ಕನ್ನಡದ ಸ್ಟಾರ್ ನಟನ ಮೇಲೆ ಬಿತ್ತು ಐಶ್ವರ್ಯ ಮಗಳ ಕಣ್ಣು, ಪ್ರೀತಿಗೆ ಒಪ್ಪಿಗೆ ಸೂಚಿಸ್ತಾರಾ ಬಚ್ಚನ್ ಕುಟುಂಬ

 | 
Ji

      ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ತಮ್ಮ ವೈವಾಹಿಕ ಜೀವನದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಇಬ್ಬರೂ ಕೂಡ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಈ ಮುನ್ನ ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡಿತ್ತು. 

      2011 ರಲ್ಲಿ ಐಶ್ವರ್ಯಾ ರೈ ಹಾಗೂ ಅಭಿಷೇಕ್‌ ಜೋಡಿಯ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಆರಾಧ್ಯ ಜನಸಿದ್ದಳು. ಆರಾಧ್ಯ ಬಚ್ಚನ್‌ ಈ ಜೋಡಿಗೆ ಏಕೈಕ ಪುತ್ರಿ. ಐಶ್ವರ್ಯಾ ರೈ ಒಮ್ಮೆ ಸಂದರ್ಶನವೊಂದರಲ್ಲಿ ತನ್ನ ಮಗಳು ಆರಾಧ್ಯ ರಣಬೀರ್ ಕಪೂರ್ ಅನ್ನು ತುಂಬಾ ಇಷ್ಟಪಡುತ್ತಾಳೆ ಎಂದಿದ್ದರು.   
     ನಾನು ಮತ್ತು ರಣಬೀರ್ ಕಪೂರ್ ಕೂಡ ಒಳ್ಳೆಯ ಸ್ನೇಹಿತರು. ನಾವಿಬ್ಬರು ಉತ್ತಮ ಒಡನಾಟವನ್ನು ಹೊಂದಿದ್ದೇವೆ. ನಮ್ಮ ಸ್ನೇಹ ಇಂದಿಗೂ ಹಾಗೆಯೇ ಇದೆ. ಒಮ್ಮೆ ರಣಬೀರ್ ಶೂಟಿಂಗ್ ಮಾಡುತ್ತಿದ್ದರು, ಅಭಿಷೇಕ್ ಬಚ್ಚನ್ ಅವರ ಕ್ಯಾಪ್ ಮತ್ತು ಜಾಕೆಟ್ ಧರಿಸಿದ್ದರು. ಆಗ ಆರಾಧ್ಯ ಸೆಟ್‌ಗೆ ಬಂದು ರಣಬೀರ್‌ನನ್ನು ಅಪ್ಪ ಅಭಿಷೇಕ್ ಎಂದು ಭಾವಿಸಿ ಅಪ್ಪಿಕೊಂಡರು ಎಂದು ಆ ದಿನಗಳನ್ನು ಐಶ್ವರ್ಯ ಮೆಲುಕು ಹಾಕಿದ್ದಾರೆ. 
     ರಣಬೀರ್ ಕಪೂರ್ ಅವರನ್ನು ತಬ್ಬಿಕೊಂಡ ನಂತರ ಅದು ತಮ್ಮ ತಂದೆಯಲ್ಲ ಎಂದು ಅರಿತುಕೊಂಡ ಆರಾಧ್ಯ ತುಂಬಾ ನಾಚಿಕೆಪಟ್ಟಳು. ಅಂದಿನಿಂದ ಅಭಿಷೇಕ್ ನಟ ರಣಬೀರ್ ಕಪೂರ್ ಅವರನ್ನು ತಮ್ಮ ಮಗಳು ಆರಾಧ್ಯ ಅವರ ಮೇಲೆ ಕ್ರಶ್ ಹೊಂದಿದ್ದಾರೆ ಎಂದು ಕೀಟಲೆ ಮಾಡಲು ಪ್ರಾರಂಭಿಸಿದರು. ಈ ಘಟನೆಯಾದಾಗಿನಿಂದ ಆರಾಧ್ಯ ರಣಬೀರ್‌ನನ್ನು ನೋಡಿದಾಗಲೆಲ್ಲಾ ನಾಚಿಕೆ ಪಡುತ್ತಾಳೆ ಎಂದು ಐಶ್ವರ್ಯ ರೈ ರಣಬೀರ್‌ ಕಪೂರ್‌ ಅವರ ಮಗಳಿಗಿರುವ ಸಂಬಂಧದ ಕುರಿತು ಹೇಳಿಕೊಂಡಿದ್ದಾರೆ.