ಭಾಗ್ಯಲಕ್ಷ್ಮೀ ಅಜ್ಜಿಯ ಮನೆ ಬಾಡಿಗೆ ಕಟ್ಟಿದ ಅನುಶ್ರೀ; ಇಷ್ಟೊಂದು ‌ದುಡ್ಡು ಅನುಶ್ರೀಗೆ ಎಲ್ಲಿಂದ

 | 
He

ಮಹಾನಟಿ ರಿಯಾಲಿಟಿ ಶೋನ ಶನಿವಾರದ ಸಂಚಿಕೆಯಲ್ಲಿ ರಿಯಾ ಬಗರೆ ನಟಿಸಿದ ಸ್ಕಿಟ್‌ ಭರವಸೆಯ ಬೆಳಕಾಗಿ, ಸ್ಫೂರ್ತಿಯ ಚಿಲುಮೆಯಾಗಿ ಹೊರಬಂದಿದೆ. ಆ ಕಥೆಯ ರಿಯಲ್‌ ನಾಯಕಿ 85ರ ಇಳಿವಯಸ್ಸಿನ ಭಾಗ್ಯಲಕ್ಷ್ಮೀ. ಆ ಅಜ್ಜಿಯ ಕಷ್ಟಕ್ಕೆ ಎಲ್ಲರೂ ಕಣ್ಣೀರಾಗಿದ್ದಾರೆ. ಆಂಕರ್‌ ಅನುಶ್ರೀ, ನಿರ್ದೇಶಕ ತರುಣ್‌ ಸುಧೀರ್‌ ಒಂದು ಹೆಜ್ಜೆ ಮುಂದೆ ಹೋಗಿ ಮೆಚ್ಚುವ ಕೆಲಸ ಮಾಡಿದ್ದಾರೆ.  

ಈ ಶೋನಲ್ಲಿ ಭಾಗ್ಯಲಕ್ಷ್ಮೀ ಅಜ್ಜಿಯ ನಿಜ ಬದುಕಿನ ಅನಾವರಣವಾಗಿದೆ. ನೋಡ ನೋಡುತ್ತಿದ್ದಂತೆ, ಎಲ್ಲರ ಕಣ್ಣುಗಳಲ್ಲಿ ನೀರು ತುಂಬಿದೆ. ಎಲ್ಲರೂ ಎದ್ದು ನಿಂತು ನಿಜ ಜೀವನದ ಸ್ವಾಭಿಮಾನಿ ಸಾಧಕಿಗೆ ಚಪ್ಪಾಳೆ ತಟ್ಟಿದ್ದಾರೆ. ವೇದಿಕೆಗೆ ಭಾಗ್ಯಲಕ್ಷ್ಮೀ ಅಜ್ಜಿಯನ್ನು ಕರೆತಂದ ಅನುಶ್ರೀ, ಅಮ್ಮ ಈ ಸ್ವಾಭಿಮಾನದ ಬದುಕನ್ನು ನೀವು ಅದ್ಹೇಗೆ ಗೆಲ್ಲುತ್ತಿದ್ದೀರಿ? ಎಂದು ಅನುಶ್ರೀ ಅಜ್ಜಿ ಬಳಿ ಪ್ರಶ್ನೆ ಮಾಡಿದ್ದಾರೆ. 

ಅದಕ್ಕೆ ಉತ್ತರಿಸಿದ ಅಜ್ಜಿ, ಮನುಷ್ಯನಾಗಿ ಹುಟ್ಟಿದ ಮೇಲೆ ಸ್ವಾಭಿಮಾನದಿಂದಲೇ ಗೆಲ್ಲಬೇಕು. ಇನ್ನೊಬ್ಬರ ಹಣದಿಂದ ಬದುಕಬಾರದು. ನನ್ನ ಜತೆಗೆ ನನ್ನ ಮಗಳಿದ್ದಾಳೆ. ಅವಳು ಚೆನ್ನಾಗಿ ನೋಡಿಕೊಳ್ತಾಳೆ. ಈ ಸಮಯದಲ್ಲಿ ಅವಳು ನನಗೆ ತಾಯಿಯಾಗಿದ್ದಾಳೆ. ಅವಳು ಅರಳಿ ಬತ್ತಿಗಳನ್ನು ಮಾಡ್ತಾಳೆ. ನಾನೇ ಅವುಗಳನ್ನು ಮಾರಿಕೊಂಡು ಬರ್ತಿನಿ. ಮಾರಿದರೆ ದುಡ್ಡು ಬರುತ್ತೆ, ಸುಮ್ಮನೇ ಕೂತರೇ ಯಾರೂ ದುಡ್ಡು ಕೊಡಲ್ಲ ಎಂದಿದ್ದಾರೆ.

ಭಗವಂತ ಮೇಲಿಂದ ಮೇಲೆ ಕಷ್ಟ ಕೊಡ್ತಾನೇ ಇರ್ತಾನೆ. ನೀವು ಯಾವತ್ತೂ ಭಗವಂತನನ್ನು ಬೈದುಕೊಂಡಿಲ್ಲ ಅಜ್ಜಿ? ಎಂದ ಅನುಶ್ರೀ, ಇಲ್ಲಮ್ಮ ನಾನು ಯಾವತ್ತು ಆತನನ್ನು ಶಪಿಸಲ್ಲ. ಅದು ನಮ್ಮ ಪೂರ್ವ ಜನ್ಮದ ಕರ್ಮಫಲ. ನಾನು ತುಂಬ ರಾಮನಾಮ ಬರೀತಿನಿ. ಆ ರಾಮನ ರಕ್ಷೆಯಲ್ಲಿ ನಾನಿದ್ದೇನೆ. ರಾಮನ ಮೇಲೆ ಹಾಡು ಬರೀತಿದ್ದೆ. ಈಗ ಅದೆಲ್ಲ ಮರೆತು ಹೋಗಿದೆ. ಶತ್ರುಗಳನ್ನೂ ನಾನು ಯಾವತ್ತು ದ್ವೇಷ ಮಾಡಲ್ಲ. 

ಅದನ್ನು ನಾವು ಮನಸ್ಸಲ್ಲಿಟ್ಟುಕೊಂಡರೇ ನಾವೂ ಬೇಗ ಕೆಟ್ಟವರಾಗ್ತೀವಿ ಎಂದಿದೆ ