ಮುತ್ತಿನಂತ ಗಂಡ, ವಿದೇಶದಲ್ಲಿ ಕೆಲಸಕ್ಕಿದ್ದ ಗಂಡ ಆದರೂ ಕೂಡ ಡಿವೋರ್ಸ್ ಕೊಟ್ಟು ಬಂದ ಅಖಿಲಾ ಪಜಿಮಣ್ಣು
Jun 25, 2025, 09:05 IST
|

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ವಿಚ್ಚೇದನ ಸುದ್ದಿಗಳೇ ಹೆಚ್ಚಾಗುತ್ತಿವೆ. ಪ್ರೀತಿ, ಪ್ರೇಮ, ಮದುವೆ ಎರಡ್ಮೂರು ವರ್ಷಕ್ಕೆ ವಿಚ್ಚೇದನ ಪಡೆಯುತ್ತಿರುವ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿವೆ. ಚಂದನ್ ಶೆಟ್ಟಿ ನಿವೇದಿತಾ ಗೌಡ ವಿಚ್ಚೇದನ ಬಳಿಕ ಹಲವು ಸೆಲೆಬ್ರಿಟಿಗಳು ವಿಚ್ಚೇದನ ಪಡೆದು ದೂರುವಾಗಿದ್ದಾರೆ. ಇದೀಗ ಆ ಸಾಲಿಗೆ 'ಕನ್ನಡ ಕೋಗಿಲೆ' ರಿಯಾಲಿಟಿ ಶೋನ ಗಾಯಕಿ ಅಖಿಲಾ ಪಜಿಮಣ್ಣು ಕೂಡ ಸೇರಿಕೊಂಡಿದ್ದಾರೆ.
ಕನ್ನಡಿಗರ ಮನಗೆದ್ದ ಗಾಯಕಿ ಅಖಿಲಾ ಪಜಿಮಣ್ಣು ಸೋಶಿಯಲ್ ಮೀಡಿಯಾದಲ್ಲಿ ಬಹು ದಿನಗಳಿಂದ ಸಕ್ರಿಯವಾಗಿದ್ದಾರೆ. ಕನ್ನಡ ಕೋಗಿಲೆ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ಅಖಿಲಾ ಪಜಿಮಣ್ಣು ಬಳಿಕ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಖಿಲಾ ಪಜಿಮಣ್ಣು ತಮ್ಮ ಮಧುರ ಕಂಠದಿಂದ ಕನ್ನಡಿಗರ ಮನ ಗೆದಿದ್ದರು. ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಮೊದಲೆರಡು ಆವೃತ್ತಿಗಳಲ್ಲಿ ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದರು. ತಮ್ಮ ಹಾಡಿನ ಮೂಲಕ ಕನ್ನಡಿಗರಿಂದ ಭೇಷ್ಎನಿಸಿಕೊಂಡಿದ್ದರು.g
ಕಳೆದ ಮೂರು ವರ್ಷಗಳ ಹಿಂದ ಕನ್ನಡದ ಗಾಯಕಿ ಅಖಿಲಾ ಪಜಿಮಣ್ಣು ಹಾಗೂ ಸಾಪ್ಟ್‌ವೇರ್ ಇಂಜಿನಿಯರ್ ಧನಂಜಯ್ ಶರ್ಮಾ ಅವರು ಅರೇಂಜ್ಡ್ ಮ್ಯಾರೇಜ್ ಆಗಿದ್ದರು. ಈ ಎರಡು ಕುಟುಂಬಗಳ ಸಮ್ಮುಖದಲ್ಲಿ ಜೋಡಿ ಅಖಿಲಾ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಎಲ್ಲವೂ ಖುಷಿ ಖುಷಿಯಾಗಿಯೇ ಇದ್ದ ಇಬ್ಬರ ದಾಂಪತ್ಯದಲ್ಲಿ ಅಂತಹದ್ದೇನಾಯ್ತೋ ಗೊತ್ತಿಲ್ಲ. ಬೇರೆಯಾಗುವುದಕ್ಕೆ ಗಾಯಕಿ ಅಖಿಲಾ ಹಾಗೂ ಧನಂಜಯ್ ಶರ್ಮಾ ಅವರಿಬ್ಬರು ನಿರ್ಧರಿಸಿದ್ದಾರೆ.
2022ರಲ್ಲಿ ಕನ್ನಡ ಕೋಗಿಲೆ ಗಾಯಕಿ ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಇಬ್ಬರೂ ಗುರು ಹಿರಿಯರ ಆಸೆಯಂತೆಯೇ ವಿವಾಹವಾಗಿದ್ದರು. ಆದರೆ, ಇದೀಗ ಪರಸ್ಪರ ಒಪ್ಪಿಗೆ ಮೇಲೆ ಡಿವೋರ್ಸ್ ಪಡೆಯುವುದಕ್ಕೆ ಮುಂದಾಗಿದ್ದಾರೆ. ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಈಗಾಗಲೇ ಪುತ್ತೂರು ನ್ಯಾಯಾಲಯದಲ್ಲಿ ಡಿವೋರ್ಸ್‌ಗೆ ಅರ್ಜಿಯನ್ನು ಸಲ್ಲಿಸಿದೆ . ಈ ಜೋಡಿ ಜೂನ್ 12ರಂದು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.