ಸ್ವಂತ ತಂದೆ ಬಿಟ್ಟು ಹೋಗುವುದಕ್ಕೆ ಕಾರಣ ಕೇಳಿದ ಅನುಶ್ರೀ; ಕ ಣ್ಣೀರಿಟ್ಟ ಕನ್ನಡಿಗರು

 | 
U
ನಟಿ, ನಿರೂಪಕಿ ಅನುಶ್ರೀ ಚಟ ಪಟನೆ ಮಾತನಾಡುತ್ತಲೇ ಮನ ಸೆಳೆಯುತ್ತಾರೆ. ಕನ್ನಡ ಪ್ರಖ್ಯಾತ ನಿರೂಪಕಿ ಅನುಶ್ರೀ ಬೆಳೆದು ಬಂದ ಹಾದಿ ಅನೇಕರಿಗೆ ತಿಳಿದೇ ಇದೆ. ಈ ಬಗ್ಗೆ ಅನೇಕ ಸಂದರ್ಶನದಲ್ಲಿ ಅನುಶ್ರೀ ಹೇಳಿಕೊಂಡಿದ್ದಾರೆ. ಆದರೆ ಈ ಬಾರಿ ಸಂದರ್ಶನವೊಂದರಲ್ಲಿ ಭಾಗವಹಿಸಿದ ಅನುಶ್ರೀ ತನ್ನ ತಂದೆ ಯಾವ ಕಾರಣಕ್ಕಾಗಿ ಅವರನ್ನು ಬಿಟ್ಟು ಹೋಗಿದ್ದರು ಎಂಬ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. 
ತುಳುವಿನ ಪಾಡ್‌ ಕಾಸ್ಟ್ ʼಚಿಲ್ಲಿಂಗ್ ವಿಥ್ ಚಿಲಿಂಬಿʼ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅನುಶ್ರೀ ಈ ಬಗ್ಗೆ ಮಾತನಾಡಿದ್ದು, ದಿ ಪವರ್ ಹೌಸ್‌ ವೈನ್ಸ್ ಯೂಟ್ಯೂಬ್‌ ನಲ್ಲಿ ವಿಡಿಯೋ ತುಣುಕುಗಳು ಲಭ್ಯವಿದೆ.ನಿರೂಪಣೆ ಕಲಿತಿರೋದು ಎಲ್ಲಿ ಎಂಬ ಸಂದರ್ಶಕನ ಪ್ರಶ್ನಗೆ ಉತ್ತರಿಸಿದ ಅನುಶ್ರೀ "ನಾನು ಜಾಸ್ತಿ ಮಾತನಾಡುವುದು ನನ್ನ ತಂದೆಯಿಂದ ಬಂದ ಒಂದೇ ಒಂದು ಬಳುವಳಿ. ಅವರು ತುಂಬಾ ಮಾತನಾಡುತ್ತಿದ್ದರು. 
ಅವರು ಕೆಲಸ ಮಾಡಿಕೊಂಡಿದ್ದ ಕಂಪನಿಯಲ್ಲಿ ಮಾರ್ಕೆಟಿಂಗ್‌ ವಿಭಾಗದಲ್ಲಿ ಗೋಲ್ಡ್ ಮೆಡಲಿಸ್ಟ್ ಎಂದು ಹೇಳಿದ್ದಾರೆ. ಒಬ್ಬ ತಂದೆಯಾದವನು ಹೀರೋ ತರ ಇರಬೇಕು. ಆದರೆ ನನ್ನ ತಂದೆ ಹಾಗೆ ಇರಲಿಲ್ಲ. ಅಮ್ಮನಿಗೆ ಒಳ್ಳೆಯ ಗಂಡನಾಗಿದ್ರಾ.. ನನಗದು ಗೊತ್ತಿಲ್ಲ. ಮನೆಗೆ ಸರಿಯಾಗಿ ಬರುತ್ತಿರಲಿಲ್ಲ. ಅವರ ಬ್ಯುಸಿನೆಸ್‌, ಫ್ರೆಂಡ್ಸ್, ಸ್ಟಾಂಡರ್ಡ್‌ ಇದೇ ಜೀವನ ಆಗಿತ್ತು.
ನಮ್ಮ ಜೀವನ, ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದ್ದೇ ಇಲ್ಲ. ಒಂದು ಸಮಯದಲ್ಲಿ ಅವರಿಗೆ ನಮ್ಮ ಜೊತೆಗೆ ಇರಲು ಇಷ್ಟ ಇರಲಿಲ್ಲ. ಅದೇ ಕಾರಣಕ್ಕೆ ನಮ್ಮನ್ನು ಬಿಟ್ಟು ಹೋದರು. ಅದಾದ ನಂತರ 25 ವರ್ಷ ಅವರಿಲ್ಲದೆ ನಾವು ಬೆಳೆದೆವು ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.