ಚೀನಾ ದೇಶದಲ್ಲಿ ಸಿಕ್ಕಿಹಾಕಿಕೊಂಡ ಅನುಷಾ ರೈ, ಸದ್ಯದ ಪರಿಸ್ಥಿತಿ ಬಗ್ಗೆ ಸ್ಪಷ್ಟತೆ ಕೊಟ್ಟ ಬಿಗ್ ಬಾಸ್ ಸ್ಪರ್ಧಿ
Jan 7, 2025, 15:39 IST
|
ಕಳೆದ ಕೆಲ ದಿನಗಳಿಂದ ಜನರ ಮನದಲ್ಲಿ ಭೀತಿ ಆರಂಭವಾಗಿದೆ.ಕೋವಿಡ್ 19 ಬಳಿಕ ಇದೀಗ HMPV ವೈರಸ್ ಭೀತಿ ಶುರುವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಎರಡು, ಗುಜರಾತ್ ಒಂದು, ತಮಿಳುನಾಡಿನಲ್ಲಿ 2 ಪ್ರಕರಣ ವರದಿಯಾಗಿದೆ. ನಗರದಲ್ಲಿ ಇಬ್ಬರು ಮಕ್ಕಳಲ್ಲಿ ಚೀನಾದ ವೈರಸ್ ಪತ್ತೆ ಆಗಿದೆ. ಯಾರು ಆತಂಕ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನು ಬೆಂಗಳೂರಿನಲ್ಲಿ 3 ತಿಂಗಳ ಮಗು ಹಾಗೂ 8 ತಿಂಗಳ ಮಗುವಿಗೆ ವೈರಸ್ ಸೋಂಕು ತಲುಲಿರುವುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ದೇಶದ ಮಾಧ್ಯಮಗಳಲ್ಲಿ ಈ ವೈರಸ್ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಚೀನಾದಲ್ಲಿ ಇದರಿಂದ ಭಾರೀ ಸಮಸ್ಯೆ ಎದುರಾಗಿದೆ ಎನ್ನುವ ಅರ್ಥದಲ್ಲಿ ಸುದ್ದಿ ವೈರಲ್ ಆಗುತ್ತಿದೆ. ಆದರೆ ಅದೇ ದೇಶದಲ್ಲಿರುವ ಕೆಲವರು ಯಾರು ಹೆದರಬೇಡಿ ಅಂತಕ ಸಮಸ್ಯೆ ಏನು ಇಲ್ಲ ಎಂದು ವಿಡಿಯೋ ಮಾಡಿ ಹೇಳುತ್ತಿದ್ದಾರೆ.
ಸದ್ಯ ಬಿಗ್‌ಬಾಸ್ ಖ್ಯಾತಿಯ ನಟಿ ಅನುಷಾ ರೈ ಚೀನಾ ಪಕ್ಕದ ಹಾಂಕಾಂಗ್ ಪ್ರವಾಸದಲ್ಲಿದ್ದಾರೆ. ಆಕೆ ಕೂಡ ಈ ಬಗ್ಗೆ ವೀಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಚೀನಾದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. HMPV ವೈರಸ್ ಕಾರಣಕ್ಕೆ ಅಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ ಎನ್ನುವ ಅರ್ಥದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ಸಾಕಷ್ಟು ಜನ ಕನ್ನಡಿಗರು ಕೂಡ ಈ ಬಗ್ಗೆ ವೀಡಿಯೋ ಮಾಡಿ ಸ್ಪಷ್ಟನೆ ನೀಡುತ್ತಿದ್ದಾರೆ.
ಅನುಷಾ ಮಾತನಾಡಿ ಸಾಕಷ್ಟು ಜನ ನನಗೆ ಮೆಸೇಜ್ ಮಾಡಿ ಹೇಳುತ್ತಿದ್ದೀರಾ? ನೀವು ಚಿತ್ರದಲ್ಲಿ ಇದ್ದೀರಾ? ಎಚ್ಚರ ಅಂತ. ನಾನು ಇರುವುದು ಹಾಂಕಾಂಗ್‌ನಲ್ಲಿ. ಇಲ್ಲಿ ಎಲ್ಲರೂ ನಾರ್ಮಲ್ ಆಗಿದ್ದಾರೆ. ಯಾವುದೇ ಪ್ಯಾಂಡಮಿಕ್ ಕಾಣಿಸುತ್ತಿಲ್ಲ. ಯಾರು ಕೂಡ ಮಾಸ್ಕ್ ಹಾಕಿಕೊಳ್ಳುವುದು, ಅಥವಾ ಟೆನ್ಷನ್‌ನಲ್ಲಿ ಇರುವಂತಹ ಪರಿಸ್ಥಿತಿ ಇಲ್ಲ, ಜನಜೀವನ ಸಹಜವಾಗಿಯೇ ಇದೆ ಎಂದು ಹೇಳಿದ್ದಾರೆ. ಎಲ್ಲರೂ ನನ್ನ ಬಗ್ಗೆ ವಿಚಾರಿಸುತ್ತಿದ್ದೀರಾ? ಅಲ್ಲಿರಬೇಡಿ ಬೇಗ ಬನ್ನಿ ಅಂತ ಹೇಳುತ್ತಿದ್ದೀರಾ.
ಕಂಡಿತ ಬರ್ತೀನಿ. ಟೆನ್ಷನ್ ಬೇಡ. ನಾವು ಭಾರತೀಯರು ಸದಾ ಸೇಫ್ ಆಗಿ ಇರ್ತೀವಿ. ಅಂತಹ ಸಮಸ್ಯೆ ಇಲ್ಲಿ ಕಾಣುತ್ತಿಲ್ಲ ಎಂದು ಅನುಷಾ ವಿವರಿಸಿದ್ದಾರೆ. ಚೀನ ಬಳಿಕ ಹಾಂಕಾಂಗ್‌ಗೂ HMPV ವೈರಸ್ ಲಗ್ಗೆ ಇಟ್ಟಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅಲ್ಲಿ ಅಂತಹ ಪರಿಸ್ಥಿತಿ ಇದ್ದಂತೆ ಕಾಣುತ್ತಿಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.