ಅನುಶ್ರೀ ಹಾಗೂ ರೋಷನ್ ಮದುವೆಗೆ ಕಾರಣ ಅಪ್ಪು, ದೊಡ್ಮನೆಗೂ ರೋಷನ್ ಗೂ ಯಾವ ಸಂಬಂಧ ಗೊತ್ತಾ

 | 
ಕಕಹ

 ಆ್ಯಂಕರ್ ಅನುಶ್ರೀ ಮದುವೆ: ಆ್ಯಂಕರ್ ಅನುಶ್ರೀ ಹಾಗೂ ರೋಷನ್ ಮದುವೆ ಸದ್ಯ ಸುದ್ದಿಯಲ್ಲಿದೆ. ಇವರಿಬ್ಬರ ಪರಿಚಯಕ್ಕೆ ಪುನೀತ್ ರಾಜಕುಮಾರ್ ಕಾರಣ. ಹೌದು ಆ್ಯಂಕರ್ ಅನುಶ್ರೀ ವಿವಾಹ ವಿಚಾರ ಸದ್ಯ ಸುದ್ದಿ ಆಗುತ್ತಿದೆ. ಆಗಸ್ಟ್ 28ರಂದು ಇವರ ಮದುವೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. 

 

   ಹೀಗಿರುವಾಗಲೇ ಅನುಶ್ರೀ ಅವರಿಗೂ ರೋಷನ್​ಗೂ ಪರಿಚಯ ಬೆಳೆದಿದ್ದು ಹೇಗೆ ಎನ್ನುವ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕೊರೆಯುತ್ತಿತ್ತು. ಇದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಪುನೀತ್ ನಿರ್ಮಿಸಿದ ‘ಗಂಧದ ಗುಡಿ’ ಡಾಕ್ಯುಮೆಂಟರಿ ಅವರು ನಿಧನ ಹೊಂದಿದ ಬಳಿಕ ರಿಲೀಸ್ ಆಯಿತು. 

    ಇದರ ಪ್ರೀ ರಿಲೀಸ್ ಈವೆಂಟ್​ ಪ್ಯಾಲೇಸ್ ಗ್ರೌಂಡ್​ನಲ್ಲಿ ‘ಪುನೀತ ಪರ್ವ’ ಹೆಸರಲ್ಲಿ ಅಶ್ವಿನಿ ಅವರು ಆಯೋಜಿಸಿದ್ದರು. ಚಿತ್ರರಂಗದ ಹಲವರು ಇದರಲ್ಲಿ ಭಾಗಿ ಆಗಿದ್ದರು. ಈ ಈವೆಂಟ್​ಗೆ ಆ್ಯಂಕರಿಂಗ್ ಮಾಡಿದ್ದು ಅನುಶ್ರೀ ಅವರು. ಈ ಈವೆಂಟ್​ನ ನಿರ್ವಹಣೆಯಲ್ಲಿ ರೋಷನ್ ತೊಡಗಿಕೊಂಡಿದ್ದರು.
       ಈ ಈವೆಂಟ್​ನಲ್ಲಿ ಅನುಶ್ರೀ ಹಾಗೂ ರೋಷನ್ ಮಧ್ಯೆ ಹೆಚ್ಚು ಆಪ್ತತೆ ಬೆಳೆಯಿತು. ನಂತರ ಸ್ನೇಹ ಪ್ರೀತಿಗೆ ತಿರುಗಿ ಮದುವೆ ತನಕ ಬಂದು ನಿಂತಿದೆ. ಹೌದು ಆಗಸ್ಟ್ 28ರಂದು ಆ್ಯಂಕರ್ ಅನುಶ್ರೀ ಹಾಗೂ ರೋಷನ್ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.