ಧ್ರುವ ಸರ್ಜಾ ಅವರನ್ನು ಸಾ.ವಿನ ಬಲೆಯಿಂದ ತಪ್ಪಿಸಿದ ಆಂಜನೇಯ ಸ್ವಾಮಿ, ಸರ್ಜಾ ಕುಟುಂಬಕ್ಕೆ ಮುಗಿಯದ ಗಂಡಂತರ

 | 
ಪರಗದ

ಸ್ಯಾಂಡಲ್‌ವುಟ್‌ ನಾಯಕ ನಟ ಧ್ರುವ ಸರ್ಜಾ ಸೇರಿದಂತೆ ಮಾರ್ಟಿನ್‌ ಚಿತ್ರ ತಂಡವಿದ್ದ ವಿಮಾನವು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಆಂಜನೇಯ ಸ್ವಾಮಿ ದಯದಿಂದ ಸದ್ಯ ಚಿತ್ರ ತಂಡ ಸೇರಿದಂತೆ ವಿಮಾನ ಪ್ರಯಾಣಿಕರೆಲ್ಲಾ ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದಾರೆ.

ಅಂತಿಮ ಚಿತ್ರೀಕರಣದಲ್ಲಿದ್ದ ಮಾರ್ಟಿನ್‌ ಚಿತ್ರತಂಡವು ಸೋಮವಾರ ಸಂಜೆ ಸಾಂಗ್ ಶೂಟಗಾಗಿ ದೆಹಲಿ ವಿಮಾನ ನಿಲ್ದಾಣದಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆಗೆ ಇಂಡಿಗೋ ವಿಮಾನದಲ್ಲಿ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದ ಏಕಾಏಕಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಕಂಡು ಬಂದಿದೆ. ಕೆಟ್ಟ ಹವಾಮಾದಿಂದ ವಿಮಾನವನ್ನು ಲ್ಯಾಂಡಿಂಗ್‌ ಮಾಡಲು ಸಾಧ್ಯವಾಗದೇ ಪೈಲಟ್‌ ಪರದಾಟ ನಡೆಸಿದ್ದಾರೆ.

ಚಿತ್ರತಂಡ ಸೇರಿದಂತೆ ವಿಮಾನದಲ್ಲಿ ಪ್ರಯಾಣಿಕರೆಲ್ಲಾ ಗಾಬರಿಯಾಗಿದ್ದಾರೆ. ಸೀಟ್‌ಗಳು ನಡುಗಿದ ಅನುಭವವಾಗಿದೆ. ಕುಳಿತಿದ್ದ ಸ್ಥಳದಲ್ಲಿಯೇ ಪ್ರಯಾಎ ಣಕರು ಜೀವ ಉಳಿದುಕೊಂಡರೇ ಸಾಕಪ್ಪ ಎಂದು ದೇವರ ನೆನೆದಿದ್ದಾರೆ. ಪ್ರಾರ್ಥನೆ ಮಾಡಿದ್ದಾರೆ, ಕಣ್ಣೀರಿಟ್ಟಿದ್ದಾರೆ. ಕೊನೆಗೆ ಪೈಲಟ್‌ನ ಸಮಯ ಪ್ರಜ್ಞೆಯಿಂದ ವಿಮಾನವು ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ಕೂಡಲೇ ಪ್ರಯಾಣಕರೆಲ್ಲರೂ ಗಾಬರಿಯಿಂದ ಹೊರಬಂದು ಜೀವ ಉಳಿಯಿತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು ಘಟನೆಯ ಬಳಿಕ ಮಾರ್ಟಿನ್‌ ಚಿತ್ರತಂಡವು ವಿಮಾನ ಇಳಿಯುವ ಸಂದರ್ಭದಲ್ಲಿಯೇ ವಿಡಿಯೋ ಮಾಡಿಕೊಂಡು ವಿಮಾನದಲ್ಲಿ ಎದುರಾಗಿದ್ದ ಕೆಟ್ಟ ಸಂದರ್ಭವನ್ನು ವಿವರಿಸಿ ಮರು ಜನ್ಮ ಸಿಕ್ಕಿದೆ ಎಂದಿದೆ. ಅಪಾಯದಿಂದ ಪರದಾ ಧ್ರುವ ಸರ್ಜಾ ವಿಡಿಯೋದಲ್ಲಿ ಮಾತನಾಡಿದ್ದು,ನನ್ನ ಜೀವಮಾನದಲ್ಲಿಯೇ ವಿಮಾನದಲ್ಲಿ ಮೊದಲ ಬಾರಿ ಅತ್ಯಂತ ಕೆಟ್ಟ ಅನುಭವವಾಯಿತು. ಸದ್ಯ ನಾವು ಸುರಕ್ಷಿತವಾಗಿದ್ದೇವೆ.

ಥ್ಯಾಂಕ್‌ ಗಾಡ್‌, ಜೈ ಆಂಜನೇಯ ಎಂದಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಚಿತ್ರದ ನಿರ್ದೇಶಕ ಎ ಪಿ ಅರ್ಜುನ್‌, ನಾಯಕ ನಟಿ ಅನ್ವೇಶಿ ಜೈನ್, ನೃತ್ಯ ಸಂಯೋಜಕ ಇಮ್ರಾನ್‌ ಸರ್ಧಾರಿಯಾ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಇದ್ದಾರೆ. ಪ್ರಾಣಾಪಾಯದಿಂದ ಪಾರಾದ ಖುಷಿಯಲ್ಲಿ ಎಲ್ಲರೂ ಜೈ ಆಂಜನೇಯ ಜೈ ಶ್ರೀರಾಮ್‌ ಎಂದಿದ್ದಾರೆ. ದೇವರ ಆಶೀರ್ವಾದ, ಅಭಿಮಾನಿಗಳ ಹಾರೈಕೆ ಜೀವ ಹಾನಿ ಇಂದ ತಪಿಸಿಕೊಂಡಿದೆ ಎಂದು ಚಿತ್ರ ತಂಡ ಹೇಳಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.