ಲೀಲಾವತಿ ಕುಟುಂಬದಲ್ಲಿ ಮತ್ತೊಂದು ಸಾ.ವು, ತಾಯಿಯ ದುಃಖದಲ್ಲಿದ್ದ ವಿನೋದ್ ರಾಜ್ ಕಂ.ಗಾಲು
ಸಾವು ಯಾರಿಗೆ ಯಾವ ಸಮಯಕ್ಕೆ ಬರುತ್ತದೆ ಎಂದು ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ.ಕನ್ನಡ ಚಿತ್ರರಂಗ ಕಂಡ ಖ್ಯಾತ ನಟಿ ಲೀಲಾವತಿ ನಿಧನದ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಕಹಿ ಸುದ್ದಿ ಸಿಕ್ಕಿದೆ. ಲೀಲಾವತಿ ಅವರನ್ನು ನೋಡಿಕೊಳ್ಳುತ್ತಿದ್ದ ಬಂಗಾರಮ್ಮ ನಿಧನರಾಗಿದ್ದಾರೆ. ಲೀಲಮ್ಮನ ಜೊತೆಗೆ ಇರುತ್ತಿದ್ದ ಬಂಗಾರಮ್ಮ ಇನ್ನಿಲ್ಲ.
ನಟ ವಿನೋದ್ ರಾಜ್ ಕುಟುಂಬಕ್ಕೆ ಲೀಲಾವತಿ ಅವರ ಹಠಾತ್ ನಿಧನ ಶಾಕ್ ಕೊಟ್ಟಿದೆ. ತಾಯಿಯ ಅಗಲಿಕೆಯ ನೋವಿನಿಂದ ಹೊರಬರುವ ಮುನ್ನವೇ ಮನೆಯ ಸದಸ್ಯರೇ ಆಗಿದ್ದ ಬಂಗಾರಮ್ಮ ಇಹಲೋಕ ತ್ಯಜಿಸಿದ್ದಾರೆ. ಲೀಲಮ್ಮರ ಆರೈಕೆ ಮಾಡುತ್ತ ಸದಾ ಅವರ ಜೊತೆಗೆ ಇರುತ್ತಿದ್ದ ಬಂಗಾರಮ್ಮ ಎಂದೂ ಬಾರದ ಲೋಕಕ್ಕೆ ಹೋಗಿದ್ದಾರೆ.
65 ವಯಸ್ಸಿನ ಬಂಗಾರಮ್ಮ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನ ನಾಗರಬಾವಿ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಿದ್ದರು. ಡಿಸೆಂಬರ್ 12ರಂದು ತಡರಾತ್ರಿ ಅವರು ನಿಧನರಾಗಿದ್ದಾರೆ.
ಬಂಗಾರಮ್ಮನವರು ಚಿಕ್ಕವಯಸ್ಸಿನಿಂದಲೂ ಲೀಲಾವತಿ ಅವರ ಜೊತೆಗೆ ಇರುತ್ತಿದ್ದರು, ಲೀಲಾವತಿ ಚೆನ್ನೈನಲ್ಲಿ ವಾಸವಾಗಿದ್ದಾಗಲೂ, ಅವರೊಂದಿಗೆ ಬಂಗಾರಮ್ಮ ಇದ್ದರು.
ಲೀಲಾವತಿ ಎಲ್ಲಿಗೇ ಹೋದರೂ, ಬಂಗಾರಮ್ಮ ಜೊತೆಗೆ ಬರುತ್ತಿದ್ದರು. ಇದೀಗ ಲೀಲಾವತಿ ಇನ್ನಿಲ್ಲವಾದ ಬೆನ್ನಲ್ಲೇ ಬಂಗಾರಮ್ಮ ಕೂಡ ಚಿರನಿದ್ರೆಗೆ ಜಾರಿದ್ದಾರೆ. ಒಟ್ಟಿನಲ್ಲಿ ಜೊತೆಯಾಗಿ ಬದುಕಿದ ಜೀವಗಳು ಒಂದಾಗಿಯೆ ಇನ್ನಿಲ್ಲದಂತಾಗಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.