ಮುದ್ದು ಮುಖದ ಜಾಹ್ನವಿ ಅವರನ್ನು ಗಂಡ ಬಿಟ್ಟು ಹೋಗಿದ್ದು ಯಾಕೆ, ಮಾದ್ಯಮ ಮುಂದೆ ಕಣ್ಣೀರಿಟ್ಟ ಆಂಕರ್

 | 
Hi

ಇತ್ತೀಚೆಗೆ ಕನ್ನಡ ಚಾನೆಲ್‌ಗಳಲ್ಲಿ ಬರುವ ರಿಯಾಲಿಟಿ ಶೋಗಳು ಎಲ್ಲರ ಮನಮುಟ್ಟುವಂತಿದೆ. ಅದರಲ್ಲೂ ಕಲರ್ಸ್ ಕನ್ನಡದಲ್ಲಿ ಬರುವ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ, ಎಲ್ಲರ ನೆಚ್ಚಿನ ಶೋ ಆಗಿ ಹೊರಹೊಮ್ಮಿದೆ. ಯಾಕಂದ್ರೆ ಇದರಲ್ಲಿ ಕಾಮಿಡಿ ಜೊತೆ, ಅರ್ಥಪೂರ್ಣ ಸಂದೇಶ ನೀಡುವ ಸ್ಕಿಟ್ ಕೂಡ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ಗಿಚ್ಚಿ ಗಿಲಿಗಿಲಿ ತಂದೆ ಮಗಳಿಗೆ ಸಂಬಂಧಿಸಿದ ಸ್ಕಿಟ್ ಮಾಡಲಾಗಿತ್ತು. 

ಅದರಲ್ಲಿ ಆ್ಯಂಕರ್ ಜಾಹ್ನವಿ ಕಾರ್ತಿಕ್ ಮಾಡಿದ ಸ್ಕಿಟ್ ಎಲ್ಲರ ಕಣ್ಣಂಚನ್ನ ತೇವಗೊಳಿಸಿತ್ತು. ಕಲಾವಿದ ಶಿವು ಮೆಂಟರ್‌ ಆಗಿದ್ದ ಈ ಸ್ಕಿಟ್‌ನಲ್ಲಿ, ಜಾಹ್ನವಿ ಮಗಳ ಪಾತ್ರ ಮಾಡಿದ್ರೆ, ಶಿವು ತಂದೆ ಪಾತ್ರ ಮಾಡಿದ್ದರು. ಮಗಳಿಗೆ ಕೆಲಸವಿಲ್ಲ. ಸರಿಯಾಗಿ ಜಾಬ್ ಸಿಗುತ್ತಿಲ್ಲವೆಂಬ ಕಾರಣಕ್ಕೆ ತಂದೆಗೆ ಕೋಪವಿತ್ತು. ಆಕೆಯ ಖರ್ಚೆಲ್ಲ ತಾನೇ ನಿಭಾಯಿಸಬೇಕು. ಇಷ್ಟು ವಯಸ್ಸಾದರೂ ತಾನೇ ದುಡಿದು ತರಬೇಕು ಅನ್ನೋ ಬೇಸರವಿತ್ತು. 

ಆ ಸಿಟ್ಟನ್ನೆಲ್ಲ ತಂದೆ ಮಗಳ ಮೇಲೆ ಹಾಕುತ್ತಿದ್ದ. ಆದರೆ ಮಗಳು ಭಾರವಲ್ಲ ಅನ್ನೋದನ್ನ ಜಾಹ್ನವಿ ತಮ್ಮ ನಟನೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಇವರ ಪರ್ಫಾಮೆನ್ಸ್ ನೋಡಿ, ನಟಿ ಶೃತಿ ತಮ್ಮ ಸೀಟ್ ಬಿಟ್ಟು, ಸ್ಟೇಜ್‌ಗೆ ಬಂದು, ಜಾಹ್ನವಿಗೆ ಭೇಷ್ ಹೇಳಿದ್ದಾರೆ. ಅಲ್ಲದೇ, ನನಗೆ ಈ ಆ್ಯಕ್ಟ್ ತುಂಬಾ ಇಷ್ಟವಾಯಿತು. ನಾನು ಓರ್ವ ಅದ್ಭುತ ನಟಿಗಾಗಿ ಈ ಸ್ಟೇಜ್‌ ಮೇಲೆ ಬಂದಿದ್ದೇನೆ. ಅವರೇ ಜಾಹ್ನವಿ. ನಾನು ಯಾವಾಗಲೂ ಡೈರೆಕ್ಟರ್‌ಗೆ ಹೇಳ್ತಾ ಇರ್ತೇನೆ. 

