ಲೀಲಾವತಿ ಅಮ್ಮನ ಬಳಿಕ ಮತ್ತೊಂದು ನುಂಗಲಾರದ ನಷ್ಟ, ಕ.ಣ್ಣೀರು ಕರುನಾಡು

 | 
Hbh

ದಕ್ಷಿಣ ಭಾರತದ ಜನಪ್ರಿಯ ನಟಿ ಹೇಮಾ ಚೌಧರಿ ಅವರು ಬ್ರೈನ್‌ ಹೆಮರೇಜ್‌ನಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ವಿದೇಶದಲ್ಲಿರುವ ಮಗನ ಆಗಮನಕ್ಕಾಗಿ ಕುಟುಂಬದವರು ಕಾಯುತ್ತಿರುವುದಾಗಿ ವರದಿಗಳು ತಿಳಿಸಿವೆ. ಇತ್ತೀಚೆಗೆ ನಟಿ ಲೀಲಾವತಿ ಪುಣ್ಯತಿಥಿ ಸಂದರ್ಭದಲ್ಲಿ ಆಗಮಿಸಿ ವಿನೋದ್‌ ರಾಜ್‌ಗೆ ಸಾಂತ್ವಾನ ಹೇಳಿದ್ದ ನಟಿ ಇದೀಗ ಬ್ರೈನ್‌ ಹೆಮರೇಜ್‌ನಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ನಟಿ ಹೇಮಾ ಚೌಧರಿ ಅವರು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಡಾ. ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌, ಶಂಕರ್‌ನಾಗ್‌, ಅನಂತ್‌ನಾಗ್‌, ರವಿಚಂದ್ರನ್‌ ಮುಂತಾದ ಪ್ರಮುಖ ನಟರ ಜತೆ ನಟಿಸಿದ್ದಾರೆ. ಕಮಲ್‌ ಹಾಸನ್‌, ಚಿರಂಜೀವಿ, ಮೋಹನ್‌ ಬಾಬು, ಪ್ರೇಮ್‌ ನಜೀರ್ ಮುಂತಾದವರ ಜತೆಯೂ ನಟಿಸಿದ್ದಾರೆ.

ನಟಿ ಹೇಮಾ ಚೌಧರಿ ಅವರು ಕನ್ನಡದಲ್ಲಿ 1976ರ ವಿಜಯವಾಣಿಯಿಂದ, ಶುಭಾಶಯ, ದೀಪಾ, ದದೇವರ ದುಡ್ಡು, ಶ್ರೀದೇವಿ, ಅನುಬಂಧ, ವಂಶಜ್ಯೋತಿ, ವರದಕ್ಷಿಣೆ, ನಾರದ ವಿಜಯ, ನನ್ನ ರೋಷ ನೂರು ವರುಷ, ಮಂಕುತಿಮ್ಮ, ಶ್ರೀ ರಾಘವೇಂದ್ರ ವೈಭವ, ಗುರು ಶಿಷ್ಯರು, ಗಾಳಿಮಾತು, ಅವಳಿ ಜವಳಿ, ಪ್ರೇಮಾ ಮಠಸಾರ, ಕಣ್ಣು ತೆರೆಸಿದ ಹೆಣ್ಣು, ಜಿಮ್ಮಿಗಲ್ಲು, ಗರುಡಾ ರೇಖೆ, ತಿರುಗು ಬಾಣ, ಕ್ರಾಂತಿಯೋಗಿ ಬಸವಣ್ಣ, ಯಾರಿವನು.ಮುಂತಾದ 90ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 

ಕನ್ನಡದಲ್ಲಿ ಇವರು ಅಮೃತವರ್ಷಿಣಿ ಧಾರಾವಾಹಿ ಮೂಲಕ ಇತ್ತೀಚೆಗೆ ಹೆಚ್ಚು ಜನಪ್ರಿಯತೆ ಪಡೆದಿದ್ದರು ಅಮೃತವರ್ಷಿಣಿ ಧಾರಾವಾಹಿಯಲ್ಲಿ ಅತ್ತೆ ಶಕುಂತಲಾ ದೇವಿಯಾಗಿ ನಟಿಸಿದ್ದರು. ಇವರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. 

ಸುವರ್ಣ ರತ್ನ ಪ್ರಶಸ್ತಿ, ಸುವರ್ಣ ಪರಿವಾರ ಜನಮೆಚ್ಚಿದ ತಾರೆ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸದ್ಯ ಇವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗೆ ಸ್ಪಂಧಿಸುತ್ತಿಲ್ಲ. ವಿದೇಶದಿಂದ ಮಗನ ಆಗಮನಕ್ಕಾಗಿ ಕುಟುಂಬದ ಜನರು ಕಾಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.