ಅನುಪಮಾ ಗೌಡ ಕಣ್ಮರೆ; ಅವಕಾಶ ಸಿಗದ ಕಾರಣ ಚಿತ್ರರಂಗದಿಂದ ದೂರವಾದರಾ ಕಿರುತೆರೆ ಅಕ್ಕ

 | 
ರರಗ

ಅನುಪಮಾ ಗೌಡ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಕಮ್ ನಿರೂಪಕಿ ಅನುಪಮಾ ಗೌಡ ರಿಯಲ್‌ ಲೈಫ್‌ ಸ್ಟೋರಿ ಕೇಳಿದ್ರೆ ನಿಮಗೂ ಮನಸ್ಸು ನೋವಾಗುತ್ತೆ. ಮನೆಯ ಜವಾಬ್ದಾರಿಯನ್ನ ಹೊರಬೇಕಾದಂತಹ ತಂದೆ 24 ಗಂಟೆಯೂ ಮದ್ಯಪಾನ ಸೇವನೆ ಮಾಡಿಕೊಂಡು ಹಾಗು ಮನೆಯ ಜವಾಬ್ದಾರಿಯನ್ನ ಸಂಪೂರ್ಣವಾಗಿ ಮರೆತುಬಿಟ್ರೆ ಮನೆಯ ಕಥೆ ಏನಾಗಬಾರದು ಹೇಳಿ.

ಆ ಮನೆ ಸಂಪೂರ್ಣವಾಗಿ ಅಲ್ಲೋಲ ಕಲ್ಲೋಲವಾಗುತ್ತೆ. ಮಕ್ಕಳ ಪರಿಸ್ಥಿತಿಯಂತು ನಾವು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದು ಕೇವಲ ಒಂದು ಮನೆಯ ಕಥೆಯಲ್ಲ ಸಾಕಷ್ಟು ಮನೆಗಳ ಪರಿಸ್ಥಿತಿ ಇದು. ಹೌದು ನಟಿ ಹಾಗು ನಿರೂಪಕಿ ಅನುಪಮಾ ಗೌಡ ಕಥೆಯು ಇದಕ್ಕಿಂತ ಭಿನ್ನವಾಗಿ ಇರಲಿಲ್ಲ. ಬಿಗ್‌ ಬಾಸ್‌ ಸ್ಪರ್ಧಿಯು ಆಗಿದ್ದಂತಹ  ಅನುಪಮಾ ಗೌಡ ಸದಾ ಪಟ,ಪಟ ಮಾತನಾಡುತ್ತಾ, ನಗು ನಗುತ್ತಲೇ ಇರುತ್ತಾರೆ. 

ಹಾಗಾದ್ರೆ ಅನುಪಮಾ ಗೌಡ ಜೀವನ ಕೂಡ ನಗು ಮುಖದ ರೀತಿಯಲ್ಲೇ ಸಂತೋಷವಾಗಿತ್ತಾ ಅಂದ್ರೆ ಖಂಡಿತವಾಗಿಯೂ ಇಲ್ಲ. ಅನುಪಮಾ ಗೌಡ ಬೆಂಕಿಯಲ್ಲಿ ಅರಳಿದ ಹೂವು ಅಂತಾ ಹೇಳಿದ್ರು ತಪ್ಪಾಗೋದಿಲ್ಲ. ಅನುಪಮಾ ಗೌಡ ಕಥೆ ಸಾಕಷ್ಟು ಜನರಿಗೆ ಸ್ಪೂರ್ತಿಯು ಹೌದು ಅನುಪಮಾ ತಮ್ಮ ಬಾಲ್ಯದಲ್ಲಿ ಒಂದು ಹೊತ್ತು ಊಟಕ್ಕು ಪರೆದಾಡಿದ್ದಂತಹ ನಟಿ. ಇವರ ತಂದೆ ಸಿನಿಮಾಗಳಲ್ಲಿ ಅಸೋಸಿಯೇಟ್‌ ಆಗಿ ಕೆಲಸ ಮಾಡುತ್ತಿದ್ದರು ಆದ್ರೆ ಅವರಿಗೆ ಅಷ್ಟರ ಮಟ್ಟಿಗೆ ಹಣ ಸಿಕ್ತಾ ಇರಲಿಲ್ಲ. ಮತ್ತೊಂದು ಕಡೆ ಅವರ ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲಿ ಪ್ರಮುಖವಾಗಿ ಅವರ ತಂದೆ ಇಡೀ ಕುಟುಂಬದ ಜವಾಬ್ದಾರಿಯನ್ನ ಹೊತ್ತಿಕೊಳ್ಳಬೇಕಾಗಿತ್ತು. 

