ಲವ್ ಮಾಡೋ ನೆಪದಲ್ಲಿ ತಿಂದು ತೇಗಿಬಿಟ್ಟ, ಬ್ರೇಕಪ್ ವಿಚಾರವನ್ನು ಬಹಿರಂಗ ಪಡಿಸಿದ ಅನುಪಮ ಗೌಡ
| Jul 12, 2025, 14:15 IST
ಡಾಗ್ ಲವರ್. ಅವರಿಗೆ ನಾಯಿಗಳನ್ನು ಸಾಕುವುದು ತುಂಬಾ ಇಷ್ಟ. ಮನೆಯಲ್ಲಿ 3 ರಿಂದ ನಾಲ್ಕು ನಾಯಿಗಳನ್ನು ಸಾಕುತ್ತಿದ್ದಾರೆ. 'ಲಂಕೇಶ್ ಪತ್ರಿಕೆ' ಚಿತ್ರದಲ್ಲಿ ಅನುಪಮಾ ಗೌಡ ಬಾಲನಟಿಯಾಗಿ ಮಿಂಚಿದ್ದರು. ತಂದೆ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಬಣ್ಣದಲೋಕದ ನಂಟು ಬೆಳೆಯಲು ಸುಲಭವಾಯಿತು.
ನಾನು ಹಲವಾರು ವರ್ಷಗಳಿಂದ ಪ್ರೀತಿಸಿ ಇನ್ನೇನು ಮದುವೆಯಾಗಿ ಸೆಟಲ್ ಆಗಬೇಕು ಎನ್ನುವಾಗ ನನ್ನ ಲವ್ ಬ್ರೇಕ್ ಅಪ್ ಆಯ್ತು. ದುಡಿದ ಹಣವನ್ನೆಲ್ಲ ಹಾಕಿ ಒಂದು ಹೊಸ ಬ್ಯುಸಿನೆಸ್ ಆರಂಭಿಸಿದಾಗ ಅದರಲ್ಲೂ ತುಂಬಾ ಲಾಸ್ ಆಯ್ತು. ಈ ಎಲ್ಲ ಕಾರಣಕ್ಕೆ ನನಗೆ ಜೀವನದಲ್ಲಿ ನೀನು ಉಳಿದಿಲ್ಲ ಎಂಬ ನಿರ್ಧಾರಕ್ಕೆ ಬಂದು ಸಾಯುವ ಯೋಚನೆ ಮಾಡಿದ್ದೆ. ಸೂಸೈಡ್ ಅಟ್ಟೆಂಪ್ಟ್ ಕೂಡ ಮಾಡಿದೆ ಆದರೆ ಸಾಯಲಿಲ್ಲ. ಬಹಳ ಖಿನ್ನತೆಯಲ್ಲಿದ್ದೆ. ಅಂತಹ ಸಂದರ್ಭದಲ್ಲಿ ನನ್ನ ಜೊತೆಗಿದ್ದವರು ನನ್ನ ಗೆಳೆಯರು ಎಂದು ತಮ್ಮ ನೋವು ಹಾಗೂ ಖಿನ್ನತೆ ಬಗ್ಗೆ ಮಾತನಾಡಿದ್ದಾರೆ ಅನುಪಮ ಗೌಡ
ಲವ್ ಬ್ರೇಕ್ ಅಪ್ ಆದಾಗ ಬಿಸಿನೆಸ್ ಲಾಸ್ ಆದಾಗ ನನ್ನ ಜೊತೆಗೆ ಯಾರು ಇರಲಿಲ್ಲ. ನನಗೆ ಜೀವನವೇ ಬೇಡ ಎನಿಸಿತ್ತು. ಆಗ ನನ್ನ ಒಂದು ಫ್ರೆಂಡ್ ಸರ್ಕಲ್ ನನ್ನ ಜೊತೆಗೆ ನಿಂತು ನನ್ನನ್ನು ಸಪೋರ್ಟ್ ಮಾಡಿದರು. ಪ್ರತಿದಿನ ನನ್ನನ್ನು ನೋಡಲು ಮನೆಗೆ ಬರುತ್ತಿದ್ದರು. ಎಷ್ಟೋ ಬಾರಿ ನಾನು ಅವರಿಗೆ ಫೋನ್ ಮಾಡಿ ಗಂಟೆಗಟ್ಟಲೆ ಅತ್ತಿದ್ದಿದೆ. ಆಗೆಲ್ಲ ತಾಳ್ಮೆಯಿಂದ ನನ್ನೊಂದಿಗೆ ಇದ್ದರೂ ನನ್ನ ಗೆಳೆಯರು, ಆ ರೀತಿಯ ಒಂದು ಫ್ರೆಂಡ್ಸ್ ಸರ್ಕಲ್‌ನ ಇಟ್ಕೊಂಡಿರೋದಿಕ್ಕೆ ನಾನು ಬಹಳ ಸಂತೋಷ ಪಡ್ತೀನಿ. ಅವರೆಲ್ಲರ ಸಹಾಯದಿಂದ ನಾನು ಮತ್ತೆ ಜೀವನವನ್ನು ಎದುರಿಸಲು ತಯಾರಾದೆ ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ನಟಿ ಅನುಪಮಾ ಗೌಡ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023



