ಡಾಲಿ ಧನಂಜಯ್ ಕೈ ಹಿಡಿಯಲು ಮುಂದಾದರ ಅಮೃತ ಅಯ್ಯರ್, ಏನಿದು ಗುಡ್ ನ್ಯೂಸ್

 | 
H

ತೆರೆಯ ಮೇಲೆ ಬೆಸ್ಟ್‌ ಜೋಡಿಯಾಗಿ ಮಿಂಚಿರೋ ಡಾಲಿ- ಅಮೃತಾಗೆ ಅಪಾರ ಅಭಿಮಾನಿಗಳ ಬಳಗವಿದೆ. ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಈ ಜೋಡಿ ಜಂಟಿಯಾದರೆ ಚೆನ್ನಾಗಿರುತ್ತೆ ಆಶಿಸುವ ಅಭಿಮಾನಿಗಳಿದ್ದಾರೆ. ಹೀಗಿರುವಾಗ ಇಬ್ಬರು ಎಂಗೇಜ್‌ ಆಗಿದ್ದಾರೆ ಎನ್ನುವ ಸುದ್ದಿ ಕೂಡ ಹಬ್ಬಿತ್ತು. 

ಈ ಸುದ್ದಿ ನಿಜಾನಾ? ಇಬ್ಬರ ಗೆಳೆತನ ಹೇಗಿದೆ ಎಂಬುದರ ಬಗ್ಗೆ ಅಮೃತಾ ಅಯ್ಯಂಗಾರ್‌ ಮಾತನಾಡಿದ್ದಾರೆ. ಹೌದು ಪಾಪ್ ಕಾರ್ನ್ ಮಂಕಿ ಟೈಗರ್’, ಬಡವ ರಾಸ್ಕಲ್, ಹೊಯ್ಸಳ ಸಿನಿಮಾದಲ್ಲಿ ಡಾಲಿ- ಅಮೃತಾ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಜನರಿಗೆ ಇಷ್ಟವಾಗಿದೆ. ಇಬ್ಬರ ಜೋಡಿ ಇಷ್ಟವಾಗುತ್ತಿದ್ದಂತೆ ಗಾಸಿಪ್ ಕೂಡ ದೊಡ್ಡ ಮಟ್ಟದಲ್ಲಿ ಹಬ್ಬಿತ್ತು. ಇಬ್ಬರು ಡೇಟ್ ಮಾಡ್ತಿದ್ದಾರೆ ಎನ್ನಲಾಗಿತ್ತು. 

ಸಾಕಷ್ಟು ಕಡೆ ಇಬ್ಬರಿಗೂ, ಮದುವೆ ಬಗ್ಗೆ ಸ್ನೇಹಿತರು & ಅಭಿಮಾನಿಗಳು ಕೇಳ್ತಾ ಇದ್ರು. ಇದಕ್ಕೆಲ್ಲಾ ನಟಿ ಉತ್ತರ ನೀಡಿದ್ದಾರೆ. ಡಾಲಿ- ಅಮೃತಾ ಡೇಟಿಂಗ್ ಮಾಡ್ತಿದ್ದಾರಾ ಎಂಬ ಬಗ್ಗೆ ಅಮೃತಾ ನೇರವಾಗಿ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನಗೆ ಗೊತ್ತು ಅಭಿಮಾನಿಗಳು ನನ್ನ ಮತ್ತು ಡಾಲಿ ಜೋಡಿಯನ್ನ ತೆರೆಯ ಮೇಲೆ ನೋಡೋದಕ್ಕೆ ಇಷ್ಟಪಡ್ತಾರೆ ಅಂತಾ. ನಾವು ಮೂರು ಸಿನಿಮಾಗಳನ್ನ ಒಟ್ಟಿಗೆ ಮಾಡಿದ್ದೇವೆ. 

ಹಾಗಾಗಿ ನಮ್ಮನ್ನ ನೋಡಿ ನಮ್ಮ ನಡುವೆ ಏನೋ ಇದೆ ಅಂತಾ ಊಹೆ ಮಾಡುತ್ತಾರೆ. ತೆರೆಮೇಲಿನ ಕೆಮಿಸ್ಟ್ರಿಗಿಂತ ತೆರೆಹಿಂದೆ ಬೇರೇ ಏನೋ ಇದೆ ಅಂತಾ ನಮ್ಮ ಬಗ್ಗೆ ಯೋಚಿಸುತ್ತಾರೆ. ನಾನು ಡಾಲಿ ಅವರೊಂದಿಗೆ ಕೆಲಸ ಮಾಡಲು ಕಂಫರ್ಟ್ ಆಗಿದ್ದೇನೆ. ನಮ್ಮ ನಡುವೆ ಒಳ್ಳೆಯ ಸ್ನೇಹವಿದೆ ಎಂದಿದ್ದಾರೆ. ನಾನಿನ್ನೂ ಸಿಂಗಲ್ ಆಗಿದ್ದೇನೆ ಎಂದು ನಟಿ ಅಮೃತಾ ಡಾಲಿ ಜೊತೆಗಿನ ಡೇಟಿಂಗ್ ವದಂತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ನಮ್ಮ ನಡುವೆ ಏನಿಲ್ಲ, ನಾವು ಒಳ್ಳೆಯ ಸ್ನೇಹಿತರು ಎಂದು ನಟಿ ಖಚಿತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.