ಕರ್ನಾಟಕದಲ್ಲಿ ಹೊಸ ಸರ್ಕಾರ ಬಂದ ಮೇಲೆ ಭ್ರಷ್ಟಾ ಅಧಿಕಾರಿಗಳಿಗೆ ಮೈ ನಡುಕ

 | 
Vcf

ಬೇಲಿಯೇ ಎದ್ದು ಹೊಲ ಮೆಯ್ದಂತೆ ಅನ್ನೋದ್ದನ್ನ ಕೇಳಿರ್ತಿರಿ ಆದರೆ ಈ ಘಟನೆ ಅದಕ್ಕೆ ಪ್ರತ್ಯಕ್ಷ ಸಾಕ್ಷಿ.ಚಿನ್ನಾಭರಣದ ಅಂಗಡಿ ಮಾಲೀಕನಿಂದ 5 ಲಕ್ಷ ರೂ. ಹಣ ಪಡೆಯುತ್ತಿದ್ದ ವೇಳೆ ಐಟಿ ಅಧಿಕಾರಿಯೊಬ್ಬನನ್ನು ರೆಡ್‍ಹ್ಯಾಂಡ್ ಆಗಿ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಐಟಿ ಅಧಿಕಾರಿ ಅವಿನಾಶ್ ಟೊನಪೆ ಎಂಬಾತ ಚಿಕ್ಕೋಡಿಯ ಅಂಕಲಿಯ ಪರಶುರಾಮ್ ಬಂಕಾಪುರ ಎಂಬವರ ಬಳಿ 10 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಪರಶುರಾಮ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಯೋಜನೆ ರೂಪಿಸಿದ್ದ ಪೊಲೀಸರು, ಖಾಸಗಿ ಡೆಂಟಲ್ ಕಾಲೇಜ್ ಮೈದಾನದಲ್ಲಿ ಅಧಿಕಾರಿ ಹಣ ಪಡೆಯುತ್ತಿದ್ದ ವೇಳೆ ಸಿನಿಮೀಯ ರೀತಿ ದಾಳಿ ಮಾಡಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. 

ನಾಲ್ಕು ದಿನಗಳ ಹಿಂದೆಯಷ್ಟೇ ಐಟಿ ಅಧಿಕಾರಿ ಅವಿನಾಶ್ ಟೋನಪಿ ನೇತೃತ್ವದ ತಂಡ ಅಂಕಲಿ ಗ್ರಾಮದಲ್ಲಿರುವ ಬಂಕಾಪುರ ಚಿನ್ನದಂಗಡಿ ಮೇಲೆ ದಾಳಿ ಮಾಡಿತ್ತು. ಅದನ್ನೇ ಆಧಾರವಾಗಿ ಇಟ್ಟುಕೊಂಡು ಉಳಿದ ಚಿನ್ನಾಭರಣ ಅಂಗಡಿಗಳಿಗೆ ಇವರು ಹೆದರಿಸುತ್ತಿದ್ದರು ಎನ್ನಲಾಗ್ತಿದೆ. ಹಾಗಾಗಿ ಚಿನ್ನದ ಅಂಗಡಿಯ ಮಾಲೀಕರ ಬಳಿ ಇರುವ ನಿಮ್ಮ ಅಂಗಡಿಗೆ ರೈಡ್ ಮಾಡಬಾರದು
ಎಂದಾದರೆ ನಾನು ಕೇಳಿದಷ್ಟು ನೀಡಿ ಎಂದು ಧಮ್ಕಿ ಬೇರೆ ಹಾಕಿದ್ದರು ಹಾಗಾಗಿ ಚಿನ್ನದ ಅಂಗಡಿಯ ಮಾಲೀಕರು ಕೊಟ್ಟ ಕಂಪ್ಲೇಂಟ್ ಮೇರೆಗೆ ಪೊಲೀಸರು ಅಧಿಕಾರಿಯನ್ನು ವಶಕ್ಕೆ ಪಡೆದಿರುವ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಳಗಾವಿ ಮಾರ್ಕೆಟ್ ವಿಭಾಗದ ಎಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸರು ಅಧಿಕಾರಿಯನ್ನು ಬೆಳಗಾವಿಯ ಎಸಿಪಿ ಕಚೇರಿಗೆ ಕರೆದೊಯ್ದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.