ಪಂಜಾಬಿ ಹುಡುಗನ ಹಿಂದೆ ಬಿದ್ದ ಅನುಶ್ರೀ 'ತಾಜ್ ಮಹಲ್ ಮುಂದೆ ಪ್ರೇಮಿಗಳಂತೆ ಓಡಾಟ'

 | 
ಹಹಗಗ

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್‌ ನಟಿ  ಅನುಶ್ರೀ ಮನೆಮಾತಾಗಿರುವ ನಟಿ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಸರಿಗಮಪ ಸಂಗೀತದ ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ. ಜೀ ಕನ್ನಡ ಚಾನೆಲ್​ನಲ್ಲಿ  ವಾರಾಂತ್ಯದಲ್ಲಿ ಎಲ್ಲರ ಮೆಚ್ಚುಗೆ ಗಳಿಸುತ್ತಿರುವ ಸರಿಗಮಪ ಸಂಗೀತ ರಿಯಾಲಿಟಿ ಷೋ ಈಗ 20ನೇ ಕಂತಿಗೆ ಕಾಲಿಟ್ಟಿದೆ. 

ಅಪಾರ ಪ್ರಮಾಣದಲ್ಲಿ ಜನ ಮೆಚ್ಚುಗೆ ಗಳಿಸಿರುವ ಈ ಷೋದಲ್ಲಿ ರಾಜ್ಯಗಳ ವಿವಿಧ ಮೂಲೆಗಳ ಸಂಗೀತ ಪ್ರತಿಭೆಗಳನ್ನು ವಾಹಿನಿ ಪರಿಚಯಿಸಿದೆ. ಇದಾಗಲೇ 19 ಸರಣಿಗಳನ್ನು ಪೂರೈಸಿದ್ದು, ಇದೀಗ 20ನೇ ಸೀಸನ್​ ಶುರುವಾಗಿ ಕೆಲವು ವಾರಗಳೇ ಕಳೆದಿವೆ. ಗಾಯಕ ಜಸ್‌ಕರಣ್ ಸಿಂಗ್ ಅವರು ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ 'ಸರಿಗಮಪ' ವೇದಿಕೆಯಲ್ಲಿ ಹಾಡುತ್ತಿರುವ ಸಿಂಗರ್. ಪಂಜಾಬ್ ಮೂಲದ ಈ ಗಾಯಕ ಕನ್ನಡದ ಹಾಡುಗಳನ್ನು ಆಲ್‌ಮೋಸ್ಟ್ ಕನ್ನಡದವರಂತೆ ಹಾಡುತ್ತಾರೆ ಎಂಬುದು ವಿಶೇಷ. 

ಅಲ್ಪಸ್ವಲ್ಪ ವ್ಯತ್ಯಾಸವಾದರೂ ಎಲ್ಲರ ಮೆಚ್ಚುಗೆ ಗಳಿಸುವಷ್ಟರ ಮಟ್ಟಿಗೆ ಈ ಗಾಯಕ ಕನ್ನಡ ಭಾಷೆಯ ಹಾಡುಗಳನ್ನು ಹಾಡುತ್ತಾರೆ. ಅನುಶ್ರೀ ನಡೆಸಿಕೊಡುತ್ತಿರುವ ಜೀ ಕನ್ನಡದ 'ಸರಿಗಮಪ' ರಿಯಾಲಿಟಿ ಶೋ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ಗಾಯಕ ವಿಜಯಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಜಡ್ಜ್‌ಗಳಾಗಿರುವ ಈ 'ಸರಿಗಮಪ' ಶೋದಲ್ಲಿ ಸಾಕಷ್ಟು ಗಾಯಕ-ಗಾಯಕಿಯರು ಹಾಡಿ ಗಮನಸೆಳೆಯುತ್ತಿದ್ದಾರೆ. ಅವರಲ್ಲಿ ಈ ಜಸ್ಕರಣ್ ಸಿಂಗ್ ಸಹ ಒಬ್ಬರು.

ಇನ್ನು ಅವರೊಂದಿಗೆ ಪಂಜಾಬ್ ಗೆ ಹೋಗಿರುವ ಅನುಶ್ರೀ ಅವರೀಗ ನಿರೂಪಕಿ ಅನುಶ್ರೀ ಜತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದೀಗ ಸಾಕಷ್ಟು ವೈರಲ್ ಆಗುತ್ತಿದೆ. ಅನುಶ್ರೀ ಹಾಗು ಗಾಯಕ ಜಸ್ಕರಣ್ ಸಿಂಗ್ ಅವರ ಫೋಟೋಗಳಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಕಾಮೆಂಟ್‌ಗಳು ಬಂದಿವೆ. ಅವುಗಳಲ್ಲಿ ಒಂದು 'ಕೊನೆಗೂ ಅಕ್ಕನಿಗೆ ಒಳ್ಳೇ ಜೋಡಿ ಸಿಕ್ತು' ಎಂಬ ಕಾಮೆಂಟ್ ಗಮನಸೆಳೆಯುತ್ತಿದೆ. ಅದನ್ನು ಹಲವರು ಲೈಕ್ ಮಾಡಿದ್ದಾರೆ. 'ಹಲವರು ಬೆಸ್ಟ್ ಫೇರ್' ಎಂದು ಸಹಕಾಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.