ಬರುತ್ತಿದ್ದಂತಹ ಒಂದಷ್ಟು ಹಣದಲ್ಲಿ ಕುಟುಂಬವನ್ನ ಸಾಗಿಸೋದು ಕಷ್ಟಕರವಾಗಿತ್ತು.ಆದ್ರೆ ಅನುಪಮಾ ಗೌಡ ಅವರ ತಂದೆ ದಿನದ 24 ಗಂಟೆಯೂ ಮಧ್ಯಪಾನ ಸೇವನೆಯಲ್ಲೇ ಇರ್ತಾಇದ್ರಂತೆ. ಇಡೀ ಮನೆಯನ್ನೇ ಮರೆತು ಬಿಟ್ಟಿದ್ರು ಅವರ ತಂದೆ. ತನ್ನ ತಾಯಿ ಜೊತೆ ಅನುಪಮಾ ಪ್ರತಿದಿನ ಕಣ್ಣೀರು ಹಾಕ್ತಾಇದ್ರು. ಆದ್ರೆ ಅವರ ತಂದೆ ಹೆಂಡತಿ ಮಕ್ಕಳ ಬಗ್ಗೆ ಯೋಚನೆಯೂ ಮಾಡ್ತಾಇರಲಿಲ್ಲ. ಇದೇ ಕಾರಣದಿಂದ ಅನುಪಮಾ ಗೌಡ ವಿದ್ಯಾಭ್ಯಾಸ ಮಾಡಿದ್ದು ಕೇವಲ 6 ನೇ ಕ್ಲಾಸ್‌ ಎಂದು ಹೇಳಲಾಗುತ್ತೆ. 

ನಂತರ ಅನುಪಮಾಗೆ ಶಿಕ್ಷಣ ಮುಂದುವರೆಸಲು ಸಾಧ್ಯವಾಗಲಿಲ್ಲ ಬದಲಿಗೆ ಮನೆ ಕೆಲಸಗಳಿಗು ಅನುಪಮಾ ಹೊಗ್ತಾಇದ್ದರಂತೆ. ನಂತರ ಅನುಪಮಾ ಅವರ ತಂದೆ ಅಸೋಸಿಯೇಟ್‌ ಆಗಿದ್ದ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಲೋಕೇಶ್ ಪತ್ರಿಕೆ ಸಿನಿಮಾದ ಮೂಲಕ ಬಾಲ ಕಲಾವಿದೆಯಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ನಂತರ ಸಣ್ಣ ಪುಟ್ಟ ಪಾತ್ರಗಳು ಸಿಗಲು ಶುರುವಾಗುತ್ತೆ. ನಂತರ ಅಕ್ಕ ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಪರಿಚಿತರಾದರು. ಈ ಧಾರಾವಾಹಿಯಲ್ಲಿ ದ್ವಿಪಾತ್ರ ನಿಭಾಹಿಸುವುದರ ಮೂಲಕ ಸೈ ಎನಿಸಿಕೊಂಡರು. ಈಗ ಕೆಲ ರಿಯಾಲಿಟಿ ಶೋನಲ್ಲಿ ಮಾತ್ರ ಕಾಣಿಸಿ ಕೊಳ್ಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.