ಮದುವೆಯಾದರೆ ಮಗು ಮಾಡಲ್ಲ, ಮನೆ ತುಂಬಾ ನಾಯಿ ಸಾಕುತ್ತೇನೆ ಎಂದ ಅಗ್ನಿಸಾಕ್ಷಿ ಸುಕೃತ ನಾಗ್
Apr 30, 2025, 19:33 IST
|

ಪ್ರತಿಯೊಬ್ಬರ ಜೀವನದಲ್ಲೂ ಲವ್ ಮತ್ತು ಬ್ರೇಕಪ್ ಇದೆಲ್ಲವೂ ಕಾಮನ್ ಎನ್ನುತ್ತಾ ನಟಿ ಸುಕೃತಾ ನಾಗ್ ತಮ್ಮ ಲವ್ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ನಾನು ಲವ್ ಮಾಡಿದ್ದೀನಿ, ಬ್ರೇಕಪ್ ಕೂಡ ಆಗಿದೆ. ಹಾರ್ಟ್ ಬ್ರೇಕ್ ಕೂಡ ಆಗಿದೆ. ಡಿಪ್ರೆಶನ್‌ಗೂ ಹೋಗಿದ್ದೀನಿ, ಥೆರಪಿನೂ ತೆಗೆದುಕೊಂಡಿದ್ದೀನಿ. ಇದೆಲ್ಲವೂ ಜೀವನದ ಒಂದು ಭಾಗ ಅಷ್ಟೇ. ಎರಡೂವರೆ ವರ್ಷದ ಪ್ರೀತಿ, ಬ್ರೇಕಪ್ ಆದಾಗ ತುಂಬಾ ಕಷ್ಟ ಆಯ್ತು. ಒಂದು ವ್ಯಕ್ತಿ ಜೊತೆಗೆ ಇಡೀ ಜೀವನವನ್ನೇ ಪ್ಲ್ಯಾನ್ ಮಾಡಿರುತ್ತೇವೆ ಆ ವ್ಯಕ್ತಿ ದೂರ ಆದಾಗ ಯಾರಿಗೆ ಬೇಜಾರಾಗಲ್ಲ? ನಾವು ಒನ್ನರನೊಬ್ಬರನ್ನು ತುಂಬಾ ಇಷ್ಟ ಪಟ್ಟಿದ್ದೆವು. ಒಂದು ಪಾಯಿಂಟ್‌ನಲ್ಲಿ ಟೇಕನ್ ಫಾರ್ ಗ್ರ್ಯಾಂಟೆಡ್ ಅನ್ನೋದು ಬಂದು ಬಿಡುತ್ತದೆ.
ಕಮಿನ್ಯೂಕೇಶನ್ ಕಮ್ಮಿ ಆಗುತ್ತಾ ಹೋಗುತ್ತೆ. ಜೊತೆಗೆ ಆ ಪ್ರೀತಿ ಕೂಡ ಕಮ್ಮಿ ಆಗುತ್ತಾ ಹೋಗುತ್ತೆ. ನನಗೆ ಪ್ರೀತಿ ತುಂಬಾ ಮುಖ್ಯ, ಪ್ರೀತಿಗಿಂತ ಮುಖ್ಯ ಇನ್ನೇನು ಇಲ್ಲ . ಮಕ್ಕಳಿಗಿಂತ ನಾಯಿ ಸಾಕುವುದೇ ಬೆಸ್ಟ್ ಎಂದು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಸುಕೃತಾ ಹೇಳಿಕೊಂಡಿದ್ದಾರೆ. ಕೋವಿಡ್ ಟೈಮ್‌ನಲ್ಲಿ ಬ್ರೇಕಪ್ ಆಯ್ತು. ಇರ್ತಾರೆ ಜೊತೆಯಲ್ಲಿ ಅಂತ ಗೊತ್ತಾದಾಗ ಗ್ರ್ಯಾಂಟೆಡ್ ಆಗಿ ತೆಗೆದುಕೊಂಡು ಬಿಡುತ್ತಾರೆ. ಈಗೆಲ್ಲಾ ಬ್ರೇಕಪ್‌ಗಳಿಗೆ ಇದು ಕೂಡ ಒಂದು ಕಾರಣ. ವ್ಯಕ್ತಿ ಸಿಗುವುದಕ್ಕೂ ಮೊದಲು ಹಾಕುವ ಎಫರ್ಟ್ಸ್ ಸಿಕ್ಕಿದಮೇಲೆ ಹಾಕುವುದಿಲ್ಲ. ಸಿಗುವುದಕ್ಕೂ ಮೊದಲು ತುಂಬಾ ಎತ್ತರಕ್ಕೆ ವ್ಯಾಲ್ಯೂ ಇರುತ್ತೆ. ಸಿಕ್ಕಿದ ಮೇಲೆ ಆ ವ್ಯಾಲ್ಯೂ ತುಂಬಾ ಕೆಳಗೆ ಹೋಗುತ್ತದೆ ಎಂದಿದ್ದಾರೆ ಸುಕೃತಾ ನಾಗ್
ಜೀವನ ಮತ್ತು ಕೆಲಸದ ಒತ್ತಡದ ನಡುವೆ ಅವರ ಕಡೆಯಿಂದಲೇ ಟೇಕನ್ ಫಾರ್ ಗ್ರ್ಯಾಂಟೆಡ್ ವರ್ತನೆ ಶುರುವಾಗಿದ್ದು. ನಮ್ಮ ಹಣೆಯ ಬರಹದಲ್ಲಿ ಯಾರ ಜೊತೆಗೆ ಬದುಕಬೇಕು ಅಂತ ಬರೆದಿರುತ್ತದೆಯೋ ಅದೇ ಆಗೋದು. ಅದು ನನ್ನ ಜೀವನದ ಬ್ಯೂಟಿಫುಲ್ ಪಾರ್ಟ್ ಆಗಿ ಉಳಿದುಕೊಂಡಿದೆ. ಬ್ರೇಕಪ್ ಆದಮೇಲೆ ಅವರು ಮತ್ತೆ ನನ್ನನ್ನು ಕಾಂಟ್ಯಾಕ್ಟ್ ಮಾಡಲಿಲ್ಲ ನಾನು ಕೂಡ ಮಾಡಲಿಲ್ಲ. ಅವರ ಲೈಫ್‌ನಲ್ಲಿ ಅವರು ಚೆನ್ನಾಗಿದ್ದಾರೆ ಮತ್ತು ನನ್ನ ಜೀವನದಲ್ಲಿ ನಾನು ಚೆನ್ನಾಗಿದ್ದೀನಿ ಎಂದು ಸುಕೃತಾ ನಾಗ್ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,15 May 2025