ತಮ್ಮನ ಬೆನ್ನಲ್ಲೇ ಅಣ್ಣ ರಾಘವೇಂದ್ರ ಇ ಹಲೋಕ, ಇಡೀ ಕುಟುಂಬಕ್ಕೆ ಸೂತಕದ ವಾತಾವರಣ

 | 
Bs

ಇತ್ತೀಚಿನ ದಿನಗಳಲ್ಲಿ ಹಲವಾರು ಕಿರುತೆರೆಯ ಕಲಾವಿದರು ಇಹಲೋಕ ತ್ಯಜಿಸಿದ್ದಾರೆ. ಹೌದು ಕೆಲವರು ವಯೋಸಹಜ ಕಾಯಿಲೆಗಳಿಂದ ಇನ್ನಿಲ್ಲವಾದರೆ ಇನ್ನು ಕೆಲವರು ಅನಿರೀಕ್ಷಿತವಾಗಿ ನಮ್ಮನ್ನು ಅಗಲಿದ್ದಾರೆ. ಇದೀಗ ಟಿವಿ ನಿರೂಪಕ, ರಂಗಭೂಮಿ ಕಲಾವಿದ ರಾಘವೇಂದ್ರ ನೈರಿ ಸಾಲಿಗ್ರಾಮ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿರುತ್ತಾರೆ.

ಸಾಲಿಗ್ರಾಮ ಬಡಾಹೋಳಿಯ ಕೇಶವ ನೈರಿ ಮತ್ತು ಬೇಬಿ ನೈರ್ತಿ ದಂಪತಿಗಳ ಪುತ್ರರಾಗಿದ್ದ ರಾಘವೇಂದ್ರ ನೈರಿಯವರು ಸ್ಥಳೀಯ ಟಿವಿ ಚಾನೆಲನಲ್ಲಿ ಹಲೋ ಡಾಕ್ಟರ್ ಸೇರಿದಂತೆ ಹಲವಾರು ಜನಪ್ರಿಯ ಕಾರ್ಯಕ್ರಮ ನಿರೂಪಣೆ ಮಾಡಿದ್ದರು. ಕಲಾರಂಗ ಕಾರ್ಕಡ ಮತ್ತು ಕಲಾವೇದಿಕೆ ಸಾಲಿಗ್ರಾಮದ ನಾಟಕ ತಂಡದಲ್ಲಿ ನಾಯಕಿ ಪಾತ್ರ ಮಾಡಿ ಜನಮನ ಸೂರೆ ಮಾಡಿದ್ದರು. 

ಹೆಂಡತಿ ಮತ್ತು ಓರ್ವ ಪುತ್ರಿ ಹಾಗೂ ತಂದೆ, ತಾಯಿ, ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನುಅಗಲಿರುತ್ತಾರೆ. ಇವರಿಗೆ ಕೇವಲ 40 ವರ್ಷ ವಯಸ್ಸಾಗಿತ್ತು. ಇವರು ಮೊದಲಿನಿಂದಲೂ ದೂರದರ್ಶನ ಪ್ರಿಯರಾದ ಕಾರಣ ಅದರಲ್ಲಿ ಭಾಗವಹಿಸುವ ಆಸಕ್ತಿಯನ್ನು ಹೊಂದಿದ್ದರು. ಹಾಗೂ ಹೊಸ ಪಾತ್ರಗಳ ಮಾಡಿ ಜನ ಮನ ಗೆಲ್ಲಬೇಕು ಎಂಬುದು ಇವರ ಗುರಿಯಾಗಿತ್ತು. ಕೆಲವು ಸಾಹಿತ್ಯಗಳನ್ನು ಹಾಗೂ ನಾಟಕದ ಡೈಲಾಗ್ ಗಳು ಕೂಡ ಇವರು ರಚಿಸಿದ್ದಾರೆ. 

ಅತಿ ಉತ್ಸಾಹಿ ಯುವಕರಾಗಿದ್ದ ಇವರು ಹಲೋ ಡಾಕ್ಟರ್ ಕಾರ್ಯಕ್ರಮವನ್ನು ಬಹಳ ಚಂದವಾಗಿ ನಡೆಸಿಕೊಡುತ್ತಿದ್ದರು. ಆದರೆ ಇದೀಗ ಎಲ್ಲರನ್ನೂ ಬಿಟ್ಟು ಅಗಲಿ ಹೋಗಿರುವುದು ತುಂಬಲಾರದ ನಷ್ಟವಾಗಿದೆ. ಚಿತ್ರರಂಗದ ಹಲವಾರು ಕಲಾವಿದರು ಇವರ ಸಾವಿಗೆ ಕಂಬನಿ ಮಿಡಿದಿದ್ದಾರೆ. ನಾಟಕ ಕಂಪನಿ ಕಲಾವಿದರು ಕೂಡ ಇವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.