ಒಂದು ಕೋಟಿ ಬೆಲೆಯ ಕಾರನ್ನು 50 ಲಕ್ಷಕ್ಕೆ ಮಾರಾಟ ಮಾಡಿದ ಅಜಯ್ ರಾವ್, ಅಪ್ಪ ಕಾರು ಕೊಡಬೇಡ ಎಂದ ಮಗಳು

 | 
Nnj
ಕನ್ನಡದ ಕೃಷ್ಣ ಅಜಯ್ ರಾವ್ ಒಳ್ಳೆ ನಟ ಅನ್ನೋದು ಗೊತ್ತೇ ಇದೆ. ಕೃಷ್ಣನ ಪ್ರತಿ ಸ್ಟೋರಿಯನ್ನೂ ಎಲ್ಲರೂ ಮೆಚ್ಚಿದ್ದಾರೆ. ಇದೀಗ ಈ ಕೃಷ್ಣ ಅಜಯ್ ರಾವ್ ವಕೀಲನಾಗಿ ಬರ್ತಿರೋ ಯುದ್ಧಕಾಂಡ ಚಿತ್ರ ಇದೇ ತಿಂಗಳು 18ರಂದು ರಿಲೀಸ್ ಆಗುತ್ತಿದೆ. ಆದರೆ, ಈ ಚಿತ್ರಕ್ಕೆ ದುಡ್ಡುಹಾಕಿರೋ ಅಜಯ್ ರಾವ್ ಕೋಟಿ ಕೋಟಿ ಸಾಲ ಕೂಡ ಮಾಡಿಕೊಂಡಿದ್ದಾರೆ.
ಚಿತ್ರಕ್ಕೆ ದುಡ್ಡು ಕಡಿಮೆ ಬಿದ್ದಾಗ ತಮ್ಮ ಪ್ರೀತಿಯ BMW ಕಾರ್ ಅನ್ನೂ ಮಾರಿ ಬಿಟ್ಟಿದ್ದಾರೆ. ಆದರೆ, ಅವರ ಪುಟ್ಟ ಮಗಳು ಚರಿಷ್ಮಾಗೆ ಇದೆಲ್ಲ ಎಲ್ಲಿ ಅರ್ಥ ಆಗುತ್ತದೆ? ಕಾರ್ ಮಾರಾಟ ಮಾಡಿದ್ಮೇಲೆ ಖರೀದಿಸಿದವ್ರು ತೆಗೆದುಕೊಂಡು ಹೋಗಲು ಬಂದಾಗ ಚರಿಷ್ಮಾ ಬೇಡ ಅಂತ ಹಠ ಹಿಡಿದಿದ್ದಾಳೆ. ಕಾರ ಬಳಿಯೇ ಸುಳಿದಾಡಿ ಕಣ್ಣೀರು ಹಾಕಿದ್ದಾಳೆ. ಆಗ ಅಜಯ್ ರಾವ್ ಮಗಳಿಗೆ ಸಾರಿ ಕೂಡ ಹೇಳಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ಅಜಯ್ ರಾವ್ ಮಗಳು ಚರಿಷ್ಮಾಳ ಈ ಒಂದು ಅಳುವನ್ನ ಅದ್ಯಾರು ಕ್ಯಾಪ್ಚರ್ ಮಾಡಿದ್ರೋ ಏನೋ? ಆದರೆ, ಈ ಒಂದು ವಿಡಿಯೋದಲ್ಲಿ ಅಜಯ್ ರಾವ್ ಧ್ವನಿ ಕೂಡ ಇದೆ. ಮಗಳಿಗೆ ಸಮಾಧಾನ ಹೇಳುವ ಕೆಲಸವನ್ನ ಅಜಯ್ ರಾವ್ ಇಲ್ಲಿ ಮಾಡ್ತಾರೆ. ಮಗಳೆ ಇದು ನಿನ್ನ ಫೇವರಿಟ್ ಕಾರಾ ಅಂತಲೇ ಕೇಳ್ತಾರೆ. ಆಗ ಚರಿಷ್ಮಾ ಅಳ್ತಾನೇ ಹೌದು ಅಂತಲೇ ಹೇಳ್ತಾಳೆ. ಕಾರ್ ಕೊಡೋದು ಬೇಡ ಅಂತಲೂ ಮತ್ತೆ ಹಠ ಹಿಡಿಯುತ್ತಾಳೆ.
ಮಗಳು ಕಾರ್ ಬಳಿ ಸುಳಿದಾಡಿ ಅಳ್ತಿರೋದನ್ನ ನೋಡಿದ ಅಜಯ್ ರಾವ್ ಬೇಸರದಲ್ಲಿಯೇ ಸಾರಿ ಕೇಳ್ತಾರೆ. ನಿನ್ನ ಫೇವರಿಟ್ ಕಾರ್ ಅಲ್ವಾ ಇದು. ಇದು ಹೋಗ್ಲಿ ಬಿಡು. ಬೇರೆ ಕಾರ್ ತೆಗೆದುಕೊಳ್ಳೋಣ ಅಂತಲೇ ಹೇಳ್ತಾರೆ. ಆದರೂ ಚರಿಷ್ಮಾ ಕೇಳೋದೇ ಇಲ್ಲ. ಕಾರ್ ಬಳಿಯೇ ಸುಳಿದಾಡ್ತಾಳೆ.ಆದರೆ, ಮಗಳಿಗೆ ಅಜಯ್ ರಾವ್ ಇನ್ನೂ ಒಂದು ಮಾತು ಹೇಳ್ತಾರೆ. 
ಪುಟ್ಟಿ ಅಲ್ಲಿ ಅಂಕಲ್ ಕಾಯುತ್ತಿದ್ದಾರೆ. ನಿನ್ನ ಫೇವರಿಟ್ ಕಾರಿಗೆ ಕಿಸ್ ಕೊಟ್ಟು ಬಿಡು. ಅವರು ಕೊಟ್ಟ ದುಡ್ಡು ತೆಗೆದುಕೊಂಡು ಥ್ಯಾಂಕ್ಸ್ ಕೊಟ್ಟೇ ಅಲ್ವಾ? ಅವರಿಗೆ ಕಾರ್ ಕೊಡಬೇಕು ಅಲ್ವಾ? ಬಿಟ್ಟು ಬಿಡು ಅಂತಲೆ ಹೇಳ್ತಾರೆ. ಅಷ್ಟಕ್ಕೂ ಅಜಯ್ ರಾವ್ ಈ ಕಾರ್ ಸೇಲ್ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಆದರೂ ವಿಡಿಯೋ ವೈರಲ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.