ಕರ್ನಾಟಕದ ಮತ್ತೊಂದು ಸ್ವಾಮೀಜಿಯ ಆಟ ತುಂಟಾಟ ಲೀಕ್, ನೆಚ್ಚಿನ ಸ್ವಾಮಿಗಳ ವಿಡಿಯೋ ನೋಡಿ ರೊಚ್ಚಿಗೆದ್ದ ಕರುನಾಡು

 | 
Bd

ಕಾವಿ ತೊಟ್ಟವರ ಕಾಮಕಥೆಗಳು ಒಂದಲ್ಲ ಒಂದು ಕಡೆಯಿಂದ ಹೊರಬೀಳುತ್ತಲೇ ಇವೆ. ಕರ್ನಾಟಕದ ಮುರುಘಾ ಶ್ರೀಗಳನ್ನು ನೆನಪಿಸುವ ಮತ್ತೊಬ್ಬ ಸ್ವಾಮೀಜಿ ಬಹಳ ದಿನಗಳ ನಂತರ ಸಿಕ್ಕಿಬಿದ್ದಿದ್ದಾರೆ. ಹೌದು ಆಂಧ್ರಪ್ರದೇಶದ ವಿಶಾಖಪಟ್ಟಣದ ವೆಂಕೋಜಿಯಲ್ಲಿರುವ ಜ್ಞಾನಾನಂದ ಆಶ್ರಮದ ಪೂರ್ಣಾನಂದ ಸರಸ್ವತಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. 

ಆಶ್ರಮದಲ್ಲೇ ಇದ್ದ, 15ವರ್ಷದ ಹುಡುಗಿ ಮೇಲೆ ಹಲವು ತಿಂಗಳುಗಳಿಂದಲೂ ಅತ್ಯಾಚಾರ ಮಾಡಿರುವ ಆರೋಪ ಹೊತ್ತ ಪೂರ್ಣಾನಂದ ಸರಸ್ವತಿ ಅವರು ಇದೀಗ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ‘ನನ್ನ ಮೇಲೆ ಸ್ವಾಮೀಜಿ ನಿರಂತರವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಚಿತ್ರ ಹಿಂಸೆ ನೀಡಿದ್ದಾರೆ’ ಎಂದು ಸಂತ್ರಸ್ತ ಹುಡುಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಎರಡು ವರ್ಷಗಳ ಹಿಂದೆ ಈ ಹುಡುಗಿಯ ಅಪ್ಪ-ಅಮ್ಮ ತೀರಿ ಹೋದ ಬಳಿಕ ಅಜ್ಜಿಯ ಮೇಲೆ ಇವಳ ಜವಾಬ್ದಾರಿ ಬಿದ್ದಿತ್ತು. 

ಅಜ್ಜಿ ತನ್ನ ಮೊಮ್ಮಗಳನ್ನು ಜ್ಞಾನಾನಂದ ಆಶ್ರಮಕ್ಕೆ ಬಿಟ್ಟಿದ್ದರು. ಆದರೆ ಅಲ್ಲಿ ಸ್ವಾಮೀಜಿ ಕಿರುಕುಳ ಕೊಟ್ಟಿದ್ದಾರೆ ಎಂದು ಆಕೆಯೀಗ ಹೇಳುತ್ತಿದ್ದಾಳೆ. ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಗಿ ಹುಡುಗಿ ವಿಜಯವಾಡ ಪೊಲೀಸ್​ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಹೇಳಿದ್ದಾಳೆ. ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ವಿವೇಕಾನಂದ ಅವರು ‘ಬಾಲಕಿಯ ದೂರನ್ನು ಸ್ವೀಕರಿಸಿದ್ದೇವೆ. 

ಈ ವಿಚಾರದಲ್ಲಿ ತನಿಖೆ ನಡೆಸುತ್ತಿದ್ದೇವೆ. ಪೂರ್ಣಾನಂದ ಸರಸ್ವತಿಯವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಐಪಿಸಿ ಸೆಕ್ಷನ್​ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸ್ವಾಮೀಜಿಯನ್ನು ಶೀಘ್ರವೇ ನ್ಯಾಯಾಂಗ ಬಂಧನಕ್ಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.