ಮಹಾ ಕುಂಭವೇಳದಲ್ಲಿ ಸಿಹಿಸುದ್ದಿ ಕೊಟ್ಟ ಅನುಶ್ರೀ ಹಾಗೂ ರಾಜ್ ಬಿ ಶೆಟ್ಟಿ, ಇದೇ ವರ್ಷ ಹಬ್ಬದೂಟ
Feb 1, 2025, 10:42 IST
|

ಪ್ರಯಾಗ್‌ರಾಜ್ ಮಹಾಕುಂಭಮೇಳಕ್ಕೆ ಹರಿದು ಬರುತ್ತಿರುವ ಭಕ್ತಸಾಗರ ಇನ್ನೂ ನಿಂತಿಲ್ಲ. ಮೌನಿ ಅಮಾವಾಸ್ಯೆಯ ಒಂದೇ ದಿನ 7 ಕೋಟಿ 50 ಲಕ್ಷ ಭಕ್ತರು ಅಮೃತಸ್ನಾನ ಮಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮೌನಿ ಅಮಾವಾಸ್ಯೆಯ ಬಳಿಕವೂ ಕೋಟ್ಯಾಂತರ ಜನ ಪುಣ್ಯಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಪ್ರಯಾಣ ಬೆಳೆಸುತ್ತಿದ್ದಾರೆ.
ಪ್ರಯಾಗ್ ರಾಜ್ ಮಹಾ ಕುಂಭಮೇಳದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಕೂಡ ಭೇಟಿ ಕೊಟ್ಟಿದ್ದಾರೆ. ಖ್ಯಾತ ನಿರೂಪಕಿ ಅನುಶ್ರೀ, ಚಾರ್ಲಿ ನಿರ್ದೇಶಕ ಕಿರಣ್ ರಾಜ್, ನಿರ್ದೇಶಕ ರಾಜ್ ಬಿ. ಶೆಟ್ಟಿ ಗೆಳೆಯರ ಜೊತೆ ಪುಣ್ಯಸ್ನಾನ ಮಾಡಿದ್ದಾರೆ.ಇನ್ನು ನಟಿ ನಿರೂಪಕಿ ಅನುಶ್ರೀ ಪುಣ್ಯ ನದಿಯಲ್ಲಿ ಮುಳುಗಿ ಏಳುವಾಗ ತುಂಬಾ ಭಾವುಕ ಅನುಭವವನ್ನು ನಾನು ಅನುಭವಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಆ ದೈವಿಕ ಅನುಭವ ಕುಂಭ ಮೇಳದಲ್ಲಿ ಭಾಗಿಯಾದವರರಿಗೆ ಮಾತ್ರ ಸಿಗುತ್ತದೆ. ಒಂದು ಬಿಸಿ ವಸ್ತುವನ್ನು ಮುಟ್ಟಿದವರಿಗೆ ಹೇಗೆ ತಿಳಿಯುತ್ತದೆಯೋ ಈ ಅನುಭವ ಸಹ ಹಾಗೆಯೇ. ಆ ಅದ್ಭುತ ಅನುಭವವನ್ನು ಸುಧಾರಿಸಿಕೊಳ್ಳಲು ಸ್ವಲ್ಪ ಸಮಯಬೇಕು. ಹರಹರ ಮಹಾದೇವ ಎಂದು ತೆರಳುವಾಗ ಅಲ್ಲಿನ ದೀಪಾಲಂಕಾರಗಳಲ್ಲಿ ಶಿವನೇ ಆಶೀರ್ವಾದ ಮಾಡುವಂತೆ ಕಾಣುತ್ತದೆ. ನಾನಂತೂ ನೀರಿನಲ್ಲಿ ಮುಳುಗಿದಾಗೆಲ್ಲ ಕಣ್ಣೀರು ಹಾಕಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
144 ವರ್ಷಕ್ಕೆ ಒಮ್ಮೆ ಇದು ನಡೆಯೋದು, ಎಷ್ಟು ಜನರಿಗೆ ಈ ಅವಕಾಶ ಸಿಗುತ್ತೆ? ಎಲ್ಲಾ ಹೇಳ್ತಾರೆ ಇದು ಕಲಿಗಾಲ ಎಲ್ಲ ಪಾಪ ಮಾಡಿದವರು ಅಂತಾರೆ. ಆದರೆ ನನಗೆ ಅನ್ನಿಸಿದ್ದು, ಈ ಭಾಗ್ಯ ನಮಗೆ ಸಿಕ್ಕಿದೆ. ನಾವು ಪುಣ್ಯವಂತರು ಎಂದು ಹೇಳಿಕೊಂಡಿದ್ದಾರೆ.ಇಲ್ಲಿ ಮಹಿಳೆಯರಿಗೆ ಸುರಕ್ಷತೆ ಇದೆ. ಇಂತಹ ವ್ಯವಸ್ಥೆ ಬಗ್ಗೆ ಹೆಮ್ಮೆ ಇದೆ. ಪೊಲೀಸ್ ಸಿಬ್ಬಂದಿ ಸಹ ಬಹಳ ಸಹಾಯ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.ನಾವು ಐದು ದಿನಗಳ ಕಾಲ ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಇನ್ನೂ ನಾವು ವಾರಣಾಸಿಗೆ ಹೋಗಬೇಕು. ಅಯೋಧ್ಯೆಯ ಬಾಲ ರಾಮನ ದರ್ಶನಕ್ಕೆ ಹೋಗಲು ಪ್ರಯತ್ನಿಸುತ್ತೇವೆ. ಇಂದು ಅಖಾಡಕ್ಕೆ ಹೋಗಿ ಸಾಧುಗಳ ಆಶೀರ್ವಾದ ಪಡೆಯಲು ತೆರಳುತ್ತಿದ್ದೇವೆ ಎಂದು ತಿಳಿಸಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.