ನಳೀನ್ ಕುಮಾರ್ ಮಾಡಿದ ಅಭಿವೃದ್ಧಿ ಕೆಲಸ ನೋಡಿ ಮೊದಲೇ ಸೋಲಿನ ಸುಳಿವು ಕೊಟ್ಟಿದ್ದ ದೈವ

 | 
Usuus

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಈ ಬಾರಿ ಟಿಕೆಟ್‌ ಕೈತಪ್ಪಿದೆ. ಅವರ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್‌ ಬ್ರಿಜೇಶ್ ಚೌಟರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲ್‌ ಸ್ಪರ್ಧೆಗೆ ಸ್ವತಃ ಬಿಜೆಪಿ ಪಕ್ಷದಿಂದಲೇ ವಿರೋಧ ವ್ಯಕ್ತವಾಗಿತ್ತು ಅನ್ನೋದು ಹೊಸ ಸಂಗತಿಯೇನಲ್ಲ. 

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ನಂತರ ನಳಿನ್ ವಿರುದ್ಧ ಆಕ್ರೋಶ ಜೋರಾಗಿಯೇ ಕೇಳಿ ಬರ್ತಿದೆ.ನಳಿನ್ ಕುಮಾರ್ ಸ್ಪರ್ಧಿಸಿದರೆ ಬಿಜೆಪಿಯಿಂದಲೇ ವಿರೋಧ ವ್ಯಕ್ತವಾಗುತ್ತೆ ಅನ್ನೋದನ್ನು ಅರಿತ ಬಿಜೆಪಿ ಹೈಕಮಾಂಡ್ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬ್ರಿಜೇಶ್‌ ಚೌಟರನ್ನು ಹಾಕುವ ಮೂಲಕ ಹೊಸ ಅಭ್ಯರ್ಥಿಯನ್ನು ನೇಮಕ ಮಾಡಿದೆ.

ಆದರೆ ನಳಿನ್ ಕುಮಾರ್ ಕಟೀಲ್‌ ಈ ಬಾರಿ ಲೋಕಸಭಾ ಚುನಾವಣೆಯ ಟಿಕೆಟ್‌ ಕೈತಪ್ಪುತ್ತೆ ಅನ್ನೋದರ ಬಗ್ಗೆ ಸುಮಾರು ವಾರಗಳ ಹಿಂದಯೇ ತುಳುನಾಡಿನ ದೈವ ಎಚ್ಚರಿಕೆ ನೀಡಿತ್ತು ಅನ್ನೋದು ಈಗ ಬಹಿರಂಗವಾಗಿದೆ.ಈ ಹಿಂದೆ ವಯನಾಟ್ ಕುಲವನ್ ದೈವದ ನೇಮೋತ್ಸವದಲ್ಲಿ ಭಾಗಿಯಾಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ದೈವದ ಪ್ರಸಾದ ಸ್ವೀಕರಿಸಿದ್ದರು. 

ಈ ವೇಳೆ ದೈವ ನಿನಗೆ ವೈರಿಗಳು ತುಂಬಾನೇ ಇದ್ದಾರೆ, ಆದರೆ ಯಾವುದಕ್ಕೂ ಕುಗ್ಗಬೇಡ ಎಂದು ಎಚ್ಚರಿಕೆ ನೀಡಿತ್ತು. ನಳಿನ್ ಕೈ ಹಿಡಿದು ಹೇಳಿದ್ದ ವಿಷ್ಣುಮೂರ್ತಿ ದೈವ, ದಾಯಾದಿಗಳೇ ಪರಸ್ಪರ ವೈರಿಗಳಾಗಿ ಕುರುಕ್ಷೇತ್ರ ಯುದ್ಧ ನಡೆಯಲಿಲ್ಲವೇ? ಅಂದು ಪಾರ್ಥನಿಗೂ ಧರ್ಮ ಕಾಪಾಡುವಂತೆ ನಾನು‌ ಸಲಹೆ ನೀಡಿದ್ದೆ. ವೈರಿಗಳು ಎಷ್ಟಿದ್ದರೇನು ಕೊನೆಗೆ ಸತ್ಯ, ಧರ್ಮ ಮಾತ್ರ ಗೆಲ್ಲುವುದು ಎಂದು ದೈವ ಹೇಳಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.