆ.
ಈ ಮಧ್ಯೆ ಅಪೊಲ್ಲೆನಾ ಧಾರಾವಾಹಿಯಲ್ಲಿ ಅದಿತಿ ಶರ್ಮಾ ನಟಿಸುತ್ತಿದ್ದಾರೆ. ಅದೇ ಧಾರಾವಾಹಿಯಲ್ಲಿ ಶ್ಲೋಕ್ ಪಾಂಡೆ ಎಂಬ ಪಾತ್ರ ಮಾಡುತ್ತಿರುವ ನಟ ಸಮರ್ಥ್ಯ ಗುಪ್ತಾ ಜೊತೆ ಅದಿತಿ ಶರ್ಮಾಗೆ ಅಕ್ರಮ ಸಂಬಂಧ ಇತ್ತು ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ಅದಿತಿ ಮತ್ತು ಸಮರ್ಥ್ಯ ಗುಪ್ತಾ ಖಾಸಗಿಯಾಗಿ ಆಪ್ತ ಕ್ಷಣಗಳನ್ನು ಕಳೆಯುವಾಗ ಅಭಿನೀತ್‌ಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ವಿಚಾರವನ್ನು ಕೂಡ ಅಭಿನೀತ್‌ ಪರ ವಕೀಲ ರಾಕೇಶ್ ಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.