3ನೇ ಬಾರಿ ಮದುವೆಯಾಗಿ ಮೊದಲ ರಾತ್ರಿ ‌ಮುಗಿದ ಬಳಿಕ ಮತ್ತೊಬ್ಬನ ಜೊತೆ ಎಸ್ಕೇಪ್

 | 
H

ಅವಳಿಗೆ ಒಬ್ಬನ ಜತೆಗೇ ಮೂರು ಬಾರಿ ಮದುವೆಯಾಗಿತ್ತು . ಅವನೇ ಬೇಕು ಅಂತ ಮನೆಯವರ ವಿರೋಧ ಕಟ್ಟಿಕೊಂಡು ಓಡಿ ಹೋಗಿ ಮದುವೆಯಾಗಿದ್ದಳು. ಆದರೆ, ಅವನನ್ನು ಮದುವೆಯಾಗಿದ್ದೇ ತಡ ಸುಂದರಿಯ ಚಮಕ್‌ಗಳು ಒಂದಾದ ಮೇಲೊಂದರಂತೆ ಬೆಳಕಿಗೆ ಬಂತು. ಮದುವೆಯಾದ ಮೂರನೇ ದಿನಕ್ಕೆ ಆಕೆ ಕಾಣೆಯಾಗಿ ಇನ್ನೊಬ್ಬನ ಜತೆ ಕಾಣಿಸಿಕೊಂಡಿದ್ದಾಳೆ. ಜತೆಗೆ ಇನ್ನೂ ಮೂವರನ್ನು ಒಬ್ಬರಾದ ಮೇಲೊಬ್ಬರಂತೆ ಪಾಳಿಯಲ್ಲಿ ಲವ್‌ ಮಾಡ್ತಿದ್ದಾಳಂತೆ  ಈ ಪಾಂಚಾಲಿ!

ಹೀಗೆ ಏಕಕಾಲದಲ್ಲಿ ಹಲವರನ್ನು ಮೆಂಟೇಯ್ನ್‌ ಮಾಡುತ್ತಿರುವ ಈ ಪಾಂಚಾಲಿಯ ಹೆಸರು ಮನುಜಾ! ಅವಳನ್ನು ಮೂರು ಮೂರು ಬಾರಿ ಮದುವೆಯಾದವನು ಮಂಜುನಾಥ. ಅವನು ಅವಳಿಗೆ ಮಾವನಾಗಬೇಕು. ಮಾವ ಮಾವ ಅಂತ ಬೆನ್ನು ಹತ್ತುತ್ತಿದ್ದ ಆಕೆ ಕೊನೆಗೆ ಅವನಿಗೇ ಚಳ್ಳೆ ಹಣ್ಣು ತಿನ್ನಿಸಿದ್ದಾಳೆ. ಅಮಾಯಕ ಮಾವ ಹೆಂಡ್ತಿ ಹೆಂಡ್ತಿ ಅಂತ ಕನವರಿಸುತ್ತಿದ್ದಾನೆ. ಮೂಲತಃ ಬೆಂಗಳೂರಿನ ದೊಡ್ಡಕಲ್ಲಸಂದ್ರದ ನಿವಾಸಿಗಳಾದ ಮಂಜುನಾಥ್ ಮತ್ತು ಮನುಜಾ ನಡುವೆ ಸಣ್ಣ ವಯಸ್ಸಿನಿಂದಲೇ ಪ್ರೀತಿ ಇತ್ತು. 

ಆದರೆ ಮನುಜಾಳ ಮನೆಯವರಿಗೆ ಅವಳನ್ನು ಮಂಜುನಾಥ್‌ಗೆ ಮದುವೆ ಮಾಡಿಕೊಡಲು ಇಷ್ಟವಿರಲಿಲ್ಲ. ಆದರೆ, ಅವಳು ಮಾತ್ರ ಅವನೇ ಬೇಕು ಎಂದು ಹಠ ಹಿಡಿದಿದ್ದಳು. ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರು ಎರಡು ಬಾರಿ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದಾರೆ. ಆದರೆ, ಹುಡುಗಿ ಮನೆಯವರು ಎರಡು ಸಲವೂ ಆಕೆಯನ್ನು ಬಿಡಿಸಿಕೊಂಡು ಹೋಗಿ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಅಜ್ಜಿಗೆ ಹುಷಾರಿಲ್ಲ, ಅವರಿಗೆ ಸರಿಯಿಲ್ಲ.. ಹೀಗೆ ಕಥೆ ಕಟ್ಟಿ ಅವರನ್ನು ದೂರ ಮಾಡಿದ್ದರು. ಕೊನೆಯದಾಗಿ ಕರೆದೊಯ್ಯುವ ವೇಳೆ ಕೆಲವೇ ದಿನದಲ್ಲಿ ಮದುವೆ ಮಾಡುವುದಾಗಿ ಮಾತು ಕೊಟ್ಟಿದ್ದರು. ಆದರೆ, ನಾಲ್ಕೈದು ವರ್ಷವಾದರೂ ಮಾಡಿ ಕೊಟ್ಟಿರಲಿಲ್ಲ.

