ಇಷ್ಟು ಮುದ್ದಾಗಿರುವ ಅನಂತ್ ನಾಗ್ ಮಗಳನ್ನು ಸಿನಿಮಾ ನಟಿ ಮಾಡದ ನಾಗ್ ಕುಟುಂಬ, ಅಪ್ಪ ಹಾದಿ ಹಿಡಿಯದ ಮಗಳು
Jun 28, 2025, 08:55 IST
|

ನಟ ಅನಂತ್ ನಾಗ್ ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದರೆ, ಅವರ ಪತ್ನಿ ಗಾಯತ್ರಿ ಕೂಡ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದರು. ಈ ದಂಪತಿಗೆ ಇರೋದು ಒಬ್ಬಳೇ ಹೆಣ್ಣು ಮಗಳು. ಅವರ ಹೆಸರು ಅದಿತಿ ನಾಗ್. ಅಂದಹಾಗೆ ಅಪ್ಪ-ಅಮ್ಮನಂತೆ ಅದಿತಿ ನಾಗ್ ನಟನೆಗೆ ಯಾಕೆ ಬರಲಿಲ್ಲ ಅನ್ನೋ ಪ್ರಶ್ನೆ ಹಲವರಲ್ಲಿತ್ತು. ಈ ಬಗ್ಗೆ ಮಾತನಾಡಿ, ಗಾಯತ್ರಿ ಮತ್ತು ನಾನು ಆ ವಿಚಾರದಲ್ಲಿ ತುಂಬಾ ಫ್ರೀಯಾಗಿ ಬಿಟ್ಟಿದ್ದೆವು. ಬಹಳ ಜನ ನನ್ನನ್ನು ಕೇಳಿದಾಗ, ಅವಕಾಶಗಳು ಬರುತ್ತಿದ್ದಾಗ, ನಾನು ಮಗಳಿಗೆ ತುಂಬಾ ಒತ್ತಾಯ ಮಾಡಿದ್ದೆ ಎಂದಿದ್ದಾರೆ ನಟ ಅನಂತ್ ನಾಗ್.
ಆದರೆ ಅವರ ತಾಯಿ ಗಾಯತ್ರಿ ಯಾವತ್ತು ಮಗಳಿಗೆ ಆ ವಿಚಾರದಲ್ಲಿ ಒತ್ತಾಯ ಮಾಡಲಿಲ್ಲ. ನಾನು ನಟ, ನಿನ್ನ ತಾಯಿಯೂ ನಟಿ. ರೆಕಾರ್ಡ್‌ಗೆ ಅಂತ ಒಂದು ಇರಲಿ, ನಟಿಸು ಅಂದಾಗ ಮಗಳು ಕಣ್ಣೀರಾಕಿದ್ದರು. ಆಗ ಅಯ್ಯಯ್ಯೋ.. ಕಣ್ಣೀರು ಹಾಕುವಂತಹದ್ದು ಏನೂ ಇಲ್ಲ, ಇಷ್ಟ ಇಲ್ಲ ಅಂದ್ರೆ ಬೇಡ ಅಂತ ಹೇಳಿ ಸುಮ್ಮನಾಗಿದ್ದೆ ಎಂದರು ಅನಂತ್ ನಾಗ್.
ನಾನು ಹೇಳಿದ್ದಕ್ಕೆ ಮತ್ತೊಂದು ಕಾರಣ ಇದೆ. ಅವಳು ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ನಾಟಕದಲ್ಲಿ ತೊಡಗಿಸಿಕೊಂಡಿದ್ದಳು. ಅಲ್ಲದೇ ಕಥಕ್ ನೃತ್ಯವನ್ನು ಒಂದಷ್ಟು ವರ್ಷಗಳ ಕಾಲ ಅಭ್ಯಾಸ ಮಾಡಿದ್ದಾಳೆ. ಹಾಗಾಗಿ ನಾನು ಹೇಳಿದ್ದೆ. ಆದರೆ ಅವಳಿಗೆ ನಟನೆ ಇಷ್ಟ ಇರಲಿಲ್ಲ ಎಂದು ಅನಂತ್ ನಾಗ್ ಹೇಳಿಕೊಂಡಿದ್ದಾರೆ.ಸರಿ ಬೇಡ.. ಆದರೆ ಕಾರಣವೇನು ಅಂದಾಗ ,ಕ್ಯಾಮೆರಾಗಳು ಹತ್ತಿರ ಇರುತ್ತದೆ, ತುಂಬಾ ಜನರು ಇರುತ್ತಾರೆ.
ಆದರೆ ರಂಗಭೂಮಿಯಲ್ಲಿ ಹಾಗಿಲ್ಲ. ಪ್ರೇಕ್ಷಕರು ದೂರ ಕುಳಿತಿರುತ್ತಾರೆ ಅದೇ ನನಗೆ ಕಂಫರ್ಟ್. ಆ ಕಂಫರ್ಟ್ ಸಿನಿಮಾ ಶೂಟಿಂಗ್ ವೇಳೆ ಇಲ್ಲ. ಅದು ನನಗೆ ಇಷ್ಟ ಇಲ್ಲ ಅಂದಿದ್ದಳು ನನ್ನ ಮಗಳು ಎಂದಿದ್ದಾರೆ ಅನಂತ್ ನಾಗ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023