ವಿಷ್ಣುವರ್ಧನ್ ಸಮಾಧಿ ತೆರವಿಗೆ ಅಣ್ಣಾವ್ರು ಕಾರಣ, ದೊಡ್ಮನೆ ಮುಖವಾಡ ಬಿಚ್ಚಿಟ್ಟ ವ್ಯಕ್ತಿ

 | 
ಗಾ

      ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿ ತೆರವು ಘಟನೆ ರಾಜ್ಯದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಆದರೆ ಈ ವಿಚಾರ ಈಗ ಬೇರೆ ಬೇರೆ ಸ್ವರೂಪ ಪಡೆಯುತ್ತಿರುವುದು ವಿಪರ್ಯಾಸ. ಕೆಲವರು ಪಬ್ಲಿಸಿಟಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಭಿಮಾನದ ಹೆಸರಿನಲ್ಲಿ ಕೆಲವರು ಅದನ್ನು ವಿಜೃಂಭಿಸುತ್ತಿದ್ದಾರೆ. ಇಲ್ಲೊಬ್ಬ ವ್ಯಕ್ತಿ ಅಣ್ಣಾವ್ರ ಕುಟುಂಬದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾನೆ.

     ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ತೆರವಿಗೂ ಅಣ್ಣಾವ್ರ ಕುಟುಂಬಕ್ಕೂ ಎತ್ತಣಿಂದೆತ್ತ ಸಂಬಂಧ. ಆದರೆ ಇದಕ್ಕೆಲ್ಲಾ ಡಾ. ರಾಜ್‌ಕುಮಾರ್ ಕುಟುಂಬವೇ ಕಾರಣ ಎನ್ನುವಂತೆ ವಿಷ್ಣುವರ್ಧನ್ ಅಭಿಮಾನಿ ಹೆಸರಿನಲ್ಲಿ ವ್ಯಕ್ತಿಯೊಬ್ಬ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಅದು ವೈರಲ್ ಆಗುತ್ತಿದೆ. ಡಾ. ರಾಜ್‌ಕುಮಾರ್, ಶಿವಣ್ಣ, ಅಪ್ಪು, ರಾಘಣ್ಣ ಹೀಗೆ ಎಲ್ಲರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿ ಆತ ಮಾತನಾಡಿದ್ದಾನೆ.
     ಸ್ಟಾರ್ ನಟರ ನಡುವೆ ಒಳ್ಳೆ ಬಾಂಧವ್ಯ ಇರುತ್ತದೆ. ಆದರೆ ಅಭಿಮಾನಿಗಳು ತಮ್ಮ ನಟನೆ ಹೆಚ್ಚು ಎಂದು ಬಡಾಯಿ ಕೊಚ್ಚಿಕೊಳ್ಳುವ ಭರದಲ್ಲಿ ಮತ್ತೊಬ್ಬ ನಟನನ್ನು ಹಿಯ್ಯಾಳಿಸುವುದು, ಕೆಟ್ಟದಾಗಿ ಟ್ರೋಲ್ ಮಾಡುವುದು ಮೊದಲಿನಿಂದಲೂ ಇದೆ. ಸೋಶಿಯಲ್ ಮೀಡಿಯಾ ಬಂದು ಅದು ಹೆಚ್ಚಾಗುತ್ತಿದೆ. ಅಣ್ಣಾವ್ರು ಹಾಗೂ ವಿಷ್ಣು ನಡುವೆ ಪೈಪೋಟಿ ಇತ್ತು ಎನ್ನುವ ಮಾತುಗಳು ಆಗಾಗ್ಗೆ ಕೇಳಿಬರ್ತಿತ್ತು. ಆದರೆ ಇಬ್ಬರ ನಡುವೆ ಉತ್ತಮ ಒಡನಾಟವಿತ್ತು. ಡಾ. ರಾಜ್ ಅಭಿಮಾನಿ ಆಗಿದ್ದರು ವಿಷ್ಣುವರ್ಧನ್. ಅದೆಲ್ಲಾ ಗೊತ್ತಿಲ್ಲದೇ ಕೆಲವರು ಊಹಾಪೋಹ ಸುದ್ದಿಗಳನ್ನೇ ನಂಬಿ ಸುಳ್ಳು ಪ್ರಚಾರ ಮಾಡಿದ್ದರು.
     ಸುಳ್ಳನ್ನೇ ಕೆಲವರು ನಿಜ ಎಂದು ನಂಬಿ ಅಣ್ಣಾವ್ರ ಕುಟುಂಬದ ಬಗ್ಗೆ ಕೆಲವರು ಇಲ್ಲ ಸಲ್ಲದ ಆರೋಪ ಮಾಡುತ್ತಾ ಬರ್ತಿದ್ದಾರೆ. ವಿಷ್ಣುವರ್ಧನ್ ಸಮಾಧಿ ತೆರವು ಘಟನೆ ಹಿನ್ನೆಲೆಯಲ್ಲಿ ಈ ವ್ಯಕ್ತಿ ಕೂಡ ಅದೇ ರೀತಿ ಮಾತನಾಡಿದ್ದಾನೆ. ಇದು ಅಣ್ಣಾವ್ರ ಅಭಿಮಾನಿಗಳನ್ನು ಕೆರಳಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.