ಲೀಲಾವತಿ ಮ.ರಣದ ಬೆನ್ನಲ್ಲೇ ಮತ್ತೊಂದು ದು ರಂತ, ಓಡೋಡು ಬಂದ ದರ್ಶನ್

 | 
Xfg

ಇತ್ತೀಚಿಗಷ್ಟೇ ನಟಿ ಲೀಲಾವತಿ ಅವರನ್ನು ಕಳೆದುಕೊಂಡು ದುಃಖದಲ್ಲಿರುವ ಕನ್ನಡ ಚಿತ್ರರಂಗ ಇದೀಗ ಮತ್ತೊಮ್ಮೆ ನೋವಿನ ಮಡುವಿನಲ್ಲಿ ಬಿದ್ದಿದೆ. ಹೌದು ಹೆಸರಾಂತ ನಟಿ ಭಾರತಿ ವಿಷ್ಣುವರ್ಧನ್ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.

ಇನ್ನು ಕೆಲ ದಿನಗಳ ಹಿಂದಷ್ಟೇ ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರತೀ ವಿಷ್ಣುವರ್ಧನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ಅಳಿಯ ಅನಿರುದ್ಧ್ ಮಾಹಿತಿ ನೀಡಿದ್ದರು. ಮಂಡಿನೋವಿನಿಂದ ಭಾರತಿ ಅಮ್ಮ ಹಾಸಿಗೆ ಹಿಡಿದಿದ್ದಾರೆ. ಅವರಿಗೆ ಊಟವನ್ನು ಹೆಚ್ಚಾಗಿ ತಿನ್ನಲು ಆಗ್ತಿಲ್ಲ. ನಿಶಕ್ತರಾಗಿದ್ದಾರೆ. ಅಮ್ಮನ ಆರೋಗ್ಯ ಸರಿಯಿಲ್ಲ. ಅನಾರೋಗ್ಯ ಕಾಡುತ್ತಿದೆ ಎಂದಿದ್ದಾರೆ.

ಇದೀಗ ನಟ ದರ್ಶನ್ ಅವರು ಪ್ರೀತಿಯಿಂದ ಭಾರತಿ ವಿಷ್ಣುವರ್ಧನ್ ಅವರ ಅರೋಗ್ಯ ವಿಚಾರಿಸಿದ್ದು ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ.ಕೆಲ ದಿನಗಳಿಂದ ಭಾರತೀ ವಿಷ್ಣುವರ್ಧನ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2 ತಿಂಗಳಿಂದ ಅವರು ಎಲ್ಲಿಗೂ ಹೋಗಿಲ್ಲ. ಮನೆಯಲ್ಲಿಯೇ ಬೆಡ್ ರೆಸ್ಟ್ ತೆಗೆದುಕೊಳ್ತಿದ್ದಾರೆ ಎಂದು ಅನಿರುದ್ಧ್ ಹೇಳಿದ್ದಾರೆ.

ವಯೋಸಹಜ ಸಮಸ್ಯೆಗಳಿಂದ ನಟಿ ಭಾರತಿ ವಿಷ್ಣುವರ್ಧನ್ ಬಳಲುತ್ತಿದ್ದಾರೆ. ಎಲ್ಲರ ಹಾರೈಕೆಯಿಂದ ಬೇಗ ಗುಣ ಮುಖರಾಗ್ತಾರೆ ಎನ್ನುವ ನಂಬಿಕೆ ನಮಗಿದೆ ಎಂದು ನಟ ದರ್ಶನ್ ಅವರು ಭಾರತಿ ವಿಷ್ಣುವರ್ಧನ್ ಅವರ ಮಗಳಾದ ಕೀರ್ತಿ ಅವರಿಗೆ ಧೈರ್ಯ ಹೇಳಿದ್ದಾರೆ. 

ಇನ್ನೇನು ಕೆಲವೇ ದಿನಗಳಲ್ಲಿ ಕಾಟೇರಾ ಸಿನೆಮಾ ಬಿಡುಗಡೆ ಆಗಲಿದ್ದು ಅದರ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಬ್ಯುಸಿ ಇದ್ದರೂ ದರ್ಶನ್ ಅವರು ಭಾರತಿ ಅವರ ಅರೋಗ್ಯ ವಿಚಾರಿಸಿದ್ದು ಆಭಿಮಾನಿಗಳಿಗೆ ಸಂತೋಷವಾಗಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.