ಮಡಿಕೇರಿ ಉದ್ಯಮಿ ಜೊತೆ ಅನುಶ್ರೀ ನಿಶ್ಚಿತಾರ್ಥ, ಮುಂದಿನ ‌ತಿಂಗಳು 28ಕ್ಕೆ ರಾಜ್ಯಾದ್ಯಂತ ಮದುವೆ ಊಟ

 | 
Nkk
ವೀಕ್ಷಕರೇ...ನಿರೂಪಕಿ ನಟಿ ಅನುಶ್ರೀ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕೆಲ ವರ್ಷಗಳಿಂದ ಅನುಶ್ರೀ ಮದುವೆ ಯಾವಾಗ ಅನ್ನೋರಿಗೆ ಸಿಹಿಸುದ್ದಿ ಸಿಕ್ಕಿದೆ.ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಆಗಸ್ಟ್ 28ಕ್ಕೆ ಮದುವೆ ಆಗಲಿದ್ದಾರೆ. ಕೊಡಗು ಮೂಲದ ಕಾರ್ಪೋರೇಟ್ ಉದ್ಯಮಿ ರೋಷನ್ ಜೊತೆ ಅನುಶ್ರೀ ಮದುವೆ ನಡೆಯಲಿದೆ. 
ಅನುಶ್ರೀ ಅವರು ಫ್ಯಾಮಿಲಿ ನೋಡಿದ ಹುಡುಗನನ್ನೇ ಮದುವೆ ಆಗುತ್ತಿದ್ದಾರೆ. ಬೆಂಗಳೂರಿನಲ್ಲಿ ಗ್ರಾಂಡ್ ಆಗಿ ಮದುವೆ ನಡೆಯಲಿದೆ.ಈ ಬಾರಿ ನಾನು ಮದುವೆ ಆಗ್ತೀನಿ, ಈ ವರ್ಷವೇ ಮದುವೆ ನಡೆಯುತ್ತದೆ ಎಂದು ಅನುಶ್ರೀ ಅವರು ʼಸರಿಗಮಪʼ ಸೇರಿದಂತೆ ʼಮಹಾನಟಿʼ ಶೋನಲ್ಲಿ ಸಾಕಷ್ಟು ಬಾರಿ ಹೇಳಿದ್ದರು. ಅದೀಗ ನಿಜವಾಗ್ತಿದೆ. ಈ ಬಗ್ಗೆ ಅನುಶ್ರೀ ಅವರು ಅಧಿಕೃತ ಹೇಳಿಕೆ ನೀಡಬೇಕಿದೆ. 
ಅಂದಹಾಗೆ ಅನುಶ್ರೀ ಅವರ ತಂದೆ ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೋಗಿದ್ದರು. ಆ ಬಳಿಕ ಅವರ ತಾಯಿಯೇ ಅನುಶ್ರೀಯನ್ನು, ಅವರ ತಮ್ಮನನ್ನು ಸಾಕಿದ್ದರು. ಅನುಶ್ರೀ ಅವರು ಮಂಗಳೂರಿನವರಾಗಿದ್ದು, ಆ ಬಳಿಕ ದುಡಿಯಲು ಆರಂಭಿಸಿದರು. ಈಗ ಇಡೀ ಕುಟುಂಬದ ಜವಾಬ್ದಾರಿಯನ್ನು ಅವರೇ ಹೊತ್ತಿಕೊಂಡಿದ್ದಾರೆ ಹಾಗಾಗಿ ತಡವಾಗಿ ಮದುವೆ ಆಗ್ತಿದ್ದಾರೆ. 
ಈ ಬಗ್ಗೆ ಅನುಶ್ರೀ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಮುಂದಿನ ದಿನಗಳಲ್ಲಿ ಅವರು ಈ ಬಗ್ಗೆ ಮಾಹಿತಿ ರಿವೀಲ್ ಮಾಡೋ ಸಾಧ್ಯತೆ ಇದೆ. ಅನುಶ್ರೀ ವಿವಾಹದ ಕುರಿತು ಈ ಮೊದಲು ಸಾಕಷ್ಟು ವರದಿಗಳು ಹರಿದಾಡಿದ್ದವು. ಆದರೆ, ಯಾವುದೂ ನಿಜ ಆಗಿರಲಿಲ್ಲ. ಈಗ ಅವರ ವಿವಾಹದ ಬಗ್ಗೆ ಹೊಸ ಸುದ್ದಿ ಒಂದು ಹರಿದಾಡುತ್ತಿದ್ದು, ಈ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕಿದೆ.