ತಂದೆ ತಾಯಿ ಇಲ್ಲದೆ ಬೆಳೆದ ಐಶ್ವರ್ಯ ಗೆ ಇಷ್ಟು ಕೋಟಿ ಆಸ್ತಿ ಬಂದಿದ್ದು ಮಾತ್ರ ರೋಚಕ
Oct 4, 2024, 18:50 IST
|
ಕನ್ನಡದ ಮಾಯಾಂಗನೆ ಎಂದೇ ಕರೆಸಿಕೊಳ್ಳುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಮ್ಮ ಲಚ್ಚಿ’ ಧಾರಾವಾಹಿ ಮೂಲಕ ನಟಿ ಐಶ್ವರ್ಯಾ ಸಿಂಧೋಗಿ ಸಖತ್ ಫೇಮಸ್ ಆಗಿದ್ದರು. ಇದೀಗ ನಟಿ ಐಶ್ವರ್ಯಾ ಸಿಂಧೋಗಿ ಬಿಗ್ ಬಾಸ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಈ ಮೊದಲು ಮಂಗಳಗೌರಿಯಲ್ಲಿ ಮಿಂಚಿ, ನಾಗಿಣಿ ದಾರವಾಹಿ ಮೂಲಕ ಮನೆಮಾತಾಗಿದ್ದರು.ನಟಿ ಐಶ್ವರ್ಯಾ ಸಿಂಧೋಗಿ, ಸಂಗಮ್ ಹೆಂಡತಿ ದೀಪಿಕಾ ಎಂಬ ಪಾತ್ರದಲ್ಲಿ ನಟಿಸಿದ್ದರು. ಖಳನಾಯಕಿಯಾಗಿ ಕಾಣಿಸಿಕೊಂಡ ಆಕೆ ಆ ಪಾತ್ರದ ಮೂಲಕ ಬಹಳಷ್ಟು ಹೆಸರು ಮಾಡಿದರು. ಕೆಲ ರಿಯಾಲಿಟಿ ಶೋನಲ್ಲಿ ಕೂಡ ಇವರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.
ಸೃಜನ್ ಲೋಕೇಶ್ ಅವರ ನಟನೆಯ ಸಿನಿಮಾ ಸಪ್ನೋಂಕಿ ರಾಣಿ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇದಾದ ಮೇಲೆ ಸಿಂಹಾದ್ರಿ’, ಮಟಾಷ್’, ಸಂಯುಕ್ತ 2’, ಡಾರ್ಕ್, ವಾವ್, ಯಾರು ಯಾರು ನೀ ಯಾರು, ಸೈತಾನ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ಹಲವು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಐಶ್ವರ್ಯಾ ಭಾಗಿಯಾಗಿದ್ದರು. ಇದೀಗ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ನಮ್ರತಾ ಗೌಡ ಸ್ನೇಹಿತೆಯಾಗಿರುವ ಇವರು ತಂದೆ ತಾಯಿ ಇಬ್ಬರನ್ನು ಕಳೆದುಕೊಂಡಿದ್ದಾರೆ.ಐಶ್ವರ್ಯಾ ಆಗಾಗ ರೀಲ್ಸ್ ಮಾಡುತ್ತಿರುತ್ತಾರೆ. ಇದೀಗ ಐಶ್ವರ್ಯ ಸಿಂಧೋಗಿ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಸ್ವಂತ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಶುರು ಮಾಡಿದ್ದಾರೆ.ರಾಜ್ಯಮಟ್ಟದ ಹಾಕಿ ಆಟಗಾರ್ತಿಯಾಗಿದ್ದರು. ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದ ಐಶ್ವರ್ಯ ಅವರು ಇದರ ಜೊತೆಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.