ನಮ್ಮ ಶಿವಣ್ಣನ ಕಾಲಿಗೆ ಬಿದ್ದ ಐಶ್ವರ್ಯ ರೈ ಮಗಳು, ತಾಯಿ ಕಲಿಸಿದ ಸಂಸ್ಕಾರಕ್ಕೆ ಶಬ್ಬಾಸ್ ಎಂದ ನೆಟ್ಟಿಗರು

 | 
ಬಹ
 ಕಳೆದ ಕೆಲ ದಿನಗಳಿಂದ ಐಶ್ವರ್ಯಾ ರೈ ಬಚ್ಚನ್ ಡೈವರ್ಸ್ ರೂಮರ್ ಹರಿದಾಡಿತ್ತು.ಆದರೆ ಈದೀಗ ವಿಶ್ವಸುಂದರಿಯಾಗಿ ಜಗತ್ತಿನಾದ್ಯಂತ ಭಲೇ ಜನಪ್ರಿಯ ನಟಿಯ ಬಗ್ಗೆ ಉತ್ತಮ ಮಾತುಗಳು ಕೇಳಿ ಬರ್ತಿವೆ. ಬಾಲಿವುಡ್‌ನ ಈ ಅನಭಿಷಿಕ್ತ ರಾಣಿ ಹಾಲಿವುಡ್ ಇಂಡಸ್ಟ್ರಿಯಲ್ಲಿಯಲ್ಲೂ ಚಿರಪರಿಚಿತ. ಇದೀಗ ದುಬೈನಲ್ಲಿ ನಡೆಯುತ್ತಿರುವ ಸೈಮಾ ಅವಾರ್ಡ್‌ನಲ್ಲಿ ಈಕೆಯ ಸಂಸ್ಕಾರದ ಬಗ್ಗೆಯೇ ಚರ್ಚೆ ನಡೀತಿದೆ. 
ಐಶ್ ಮಗಳು ಆರಾಧ್ಯಾ ನಮ್ಮ ಕರುನಾಡ ಚಕ್ರವರ್ತಿ ಶಿವಣ್ಣ ಅವರ ಕಾಲಿಗೆ ಎರಗಿದ್ದಾಳೆ. ಈ ವೀಡಿಯೋ ಈಗ ಎಲ್ಲರ ಮನಗೆದ್ದಿದೆ. ಐಶ್ವರ್ಯಾ ರೈ ಬೆಸ್ಟ್ ನಟಿ ಮಾತ್ರ ಅಲ್ಲ, ಮಾದರಿ ಅಮ್ಮ ಸಹ ಅಂತ ಎಲ್ಲರೂ ಕೊಂಡಾಡುತ್ತಿದ್ದಾರೆ.ದುಬೈನಲ್ಲಿ ನಡೆದ SIIMA ಪ್ರಶಸ್ತಿ ಸಮಾರಂಭದಲ್ಲಿ ಐಶ್ವರ್ಯಾ ರೈ ಮತ್ತು ಆರಾಧ್ಯ ಬಚ್ಚನ್ ಸಖತ್‌‌ ಮಿಂಚಿದ್ದಾರೆ.
ಎಲ್ಲಿ ನೋಡಿದರೂ ಅಮ್ಮ ಮಗಳದ್ದೇ ಸುದ್ದಿ. ಐಶ್ವರ್ಯಾ ರೈ ಅವರು ಈ ಹಿಂದೆಯೇ ಕನ್ನಡಿಗರ ಹೃದಯ ಗೆದ್ದ ನಟಿ. ಅದರಲ್ಲಿ ಎರಡು ಮಾತಿಲ್ಲ. ಆದರೆ ಇದೀಗ ಅಮ್ಮ ಮಾತ್ರವಲ್ಲ ಮಗಳ ವಿನಯ, ಸಂಸ್ಕಾರವನ್ನು ಇಡಿ ಕನ್ನಡಿಗರು ಕೊಂಡಾಡುವಂತಾಗಿದೆ. ಈ ಮೂಲಕ ತಾನು ಪ್ರತಿಭಾವಂತೆ ಮಾತ್ರ ಅಲ್ಲ, ಸಮಾಜಕ್ಕೆ ಒಂದೊಳ್ಳೆಯ ಸಂಸ್ಕಾರವಂತ ಮಗಳನ್ನೂ ನೀಡುತ್ತಿದ್ದೇನೆ ಎಂಬುದನ್ನು ಐಶ್ ಬೇಬಿ ಸಾರುತ್ತಿದ್ದಾರೆ.
ಅಮ್ಮ ಮಗಳು ಒಟ್ಟಾಗಿ ಬರುವಾಗ ಐಶ್‌ ಅವರಿಗೆ ಶಿವಣ್ಣ ಅವರು ಬೇರೆಯವರ ಜೊತೆ ಮಾತನಾಡುತ್ತಾ ನಿಂತಿರುವುದು ಕಂಡಿದೆ. ಶಿವಣ್ಣ ಅವರು ಆ ಹೊತ್ತಿಗೆ ನಟ ಚಿಯಾನ್ ವಿಕ್ರಂ ಹಾಗೂ ಇತರರ ಜೊತೆ ಮಾತನಾಡುತ್ತಿದ್ದರು. ಮಾತಿನಲ್ಲೇ ಮುಳುಗಿ ಹೋಗಿದ್ದ ಶಿವಣ್ಣಂಗೆ ಐಶ್ ಬೇಬಿ ಪಾಸಾಗಿದ್ದೂ ಗೊತ್ತಾಗಿಲ್ಲ. ಆದರೆ ಐಶ್ವರ್ಯಾ ಅವರು ಶಿವಣ್ಣ ಅವರನ್ನು ಮುಂದೆ ಹೋದ ಮೇಲೆ ಗಮನಿಸಿ ವಾಪಾಸ್ ಹಿಂದೆ ಬಂದಿದ್ದಾರೆ. ಶಿವಣ್ಣ ಅವರನ್ನು ತಾನೇ ಮುಂದಾಗಿ ಮಾತಾಡಿಸಿದ್ದಾರೆ. ಮಗಳ ಪರಿಚಯವನ್ನೂ ಮಾಡಿಕೊಟ್ಟಿದ್ದಾರೆ.
ಶಿವಣ್ಣ ಕಿಡ್ಸ್ ಫ್ರೆಂಡ್ಲಿ. ಐಶ್ ಮಗಳನ್ನು ನೋಡಿದ ಕೂಡಲೇ ಹಾಯ್ ಅಂದು ಶೇಕ್ ಹ್ಯಾಂಡ್ ನೀಡಲು ಮುಂದಾಗಿದ್ದಾರೆ. ಆದರೆ ಐಶ್ವರ್ಯಾ ರೈ ಮಗಳು ಅಷ್ಟೊತ್ತಿಗೆ ಕೆಳಗೆ ಬಾಗಿ ಶಿವಣ್ಣ ಅವರ ಪಾದಕ್ಕೆ ನಮಸ್ಕರಿಸಿದ್ದಾಳೆ. ಅಂಥಾ ಜಗತ್ಪ್ರಸಿದ್ಧ ನಟಿಯ ಮಗಳ ವರ್ತನೆ ಕಂಡು ಶಿವಣ್ಣನಿಗೆ ಆಶ್ಚರ್ಯ ಆದಂತಿದೆ. ಅವರು ಈ ಪುಟ್ಟ ಹುಡುಗಿಯ ತಲೆ ಸವರಿ ವಿಶ್ ಮಾಡಿದ್ದಾರೆ. ಈ ವೀಡಿಯೋ ಸದ್ಯ ಎಲ್ಲೆಲ್ಲೂ ಹರಿದಾಡ್ತಿದೆ
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.