ಗಂಗಾ ನದಿಯಲ್ಲಿ ಮುಳುಗಲು ಅಂಬಾನಿ ಪುತ್ರನ ಹರಸಾಹಸ, ಸಾಥ್ ಕೊಟ್ಟ ಹೆಂಡತಿ
Feb 17, 2025, 21:00 IST
|

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕಳೆದ ಒಂದು ತಿಂಗಳಿಂದ ಮಹಾ ಕುಂಭಮೇಳ ಅದ್ಧೂರಿಯಾಗಿ ನಡೆಯುತ್ತಿದೆ. ಇದುವರೆಗೆ 45 ಕೋಟಿಗೂ ಅಧಿಕ ಭಕ್ತರು ಪ್ರಯಾಗ್‌ರಾಜ್‌ನ ಕುಂಭಮೇಳಕ್ಕೆ ತೆರಳಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇದೀಗ ಮಹಾಕುಂಭಮೇಳಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹಾಗೂ ಕುಟುಂಬಸ್ಥರು ತೆರಳಿದ್ದಾರೆ.
ಹೌದು ಮಹಾಕುಂಭ ಮೇಳಕ್ಕೆ ಇದೀಗ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ, ಪುತ್ರರಾದ ಆಕಾಶ್ ಅಂಬಾನಿ, ಅನಂತ್ ಅಂಬಾನಿ, ಸೊಸೆ ಶ್ಲೋಕಾ ಮೆಹ್ತಾ ಜೊತೆಗೆ ಮೊಮ್ಮಕ್ಕಳು ತೆರಳಿದ್ದಾರೆ.ಈ ಸಮಯದಲ್ಲಿ ಅವರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದು, ಆ ಮೂಲಕ ತ್ರಿವೇಣಿ ಸಂಗಮದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮುಕೇಶ್ ಅಂಬಾನಿಯವರ ಮೊಮ್ಮಕ್ಕಳಾದ ಪೃಥ್ವಿ ಮತ್ತು ವೇದಾ, ತಾಯಿ ಕೋಕಿಲಾ ಬೆನ್, ಮಗ-ಸೊಸೆ ಆಕಾಶ್ ಮತ್ತು ಶ್ಲೋಕಾ ಹಾಗೂ ಅನಂತ್ ಮತ್ತು ರಾಧಿಕಾ ಅವರೊಂದಿಗೆ ಪ್ರಯಾಗ್‌ರಾಜ್ ತಲುಪಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ, ಅಂಬಾನಿ ಕುಟುಂಬವು ನಿರಂಜನಿ ಅಖಾಡದ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ಜಿ ಮಹಾರಾಜ್ ಅವರ ಸಮ್ಮುಖದಲ್ಲಿ ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ನಂತರ ಅಂಬಾನಿ ಕುಟುಂಬವು ಮಹಾಕುಂಭದಲ್ಲಿ ನಿರ್ಮಿಸಲಾದ ಪರಮಾರ್ಥ ನಿಕೇತನ ಆಶ್ರಮವನ್ನು ತಲುಪಿತು. ಆ ಆಶ್ರಮದಲ್ಲಿ ಸ್ವಚ್ಛತಾ ಕಾರ್ಮಿಕರು, ದೋಣಿ ಚಾಲಕರು ಮತ್ತು ಯಾತ್ರಿಕರಿಗೆ ಕುಟುಂಬವು ಸಿಹಿತಿಂಡಿಗಳನ್ನು ವಿತರಿಸಿತು. ಕುಟುಂಬ ಸದಸ್ಯರು ಕೂಡ ಯಾತ್ರಿಕರಿಗೆ ಆಹಾರವನ್ನು ಉಣ ಬಡಿಸಿದರು.ಪರಮಾರ್ಥ ನಿಕೇತನ ಆಶ್ರಮ, ಶಾರದಾ ಪೀಠ ಮಠ ಟ್ರಸ್ಟ್ ದ್ವಾರಕಾ, ಶ್ರೀ ಶಂಕರಾಚಾರ್ಯ ಉತ್ಸವ ಸೇವಾಲಯ ಪ್ರತಿಷ್ಠಾನ, ನಿರಂಜನಿ ಅಖಾಡ ಮತ್ತು ಪ್ರಭು ಪ್ರೇಮಿ ಸಂಘ ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ಪ್ರಸಿದ್ಧ ಆಧ್ಯಾತ್ಮಿಕ ಸಂಸ್ಥೆಗಳ ಸಹಯೋಗದೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಕುಂಭಮೇಳದಲ್ಲಿ ಆಹಾರ ಸೇವೆಯನ್ನು ಮಾಡುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.