ಚೈತ್ರ ವಂ.ಚನೆ ಆರೋಪಕ್ಕೆ ಮತ್ತೊಂದು ಟ್ವಿಸ್ಟ್, ಗೋವಿಂದ ಬಾಬು ಪೂಜಾರಿ ಬಗ್ಗೆ ಕೇಳಿ ಬಂದಿದ್ದು ಏನು ಗೊತ್ತಾ

 | 
Hbh

ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ನಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಗೋವಿಂದ ಪೂಜಾರಿಗೂ ಈಗ ಸಂಕಷ್ಟ ಎದುರಾಗಿದೆ. ಗೋವಿಂದ ಪೂಜಾರಿ ವಿರುದ್ದ ಇಡಿಗೆ ವಕೀಲ ನಟರಾಜ ಶರ್ಮಾ ಎಂಬುವರು ದೂರು ನೀಡಿದ್ದಾರೆ. 5 ಕೋಟಿ ರೂಪಾಯಿ ಅಕ್ರಮ ವ್ಯವಹಾರ ನಡೆಸಲಾಗಿದೆ. 

ಹವಾಲ ಹಣವನ್ನು ಬಳಸಿ ಗೋವಿಂದ ಪೂಜಾರಿ ಹಣ ನೀಡಿದ್ದಾರೆ. ಹೀಗಾಗಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಇಡಿಗೆ ದೂರು ನೀಡಿದ ಬಳಿಕ ಮಾತನಾಡಿದ ವಕೀಲ ನಟರಾಜ ಶರ್ಮಾ ಅವರು, ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ವಿರುದ್ಧ ಕೇಳಿ ಬಂದಿರುವ ವಂಚನೆ ಆರೋಪ ಪ್ರಕರಣ ಇಬ್ಬರು ವ್ಯಕ್ತಿಗಳ ನಡುವೆ ನಡೆದ ಘಟನೆ. 

ಆದರೆ ಗೋವಿಂದ ಪೂಜಾರಿ ನೀಡಿರುವ ದೂರು ತೆಗೆದುಕೊಂಡರೆ ಇದು ಪ್ರಜಾಪ್ರಭುತ್ವದ ವಿರುದ್ಧ ನಡೆದ ಕ್ರೈಂ. ಚೈತ್ರಾ ವಿರುದ್ಧ ವಂಚನೆ ಪ್ರಕರಣ ಅಷ್ಟೇ, ಆದರೆ ಪೂಜಾರಿ ಮಾಡಿರುವುದು ದೇಶದ್ರೋಹದ ಕೆಲಸ, ಸಮಾಜಘಾತುಕ ಕೆಲಸ ಅಂತ ಹೇಳಬಹುದು. ಗೋವಿಂದ ಪೂಜಾರಿ ಅವರೇ ನೀಡಿರುವ ದೂರಿನ ಪ್ರಕಾರ, ಮೂರು ಕೋಟಿ ರೂಪಾಯಿಯನ್ನು ನೀಡಲು 10 ರೂಪಾಯಿ ಬಳಕೆ ಮಾಡಿದ್ದಾರೆ. 

10 ರೂಪಾಯಿ ನೋಟು ಕೊಟ್ಟ ಬಳಿಕವೇ ದುಡ್ಡು ನೀಡಿದ್ದಾಗಿ ಅವರೇ ದೂರಿನಲ್ಲಿ ಹೇಳಿದ್ದಾರೆ. ಇದರಿಂದ ಕ್ಲೀನ್​ ಆಗಿ ಗೊತ್ತಾಗುತ್ತೆ, ಇದರಲ್ಲಿ ಹವಾಲಾ ಹಣ ವರ್ಗಾವಣೆ ಆಗಿದೆ ಅಂತ. ಸಿಸಿಬಿ ಅಧಿಕಾರಿಗಳು ಈ ಬಗ್ಗೆ ತನಿಖೆ ಮಾಡಬೇಕಿತ್ತು. ಅವರ ಮೇಲೆಯೇ ಸ್ವಯಂ ದೂರು ದಾಖಲು ಮಾಡಿಕೊಳ್ಳಬೇಕಿತ್ತು. ಆದ್ದರಿಂದ ನಾವು ಇವತ್ತು ಇಡಿಗೆ ದೂರು ಸಲ್ಲಿಕೆ ಮಾಡಿದ್ದೇವೆ ಎಂದು ವಕೀಲ ತಿಳಿಸಿದ್ದಾರೆ.

ಟಿಕೆಟ್‌ ಗಾಗಿ ಐದು ಕೋಟಿ ರೂಪಾಯಿ ಕೊಟ್ಟು ಇಕ್ಕಕ್ಕಿಟ್ಟಿಗೆ ಸಿಲುಕಿದ್ದ ಗೋವಿಂದ ಪೂಜಾರಿ ಘಟನೆ ಬಳಿಕ ತಾನೇ ತನಿಖೆಗಿಳಿದಿದ್ದರು ಎಂಬ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಮೋಸ ಹೋಗಿರೋದು ಗೊತ್ತಾಗಿ ಗೋವಿಂದಬಾಬು ಪೂಜಾರಿ ತನ್ನ ಸ್ನೇಹಿತ ಮಂಜು ಮೂಲಕ ಮಾಹಿತಿ ಸಂಗ್ರಹಣೆ ಮಾಡ್ತಿದ್ದರಂತೆ. ಅಲ್ಲದೆ ರಮೇಶ್, ಧನರಾಜ್ ನ್ನ ಗೋವಿಂದ ಬಾಬುಗೆ ಹಿಡಿದುಕೊಟ್ಟಿದ್ದನಂತೆ. 

ಈ ವಿಚಾರ ಸಿಸಿಬಿ ತನಿಖೆ ವೇಳೆ ಬಯಲಾಗಿದ್ದು, ಹಿಂದೂ ಕಾರ್ಯಕರ್ತ ಮಂಜುಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.ಒಟ್ಟಿನಲ್ಲಿ ಹೇಳುವುದಾದರೆ ಕೇಸ್ ಉಲ್ಟಾ ಆಗುವ ಎಲ್ಲ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.