ಬಿಗ್ ಬಾಸ್ ಮನೆಯ ಮತ್ತೊಂದು ಮುಖ ಬಹಿರಂಗ, ಕಿರಿಕ್ ಕೀರ್ತಿ ಬಿಚ್ಚಿಟ್ರು ಮಹತ್ವದ ಸತ್ಯ
ಬಿಗ್ಬಾಸ್ ಮನೆಯ ನಿಯಮಗಳು ಬಹುತೇಕರಿಗೆ ಗೊತ್ತೇ ಇರುತ್ತದೆ. ಬಿಗ್‌ಬಾಸ್ ಮನೆಯ ಒಳಕ್ಕೆ ಹೋಗಬೇಕಾದರೆ ಬಟ್ಟೆಗಳು-ಔಷಧ ಬಿಟ್ಟರೆ ಬೇರೇನೂ ಒಯ್ಯುವಂತಿಲ್ಲ. ಹೊರಗಿನವರ ಜೊತೆ ಸಂಪರ್ಕಕ್ಕಂತೂ ಅವಕಾಶವೇ ಇಲ್ಲ. ಒಮ್ಮೆ ಬಿಗ್‌ಬಾಸ್ ಸ್ಪರ್ಧಿಗಳು ಮನೆಯ ಒಳಕ್ಕೆ ಪ್ರವೇಶಿಸಿದರೆಂದರೆ ಹೊರಗಿನ ಜಗತ್ತಿನ ಜೊತೆ ಸಂಪರ್ಕ ಕಡಿದುಕೊಂಡರೆಂದೇ ಅರ್ಥ.
ಬಿಗ್‌ಬಾಸ್ ಮನೆಯೊಳಗೆ ಹೋಗಬೇಕಾದರೆ ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. 108 ದಿನಗಳ ಕಾಲ ನಡೆಯುವ ಈ ರಿಯಾಲಿಟಿ ಶೋನಲ್ಲಿ ಹಲವು ಕಠಿಣ ನಿಯಮಗಳನ್ನು ಸ್ಪರ್ಧಿಗಳು ಪಾಲಿಸಲೇಬೇಕಾಗುತ್ತದೆ. ಈ ಬಗ್ಗೆ ಮೊದಲೇ ಸ್ಪರ್ಧಿಗಳಿಗೆ ತಿಳಿಸಲಾಗಿರುತ್ತದೆ. ಮಾತ್ರವಲ್ಲ ನಿಯಮದ ಬಗ್ಗೆ ಮೊದಲೇ ಬಾಂಡ್ ಬರೆಯಿಸಿ ಸ್ಪರ್ಧಿಗಳಿಂದ ಸೈನ್ ಮಾಡಿಸಿರುತ್ತಾರೆ ಎಂದು ಸಹ ಹೇಳುತ್ತಾರೆ.
ಬಿಗ್ ಬಾಸ್‌ನಲ್ಲಿ ಮುಖ್ಯವಾಗಿ ಪಾಲನೆಯಾಗುವ ನಿಯಮಗಳಲ್ಲೊಂದು ಇಲ್ಲಿ ಯಾವುದೇ ಮೊಬೈಲ್ ಬಳಕೆಗೆ ಅವಕಾಶವಿರುವುದಿಲ್ಲ. ಆದರೆ ಕಿರಿಕ್ ಕೀರ್ತಿ ಈ ಹಿಂದೆ ಸ್ಪರ್ಧಿ ಆಗಿದ್ದವರು ಅವರು ಇದೀಗ ಬಿಗ್ಬಾಸ್ ಮನೆಯಲ್ಲಿ ಅವರು ಮೋಬೈಲ್ ಬಳಸಿದ ಕಾರಣ ತಿಳಿಸಿದ್ದಾರೆ. ಹೌದು ಅವರು ಕೊನೆಯ ವಾರದಲ್ಲಿ ಇರುವಾಗ ಅಂದರೆ ಫಿನಾಲೆಗೆ ಹತ್ತಿರ ಬಂದು ಮೇಲೆ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕೇಳಿದ್ದನ್ನು ನೀಡಲಾಗುತ್ತದೆ. ಆಗ ಅವರು ಮೋಬೈಲ್ ಕೇಳಿದ್ದರಂತೆ.
ಹೌದು ಆಗ ದೊಡ್ಡದಾದ ಟ್ಯಾಬ್ ನೀಡಿ ಅದರಿಂದ ಅವರ ಫ್ರೆಂಡ್ ಗೆ ವೀಡಿಯೊ ಕಾಲ್ ಮಾಡಿ ಕೊಡಲಾಗಿತ್ತು ಅವರು ಒಂದೆರಡು ನಿಮಿಷಗಳ ಕಾಲ ಮಾತನಾಡಿದರು ಎಂದು ಹೇಳಿದ್ದಾರೆ. ಅಷ್ಟಕ್ಕೂ ಕಿರಿಕ್ ಕೀರ್ತಿ ಅವರು ಬಿಗ್ ಬಾಸ್ ಮನೆಯಲ್ಲಿ ಚಾರ್ಜರ್ಸ್ ಇದೆ ಮೋಬೈಲ್ ಬಳಸುತ್ತಾರೆ. ಎಂಬಾ ಮಾತು ಕೇಳಿಬಂದಿದ್ದರಿಂದ ಈ ಮಾತನ್ನು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