ಸೀರಿಯಲ್ ಲೋಕದಲ್ಲಿ ಸಂಭ್ರಮ, ಸದ್ದಿಲ್ಲದೇ ಹಸೆಮಣೆಯೇರಿದ ಅಣ್ಣಯ್ಯ ಸೀರಿಯಲ್ ನಟ ನಟಿ
| Updated: Aug 4, 2025, 12:08 IST
ಅಣ್ಣಯ್ಯ’ ಧಾರಾವಾಹಿ ನಟ ವಿಕಾಶ್ ಉತ್ತಯ್ಯ ಅವರ ಜನ್ಮದಿನದ ಪ್ರಯುಕ್ತ ನಟಿ ನಿಶಾ ರವಿಕೃಷ್ಣನ್ ಸ್ಪೆಷಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ‘ನಾನು ನಿಮಗಾಗಿ ಯಾವಾಗಲೂ ಇರುತ್ತೇನೆ’ ಎಂದು ನಿಶಾ ರವಿಕೃಷ್ಣನ್ ಉಲ್ಲೇಖಿಸಿದ್ದಾರೆ.
ಅಣ್ಣಯ್ಯ’ ಸೀರಿಯಲ್‌ನಲ್ಲಿ ವಿಕಾಶ್ ಉತ್ತಯ್ಯ - ನಿಶಾ ರವಿಕೃಷ್ಣನ್ ಕೆಮಿಸ್ಟ್ರಿ ನಿಮಗೆ ಇಷ್ಟವಾಗಿರಬಹುದು. ರಿಯಲ್ ಲೈಫ್‌ನಲ್ಲೂ ಇವರಿಬ್ಬರು ಕ್ಲೋಸ್ ಫ್ರೆಂಡ್ಸ್. ತಮ್ಮ ಬೆಸ್ಟ್ ಫ್ರೆಂಡ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸಿ ‘ಅಣ್ಣಯ್ಯ’ ಮೇಕಿಂಗ್ ವೇಳೆ ಕ್ಲಿಕ್ಕಿಸಿಕೊಂಡ ಸ್ಪೆಷಲ್ ಫೋಟೋಗಳನ್ನ ನಿಶಾ ರವಿಕೃಷ್ಣನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ವಿಕಾಶ್ ಉತ್ತಯ್ಯ ಬರ್ತ್‌ಡೇ ಪ್ರಯುಕ್ತ, ನಿಶಾ ರವಿಕೃಷ್ಣನ್ ಸ್ಪೆಷಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಕಾಶ್ ಉತ್ತಯ್ಯ ಜೊತೆಗಿನ ಫೋಟೋಗಳನ್ನ ಹಂಚಿಕೊಂಡು, ‘’ಇದ ಹಾಡಲು ಕವಿ ಬೇಕು !?’’ ಅಂತ ನಿಶಾ ರವಿಕೃಷ್ಣನ್ ಬರೆದುಕೊಂಡಿದ್ದಾರೆ.
ಅದ್ಭುತ ವ್ಯಕ್ತಿಗೆ, ನನ್ನ ಆತ್ಮೀಯ ಸ್ನೇಹಿತನಿಗೆ ಹಾಗೂ ನನ್ನ ಫಾರೆವರ್ ಫೇವರಿಟ್‌ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು’’ ಎಂದು ತಮ್ಮ ಪೋಸ್ಟ್‌ನಲ್ಲಿ ನಿಶಾ ರವಿಕೃಷ್ಣನ್ ಬರೆದುಕೊಂಡಿದ್ದಾರೆ.ನಿಮಗೆ ಸದಾ ಸಂತೋಷ, ಯಶಸ್ಸು ಹಾಗೂ ಖುಷಿ ಸಿಗಲಿ ಎಂದು ನಾನು ಹಾರೈಸುತ್ತೇನೆ’’ ಎಂದು ತಮ್ಮ ಪೋಸ್ಟ್‌ನಲ್ಲಿ ನಿಶಾ ರವಿಕೃಷ್ಣನ್ ಉಲ್ಲೇಖಿಸಿದ್ದಾರೆ.
ನಿಮಗೆ ಸದಾ ಸಂತೋಷ, ಯಶಸ್ಸು ಹಾಗೂ ಖುಷಿ ಸಿಗಲಿ ಎಂದು ನಾನು ಹಾರೈಸುತ್ತೇನೆ’’ ಎಂದು ತಮ್ಮ ಪೋಸ್ಟ್‌ನಲ್ಲಿ ನಿಶಾ ರವಿಕೃಷ್ಣನ್ ಉಲ್ಲೇಖಿಸಿದ್ದಾರೆ. ಇನ್ನು ಇವರಿಬ್ಬರ ಜೋಡಿ ನೋಡಿ ಅಭಿಮಾನಿಗಳು ಇವರಿಬ್ಬರು ಆದಷ್ಟು ಬೇಗ ಮದುವೆ ಆಗಬೇಕೆಂದು ಆಶಿಸುತ್ತಿದ್ದಾರೆ.