ಕೆಲವು ದಿನಗಳ ಹಿಂದೆ ಆಕೆ ಉಟ್ಟ ಬಟ್ಟೆಯಲ್ಲೇ ಮನೆ ಬಿಟ್ಟು ಬಂದಿದ್ದ ಆಕೆ ಇನ್ಯಾವತ್ತೂ ಹೋಗಲ್ಲ ಎಂದಿದ್ದಳು. ಕಳೆದ ಜನವರಿ 26ರಂದು ಅವರಿಬ್ಬರ ಮದುವೆ ನಡೆದೇ ಹೋಯಿತು. ಮನುಜಳ ಮನೆಯವರು ತಲಘಟ್ಟಪುರ ಪೊಲೀಸ್‌ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿದರು. ಠಾಣೆಗೆ ಬಂದ ಮನುಜ ತಾನು ಮಂಜುನಾಥ್‌ ಜತೆಗೇ ಇರುವುದಾಗಿ ಹೇಳಿದ್ದಳು. ಅವಳ ಹಠಕ್ಕೆ ಮನೆಯವರೂ ಒಪ್ಪಿದರು. ಆದರೆ, ಒಮ್ಮೆ ಅಜ್ಜಿಗಾಗಿ ಮನೆಗೆ ಬಂದು ಹೋಗು ಎಂದಿದ್ದರು. ಹಾಗೆ ತವರು ಮನೆಗೆ ಹೋದವಳು ಮೂರು ದಿನದ ಬಳಿಕ ಮಾವ ಮಂಜುನಾಥ್‌ ಮನೆಗೆ ಮರಳಿದ್ದಳು.

ಅದೆಷ್ಟೋ ವರ್ಷಗಳ ತಪಸ್ಸು ಫಲಿಸಿತು ಎಂಬಂತೆ ಅವರಿಬ್ಬರೂ ಸಂಭ್ರಮಿಸಿದು. ಆದರೆ, ಈ ಸಂಭ್ರಮ ತುಂಬ ದಿನ ಉಳಿಯಲಿಲ್ಲ. ಯಾಕೆಂದರೆ, ಮದುವೆಯಾದ ಮೂರನೇ ದಿನ ಬೆಳಗ್ಗೆ ಎದ್ದು ನೋಡಿದರೆ ಮನುಜಾ ಮನೆಯಲ್ಲಿ ಇರಲಿಲ್ಲ!ನಿಜವಾಗಿ ಆಗಿದ್ದೇನೆಂದರೆ, ಮಂಜುನಾಥನನ್ನು ಮದುವೆಯಾಗಿ ಮನೆಗೆ ಹೋಗಿ ಮರಳಿದ್ದ ಆಕೆ ಮುಂದಿನ ಒಂದೇ ಗಂಟೆಯಲ್ಲಿ ಇನ್ನೊಬ್ಬನ ಜತೆ ಕಾಣೆಯಾಗಿದ್ದಳು! ಈಗ ಹೆಂಡ್ತಿ ಕಾಣೆಯಾಗಿದ್ದಾಳೆ ಎಂಬ ದೂರು ನೀಡುವ ಸರದಿ ಮಂಜುನಾಥನದ್ದು!

ಪೊಲೀಸರು ನಾಪತ್ತೆ ಕೇಸು ದಾಖಲಿಸಿಕೊಂಡು ಆಕೆಯನ್ನು ಬೆನ್ನು ಹತ್ತಿದರೆ ಆಕೆ ನಿಶಾಂತ್‌ ಎಂಬ ಯುವಕನ ಜತೆ ಪೊಲೀಸ್‌ ಠಾಣೆಗೆ ಹಾಜರಾಗಿದ್ದಳು!ಮಂಜುನಾಥ್‌ ನನ್ನನ್ನು ಹೆದರಿಸಿ ಬೆದರಿಸಿ ಮದುವೆ ಮಾಡಿಸಿಕೊಂಡಿದ್ದಾರೆ. ನನಗೆ ಮಂಜುನಾಥ್ ಜೊತೆ ಮದುವೆ ಇಷ್ಟ ಇಲ್ಲ. ಹೀಗಾಗಿ ನಾನು ಮಂಜುನಾಥ್‌ ಜತೆ ಹೋಗಲ್ಲ. ಬೇಕಿದ್ದರೆ ಪೋಷಕರ ಜತೆಗೆ ಹೋಗ್ತೀನಿ ಎಂದು ನಾಟಕ ಶುರು ಮಾಡಿದ್ದಾಳೆ.ಈ ನಡುವೆ ಮಂಜುನಾಥನ ಗೋಳಾಟ ಹೇಳತೀರದಾಗಿದೆ. ನನಗೆ ಮನುಜಾಳಿಂದ ಅನ್ಯಾಯವಾಗಿದೆ. ನನಗೆ ಮದುವೆ ಹೆಸರಿನಲ್ಲಿ ವಂಚನೆ ಮಾಡಿದ್ದಾಳೆ. ನನಗೆ ನ್ಯಾಯ ಬೇಕು ಎಂದು ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದ್ದಾನೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.