ಕೊನೆಗೂ ಕರುನಾಡಿಗೆ ಸಿಹಿಸುದ್ದಿ ಕೊಟ್ಟ ಅನುಷ್ಕಾ ಶೆಟ್ಟಿ; ಅಭುಮಾನಿಗಳಿಗೆ ಹಬ್ಬ

 | 
Ga

ಬಾಹುಬಲಿಯ ಸುಂದರಿ, ಅರುಂಧತಿಯ ಮನಮೋಹಕ ನಟಿ ಬರೋಬ್ಬರಿ 2 ದಶಕಗಳ ಕಾಲ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದ ಅನುಷ್ಕಾ ಶೆಟ್ಟಿ ಬಾಹುಬಲಿ ಸಿನಿಮಾ ಬಳಿಕ ಕೊಂಚ ವಿರಾಮ ತೆಗೆದುಕೊಂಡು ಮತ್ತೆ ಮಿಸ್ ಅಂಡ್ ಮಿಸ್ಟರ್ ಪೋಲಿ ಶೆಟ್ಟಿ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಇದೀಗ ಟಾಲಿವುಡ್ ಅಂಗಳದಲ್ಲಿ ಅನುಷ್ಕಾ ಮದುವೆ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡ್ತಿದೆ.

ಕನ್ನಡ ಚಿತ್ರರಂಗದ ದೊಡ್ಡ ನಿರ್ಮಾಪಕರ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ ನಡೆಯಲಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ. ಶೀಘ್ರದಲ್ಲೇ ಅನುಷ್ಕಾ ಶೆಟ್ಟಿ ಹಸೆಮಣೆ ಏರಲಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ಶೀಘ್ರದಲ್ಲೇ ನಿರ್ಮಾಪಕನ ಜೊತೆ ಅನುಷ್ಕಾ ನಿಶ್ಚಿತಾರ್ಥ ಕೂಡ ನಡೆಯಲಿದೆ ಎನ್ನಲಾಗ್ತಿದೆ.

ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಬಾಹುಬಲಿ ಸಿನಿಮಾ ಮಾಡಿದ ಬಳಿಕ ಇಬ್ಬರ ನಡುವೆ ಪ್ರೀತಿ ಮೂಡಿದೆ ಎನ್ನುವ ಸುದ್ದಿ ಸಖತ್ ಸದ್ದು ಮಾಡಿತ್ತು. ಇಷ್ಟು ದಿನಗಳ ಕಾಲ ನಟಿ ಅನುಷ್ಕಾ ಶೆಟ್ಟಿ ಹೆಸರು ಬಾಹುಬಲಿ ನಟ ಪ್ರಭಾಸ್ ಜೊತೆ ಕೇಳಿ ಬರುತ್ತಿತ್ತು. ಇಬ್ಬರು ಡೇಟಿಂಗ್ ಮಾಡ್ತಿದ್ದು ಶೀಘ್ರವೇ ಮದುವೆ ಆಗ್ತಾರೆ ಎನ್ನಲಾಗಿತ್ತು. ಆದ್ರೆ ಇದೀಗ ಅನುಷ್ಕಾ ಮದುವೆ ಬಗ್ಗೆ ಹೊಸ ಸುದ್ದಿ ಹೊರಬಿದ್ದಿದೆ.

ಆದ್ರೆ ಅನುಷ್ಕಾ ಮದುವೆ ಸುದ್ದಿ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಅನುಷ್ಕಾ ಶೆಟ್ಟಿ ಕುಟುಂಬಸ್ಥರು ಯಾವುದೇ ಮಾಹಿತಿ ನೀಡಿಲ್ಲ. ಈ ವರ್ಷಾಂತ್ಯದಲ್ಲಿ ಅನುಷ್ಕಾ ಮದುವೆ ನಡೆಯಲಿದೆಯಂತೆ. ಅಲ್ಲದೇ ನಿರ್ಮಾಪಕರಿಗೆ 42 ವರ್ಷ ಎಂಬ ಸುದ್ದಿ ವೈರಲ್ ಆಗುತ್ತಿದೆ.ಮಂಗಳೂರಿನ ಚೆಲುವೆ ಅನುಷ್ಕಾ ಶೆಟ್ಟಿ ಈಗ ಮಹಿಳಾ ಪ್ರಧಾನ ಸಿನಿಮಾ, ಸಣ್ಣ ಬಜೆಟ್ನ ಸಿನಿಮಾಗಳಿಗೆ ಮಾತ್ರವೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. 

ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ್ದ ಅನುಷ್ಕಾ ಶೆಟ್ಟಿ ಇದೀಗ ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.