ವೈಷ್ಣವಿ‌ ಗೌಡ ಹಾಗೂ ಅನುಕೂಲ್ ನಡುವೆ ಅಜಗಜಾಂತರ ವಯಸ್ಸಿನ ಅಂತರ

 | 
Mmk
ಸೀತಾರಾಮ ಸೀತಾ ಉರ್ಫ್​ ವೈಷ್ಣವಿ ಗೌಡ ಅಭಿಮಾನಿಗಳಿಗೆ ಅವರ ಮದ್ವೆಯದ್ದೇ ಚಿಂತೆಯಾಗಿತ್ತು. ಯಾವಾಗ ನೋಡಿದ್ರೂ ಅದೇ ಪ್ರಶ್ನೆ ಎದುರಾಗುತ್ತಿತ್ತು. ಆದರೆ ಕೊನೆಗೂ ವೈಷ್ಣವಿ ಎಂಗೇಜ್​ಮೆಂಟ್​  ಮಾಡಿಕೊಂಡಿದ್ದಾರೆ. ಇನ್ನು ಸೀತಾರಾಮ ಸೀತೆಯ ಕಲ್ಯಾಣವೂ ಹತ್ತಿರದಲ್ಲಿಯೇ ಇದೆ. ಸದ್ಯ ಎಂಗೇಜ್​ಮೆಂಟ್​ ರೀತಿಯಲ್ಲಿಯೇ ಮದುವೆಯ ವಿಷಯವನ್ನೂ ಬಿಟ್ಟುಕೊಟ್ಟಿಲ್ಲ ನಟಿ. ಸದ್ಯ ಎಂಗೇಜ್​ಮೆಂಟ್​ ಮಾಡಿಕೊಂಡು ಉಸಿರು ಬಿಡ್ತಾ ಇದ್ದೇನೆ. 
ಮದುವೆಯ ಬಗ್ಗೆ ತಿಳಿಸ್ತೇನೆ. ಇನ್ನೂ ಸಾಕಷ್ಟು ಅರೇಂಜ್​ಮೆಂಟ್​ ಆಗಬೇಕಿದೆ. ಏನೇ ಆದರೂ ಮದುವೆಯ ಸಂಭ್ರಮ ಸಕತ್​ ಫನ್ನಿ ಆಗಿರುತ್ತದೆ ಎಂದಿದ್ದಾರೆ ವೈಷ್ಣವಿ ಗೌಡ. ಅಷ್ಟಕ್ಕೂ  ಮದ್ವೆ ಫಿಕ್ಸ್​ ಆಗಿದ್ದ ವಿಷಯವನ್ನು ಗುಟ್ಟಾಗಿ ಇಟ್ಟಿದ್ದ ನಟಿ ಎಲ್ಲರಿಗೂ ಬಿಗ್​ ಸರ್​ಪ್ರೈಸ್​ ಕೊಟ್ಟಿದ್ದರು.  ಕೊನೆಗೂ ಅವರು ಅದನ್ನು ರಿವೀಲ್​ ಮಾಡಿದರು. 
ಇದಾಗಲೇ ಅವರು ಏರ್​ಪೋರ್ಟ್​ನಲ್ಲಿ ಕೆಲಸ ಮಾಡ್ತಿರೋದಲ್ಲ ಎಂದು ನೋವಿನಿಂದಲೇ ನುಡಿದಿದ್ದರು. ಇದೀಗ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ, ನನ್ನ ಭಾವಿ ಪತಿಯ ಹೆಸರು ಅಕಾಯ್​ ಎನ್ನುತ್ತಾರೆ. ಉದ್ಯಮಿ ಎಂದು ಕೆಲವು ಯೂಟ್ಯೂಬ್​ ಚಾನೆಲ್​ಗಳಲ್ಲಿ ಬರೆಯಲಾಗಿದೆ ಎನ್ನುತ್ತಲೇ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಹೆಸರು ಅಕಾಯ್​ ಅಲ್ಲ, ಅನುಕೂಲ್​ ಎಂದು. ದಯವಿಟ್ಟು ಏನೇನೋ ಪ್ರಸಾರ ಮಾಡಬೇಡಿ. ಅದೆಷ್ಟು ಕಾನ್​ಫಿಡೆಂಟ್​ ಆಗಿ ಹೇಳಿಬಿಡುತ್ತಾರೆ ಎಂದು ಕಂಡರೆ ನನಗೇ ಅಚ್ಚರಿಯಾಗುತ್ತದೆ, ಯಾವುದೇ ಕ್ರಾಸ್​ ಚೆಕ್​  ಮಾಡಿಕೊಳ್ಳುವುದಿಲ್ಲ. 
ಸಂಬಂಧಪಟ್ಟವರನ್ನು ಕೇಳುವುದೂ ಇಲ್ಲ. ಮನಸ್ಸಿಗೆ ಬಂತಂತೆ ಹೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿರುವ ನಟಿ, ಪ್ಲೀಸ್ ಹಾಗೆಲ್ಲಾ ಮಾಡಬೇಡಿ. ಸರಿಯಾದ ವಿಷಯ ಕೇಳಿ ತಿಳಿದುಕೊಂಡು ಬರೆಯಿರಿ. ಈ ಬಗ್ಗೆ ನನ್ನ ಅಮ್ಮನೂ ಇದಾಗಲೇ ಹೇಳಿದ್ದಾರೆ. ಆದರೂ ಹೆಸರು, ಉದ್ಯೋಗ ಸೇರಿದಂತೆ ಬಹುತೇಕ ವಿಷಯಗಳನ್ನು ತಪ್ಪುತಪ್ಪಾಗಿ ಪ್ರಸಾರ ಮಾಡಲಾಗ್ತಿದೆ ಎಂದು ನೋವಿನಿಂದ ನುಡಿದಿದ್ದಾರೆ ವೈಷ್ಣವಿ ಗೌಡ. ಇನ್ನು ಇವರಿಬ್ಬರ ನಡುವೆ 4 ವರ್ಷಗಳ ಅಂತರವಿದೆ ಎಂದು ಹೇಳಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub