ಅಣ್ಣಾಮಲೈ ಸೋಲಿನಿಂದ ಇಡೀ ದೇಶಕ್ಕೆ ಬಾರಿ ದೊ ಡ್ಡ ಲಾಸ್; ಮೋದಿ ಕಣ್ಣೀ ರು

 | 
Ju

ದಕ್ಷ ಅಧಿಕಾರಿ ಎಂದೇ ಹೆಸರು ಮಾಡಿರುವ ಅಣ್ಣಾಮಲೈ ತಮಿಳುನಾಡಿಗೆ ಎಂಟ್ರಿಯಾಗ್ತಿದ್ದಂತೆ ಅಲ್ಲಿ ಬಿಜೆಪಿ ಪಕ್ಷ ಕೂಡ ಹೆಸರು ಮಾಡೋಕೆ ಶುರು ಮಾಡಿತು. ಬಿಜೆಪಿ ಪಕ್ಷ ಪ್ಲ್ಯಾನ್‌ ಮಾಡಿಕೊಂಡೇ ಅಣ್ಣಾಮಲೈ ಎಂಬ ಅಸ್ತ್ರವನ್ನು ತಮಿಳುನಾಡಿಗೆ ಕಳಿಸಿದ್ದರು. ಅದರಂತೆ ಅಣ್ಣಾಮಲೈ ಬಿಜೆಪಿ ಪಕ್ಷಕ್ಕೆ ಬಲ ತಂದಿದ್ದರು. ಆದರೆ ಅದನ್ನು ಕಾರ್ಯಗತ ಮಾಡುವುದರಲ್ಲಿ ಎಡವಿದ್ದಾರೆ. ತಮಿಳುನಾಡಿನಲ್ಲಿ 14 % ವೋಟಿಂಗ್‌ ಬಿಜೆಪಿಗೆ ಬಂದಿತ್ತು.

2019ರ ಲೋಕಸಭಾ ಚುನಾವಣೆಯಲ್ಲಿ ಸಿಪಿಐ(ಎಂ)ನ ಪಿಆರ್‌ ನಟರಾಜನ್‌ ಅವರು 5,71,150 ಮತಗಳನ್ನು ಪಡೆದು ಗೆದ್ದಿದ್ದರು. ಆ ಸಮಯದಲ್ಲಿ ಬಿಜೆಪಿಯು 3,92,007 ಮತಗಳನ್ನು ಪಡೆದು ಸೋಲು ಅನುಭವಿಸಿತ್ತು. ಕೊಯಮತ್ತೂರಿನಲ್ಲಿ 1999ರಲ್ಲಿ ಬಿಜೆಪಿ ಗೆಲುವು ಪಡೆದಿತ್ತು.ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ಎಡಪಂಥೀಯ ಪಕ್ಷಗಳು ಪ್ರಮುಖವಾಗಿ ಸಿಪಿಐ(ಎಂ) ಗೆಲುವು ಪಡೆಯುತ್ತ ಬಂದಿದ್ದವು.

 ಈ ವರ್ಷ ಡಿಎಂಕೆ ತನ್ನ ಸ್ವಂತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಗೆದ್ದಿದೆ. ಡಿಎಂಕೆಯ ಗಣಪತಿ ಪಿ ರಾಜ್‌ಕುಮಾರ್‌ ಭರ್ಜರಿ ಗೆಲುವು ದಾಖಲಿಸಿದ್ದಾರೆ.2011ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಅಣ್ಣಾಮಲೈ, 2013ರಲ್ಲಿ ಪೊಲೀಸ್‌ ಹುದ್ದೆಯನ್ನು ಅಲಂಕರಿಸುತ್ತಾರೆ. ಕರ್ನಾಟಕದಿಂದ ವೃತ್ತಿ ಜೀವನ ಆರಂಭಿಸಿದ್ದ ಇವರು ದಕ್ಷ ಅಧಿಕಾರಿಯಾಗಿದ್ದರು. ಅಲ್ಲದೆ, ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಇವರು ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದವರು.

ಸುಮಾರು 8 ವರ್ಷಗಳ ಕಾಲ ಪೊಲೀಸ್‌ ಹುದ್ದೆಯಲ್ಲಿದ್ದು, ನಂತರ ಸ್ವಯಂ ನಿವೃತ್ತಿ ಘೋಷಿಸುತ್ತಾರೆ. ʼವಿ ದಿ ಲೀಡರ್ಸ್‌ʼ ಎಂಬ ಸಂಘಟನೆಯನ್ನು ಹುಟ್ಟು ಹಾಕುವ ಅಣ್ಣಾಮಲೈ ನಂತರ ರಾಜಕೀಯ ರಂಗ ಪ್ರವೇಶಿಸುತ್ತಾರೆ. 2020ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದರು. ಇವರ ಸೋಲಿಗೆ ಹಲವಾರು ಜನ ಬೇಸರ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ನಿಲ್ಲಬೇಕಿತ್ತು ಎಂದು ಕೂಡಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.