ಅನಿಲ್ ಅಂಬಾನಿ ಬಳಿ‌ ಇವತ್ತು ಒಂದು ರೂಪಾಯಿಗೂ ಗತಿ ಇಲ್ಲ; ಜಗತ್ತಿನ 6ನೇ ಶ್ರೀಮಂತನ ಮಗ ಯಾರಿಗೂ ಬೇಡ

 | 
Hu

ಮುಕೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಆದರೆ ಹಿಂದೊಮ್ಮೆ ಮುಕೇಶ್ ಅಂಬಾನಿ ಸಹೋದರ, ಅನಿಲ್ ಅಂಬಾನಿ ಇವರಿಗಿಂತಲೂ ಹೆಚ್ಚು ಶ್ರೀಮಂತರಾಗಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ? ಇವರ ಉದ್ಯಮ ದಿಢೀರ್‌ ಎಂದು ನೆಲಕಚ್ಚಿ ಕೋಟಿ ಕೋಟಿ ನಷ್ಟವಾಗಿದ್ಹೇಗೆ. ಗೊತ್ತಾದ್ರೆ ಶಾಕ್ ಆಗ್ತೀರಿ.

ಹೌದು, ಬೃಹತ್‌ ಕೈಗಾರಿಕೋದ್ಯಮಿ ಧೀರೂಭಾಯಿ ಅಂಬಾನಿ ಅವರ ಕಿರಿಯ ಮಗ ಅನಿಲ್ ಅಂಬಾನಿ, ಮುಕೇಶ್ ಅಂಬಾನಿಗಿಂತಲೂ ದೊಡ್ಡ ಮಟ್ಟದಲ್ಲಿ ವ್ಯವಹಾರಗಳನ್ನು ನಡೆಸುತ್ತಿದ್ದರು. ಆದರೆ ಈಗ ಹಲವು ವರ್ಷಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಮೂರು ವರ್ಷಗಳ ಹಿಂದೆ ಅವರ ನಿವ್ವಳ ಮೌಲ್ಯವು ಈಗ ಶೂನ್ಯವಾಗಿದೆ ಎಂದು ಅವರೇ ತಿಳಿಸಿದ್ದರು.

ಒಂದು ಕಾಲದಲ್ಲಿ ಬಿಲಿಯನೇರ್‌ಗಳ ಟಾಪ್‌ ಲಿಸ್ಟ್‌ನಲ್ಲಿದ್ದ ಅನಿಲ್ ಅಂಬಾನಿಯವರ ಸಾಮ್ರಾಜ್ಯದ ಪತನದ ಹಿಂದಿನ ಕಾರಣಗಳೇನು ಅನ್ನೋದು ಎಲ್ಲರಲ್ಲೂ ಕುತೂಹಲ ಮೂಡಿಸುವ ವಿಷಯವಾಗಿದೆ. ಈ ಬಗ್ಗೆ ಈಗಾಗಲೇ ಹಲವು ಊಹಾಪೋಹಗಳಿವೆ. ಒಂದು ವರ್ಷದಲ್ಲಿ 30 ಬಿಲಿಯನ್ ಗಳಿಸುವುದರಿಂದ ಹಿಡಿದು ದಿವಾಳಿಯಾಗುವ ವರೆಗೆ ಅನಿಲ್ ಅಂಬಾನಿ ಹಲವು ಹಂತಗಳನ್ನು ದಾಟಿ ಬಂದಿದ್ದಾರೆ.

ಅನಿಲ್ ಅಂಬಾನಿಗೆ ದಕ್ಷಿಣ ಆಫ್ರಿಕಾ ಮೂಲದ ಟೆಲಿಕಾಂ ಕಂಪನಿಯಾದ MTN ನೊಂದಿಗೆ ಪ್ರಸ್ತಾಪಿಸಲಾದ ವ್ಯಾಪಾರ ಒಪ್ಪಂದವು ಮೊದಲ ದೊಡ್ಡ ಹಿನ್ನಡೆಯಾಗಿದೆ. ಅನಿಲ್ ಅಂಬಾನಿಯವರ ರಿಲಯನ್ಸ್ ಕಮ್ಯುನಿಕೇಷನ್ಸ್ ಒಂದು ಕಾಲದಲ್ಲಿ ಭಾರತದಲ್ಲಿ ಪ್ರಮುಖ ಮೊಬೈಲ್ ಸೇವಾ ಪೂರೈಕೆದಾರರಾಗಿದ್ದರು. 

ಆದರೆ ಅವರು ಹೆಚ್ಚುತ್ತಿರುವ ಸಾಲಗಳ ನಡುವೆ MTN ನೊಂದಿಗೆ ತಮ್ಮ ಕಂಪೆನಿಯನ್ನು ವಿಲೀನ ಮಾಡಿಕೊಳ್ಳಬೇಕಾಯಿತು. ಸಾಲದ ಹೊರೆಯಿಂದ ಹೊರಬಂದು ಮತ್ತೊಂದು ದೊಡ್ಡ ಕಂಪೆನಿಯನ್ನು ನಿರ್ಮಿಸುವ ಯೋಜನೆಯನ್ನು ಸಹ ಹಾಕಿಕೊಂಡಿದ್ದರು. ಆದರೆ ಕಾನೂನಾತ್ಮಕ ಸಮಸ್ಯೆಗಳ ನಡುವೆ ಒಪ್ಪಂದವು ವಿಫಲವಾಯಿತು. 

ದೇಶದ ಶ್ರೀಮಂತ ಸಾಮ್ರಾಜ್ಯದ ಕುಡಿ. ಅಣ್ಣ-ತಮ್ಮನ ಮಧ್ಯೆ ಆಸ್ತಿ ಸಮನಾಗಿ ಹಂಚಿಕೆ ಆಯ್ತು. ಬಳಿಕ ತಮ್ಮ ಅಣ್ಣನನ್ನು ಮೀರಿಸಿ ಜಗತ್ತಿನ 6 ನೇ ಅತಿದೊಡ್ಡ ಶ್ರೀಮಂತ ಎನಿಸಿಕೊಂಡರು. ಆದರೆ ಈಗ ಅವರ ಆಸ್ತಿ ಸೊನ್ನೆ. ತನ್ನ ಭವಿಷ್ಯದ ಬಗ್ಗೆ ನಿಖರ ಪ್ಲಾನ್‌ ಇಲ್ಲದೆ ಆತುರದ ನಿರ್ಧಾರ ತೆಗೆದುಕೊಂಡರು. ತನ್ನ ಹೊಸ ಯೋಜನೆಗಳಿಗೆ ವೆಚ್ಚ ಹೆಚ್ಚಾಯ್ತು. ಅದರ ಆದಾಯ ಕಡಿಮೆಯಾಯ್ತು. ಪ್ಲಾನ್‌ ಇಲ್ಲದೆ ಮಾರುಕಟ್ಟೆ ಎಂಟ್ರಿ ಕೊಟ್ಟಿದ್ದು ನಷ್ಟಕ್ಕೆ ಕಾರಣವಾಯ್ತು. 

ಸಾಲದ ಹೊರೆ ಜಾಸ್ತಿಯಾಗಿ ದಿವಾಳಿತನಕ್ಕೆ ಕಾರಣವಾಯ್ತು. ಇಂದು ಈ ಶ್ರೀಮಂತ ಉದ್ಯಮಿಯ ಸಾಮ್ರಾಜ್ಯ ನಾಶಕ್ಕೆ ಗುರಿಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.