ಹೆಣ್ಣು ಮಕ್ಕಳು ಅವಕಾಶ ಕೇಳಿಕೊಂಡು ಬಂದರೆ, ದಯವಿಟ್ಟು ಅವರಿಗೊಂದು ಅವಕಾಶ ಕೊಡಿ. ಹೆಣ್ಣು ಮಕ್ಕಳು ತಮಗೆ ಸಿಕ್ಕ ಅವಕಾಶವನ್ನ ಸದುಪಯೋಗಪಡಿಸಿಕೊಳ್ಳುತ್ತಾರೆ ಎಂದು ಹೇಳುತ್ತೇನೆ. ಅದೇ ರೀತಿ ಇಂದು ಜಾಹ್ನವಿ ಕೂಡ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾಹ್ನವಿ, ತಂದೆ ಮಗಳ ಬಾಂಧವ್ಯದ ಮನಕಲಕುವ ಸ್ಕಿಟ್… ಅದ್ಭುತ ಅವಕಾಶ ನೀಡಿದ ನನ್ನ ಕಲರ್ಸ್ ಕನ್ನಡ ಕುಟುಂಬಕ್ಕೆ ನಾನೆಂದೂ ಋಣಿ. ಅಪ್ರತಿಮ ಕಲಾವಿದೆ , ಎವರ್ ಗ್ರೀನ್ ಶ್ರುತಿ ಮ್ಯಾಮ್ ಅವರ ಪ್ರೋತ್ಸಾಹದ ಮಾತುಗಳು made my day ಎಂದು ಹೇಳಿದ್ದಾರೆ. 

ಅಲ್ಲದೇ, ಇವರ ವೀಡಿಯೋ ನೋಡಿ, ಹಲವರು ಇವರ ಆ್ಯಕ್ಟ್‌ಗೆ ಫಿದಾ ಆಗಿದ್ದಾರೆ. ನೀವು ಸೂಪರ್‌ ಆಗಿ ನಟಿಸುತ್ತೀರಾ ಎಂದು ಹೇಳಿದ್ದಾರೆ. ಈ ಮೊದಲು ನನ್ನಮ್ಮ ಸೂಪರ್ ಸ್ಟಾರ್‌ ರಿಯಾಲಿಟಿ ಶೋನಲ್ಲಿ ಬಂದಿದ್ದ ಜಾಹ್ನವಿ, ಈ ಬಾರಿ ಗಿಚ್ಚಿ ಗಿಲಿಗಿಲಿಯಲ್ಲೂ ಭಾಗವಹಿಸಿದ್ದಾರೆ. ಆ್ಯಂಕರಿಂಗ್ ಜೊತೆ, ಆ್ಯಕ್ಟಿಂಗ್‌ನಲ್ಲೂ ಮುಂದಿರುವ ಜಾಹ್ನವಿ, ಆಗಾಗ ಕೆಲವು ಮ್ಯೂಸಿಕ್‌ಗಳಿಗೆ ಸ್ಟೆಪ್ ಹಾಕಿ, ರೀಲ್ಸ್ ಕೂಡ ಮಾಡ್ತಿರ್ತಾರೆ. ಇವ್ರು ಸಿಂಗಲ್ ಪೇರೆಂಟ್ ಕೂಡ ಹೌದು ತಮ್ಮ 12 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನ ನೀಡಿ ಒಬ್ಬರೇ ಮನೆಯನ್ನು ನಿಭಾಯಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.