ಕಾಟೇರ ಸಿನಿಮಾ ನೋಡಿ ಕೈ ಎತ್ತಿ ಮುಗಿದ ರಜನಿಕಾಂತ್, 'ನನ್ನ ಜೀವನದಲ್ಲಿ ಇಂತಹ ಸಿನಿಮಾ ನೋಡಿಲ್ಲ'

 | 
G

ಜೈಲರ್ ಅಭೂತಪೂರ್ವ ಯಶಸ್ಸಿನ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಲಾಲ್ ಸಲಾಂ. ಈ ಚಿತ್ರವನ್ನು ರಜನಿ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶಿಸುತ್ತಿದ್ದಾರೆ. ಸಂಕ್ರಾಂತಿ ಹಬ್ಬದಂದು ಚಿತ್ರ ತೆರೆ ತರುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಆದ್ರೀಗ ಲಾಲ್ ಸಲಾಂ ಬಿಡುಗಡೆ ಪೋಸ್ಟ್ ಪೋನ್ ಆಗಿದೆ.

ಹೌದು. ರಜನಿಕಾಂತ್ ಅವರಿಗೆ ಎಲ್ಲ ಭಾಷೆಗಳಲ್ಲಿ ಕೂಡ ಅಭಿಮಾನಿಗಳು ಇದ್ದಾರೆ. ಅವರ ಸಿನೆಮಾ ಎಂದರೇ ಸಾಕು ಥಿಯೇಟರ್ ನಲ್ಲಿ ಬಂದು ನೋಡ್ತಾರೆ. ಅವರಿಗೆ ಇದ್ದಷ್ಟು ಫ್ಯಾನ್ ಬೇಸ್ ಇನ್ಯಾವ ನಟರಿಗೂ ಕೂಡ ಇಲ್ಲ. ಹಾಗಾಗಿ ಅವರ ಚಿತ್ರಗಳು ಒಳ್ಳೆಯ ಕಮಾಯಿ ಮಾಡುತ್ತವೆ. ಜೈಲರ್ ಚಿತ್ರ ಕೂಡ ಉತ್ತಮ ಎನಿಸಿಕೊಂಡಿತ್ತು.

ಆದರೆ ಕರ್ನಾಟಕದಲ್ಲಿ ಬಿಡುಗಡೆ ಆಗಿರುವ ಡಿ ಬಾಸ್ ಚಿತ್ರ ಕಾಟೇರ ಚೆನ್ನಾಗಿ ಓಡುತ್ತಿದೆ. ಹೌದು ಕೇವಲ ಕನ್ನಡ ಭಾಷೆಯಲ್ಲಿ ತೆರೆಕಂಡರೂ ಕೂಡ ಹಲವರ ಶಹಬ್ಬಾಸ್ ಗಳಿಸಿದೆ. ಈ ಹಿಂದೆ ಸಂಗೊಳ್ಳಿ ರಾಯಣ್ಣ ಚಿತ್ರ ಕೂಡ ಹೀಗೇ ಮೋಡಿ ಮಾಡಿತ್ತು.ಮೊದಲ ಒಂದೆರಡು ದಿನಗಳಲ್ಲಿ ಕಾಟೇರನ ಸಕ್ಸಸ್‌ ಕಾಣಿಸಿದರೂ ಚಿತ್ರತಂಡ ಪರಭಾಷೆಗಳತ್ತ ಅಷ್ಟಾಗಿ ಒಲವು ತೋರಲಿಲ್ಲ. 

ಆದರೆ, ಹೊರರಾಜ್ಯ ಮತ್ತು ಹೊರದೇಶಗಳಲ್ಲಿರುವ ಕನ್ನಡಿಗರ ಬೇಡಿಕೆಗೆ ತಕ್ಕಂತೆ ಹೊರರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಕಾಟೇರ ಸಿನಿಮಾ ಬಿಡುಗಡೆ ಮಾಡಲಾಗಿದೆ. ದುಬೈನಲ್ಲಿ ಕಾಟೇರ ಬಿಡುಗಡೆಯಾಗಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸ್ವತಃ ದರ್ಶನ್‌ ದುಬೈಗೆ ಹೋಗಿ ಕರುನಾಡ ಅಧಿಪತಿಯೆಂಬ ಬಿರುದು ಪಡೆದು ವಾಪಸ್‌ ಬಂದಿದ್ದರು.

ದರ್ಶನ್‌ ಅಭಿನಯದ ಇತ್ತೀಚಿನ ಕೆಲವು ಚಿತ್ರಗಳು ನಷ್ಟ ಅನುಭವಿಸದೆ ಇದ್ದರೂ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಹಿಟ್‌ ಆಗಿರಲಿಲ್ಲ. ಆದರೆ, ಕಾಟೇರ ಸಿನಿಮಾವು ಎಲ್ಲರ ನಿರೀಕ್ಷೆಯನ್ನೂ ಮೀರಿ ಸಖತ್‌ ಹಿಟ್‌ ಆಗಿತ್ತು. ಕಾಟೇರ ಸಿನಿಮಾ ಚೆನ್ನಾಗಿದೆಯಂತೆ ಎಂಬ ಸುದ್ದಿ ಬಾಯಿಂದ ಬಾಯಿಗೆ ಹರಡಿ ಸಾಕಷ್ಟು ಕ್ರೇಜ್‌ ಸೃಷ್ಟಿಸಿತ್ತು. ಈದೀಗ ರಜಿನಿ ಕಾಂತ್ ಕೂಡ ಈ ಚಿತ್ರವನ್ನು ನೋಡಿ ಹಾಡಿ ಹೊಗಳಿದ್ದಾರೆ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.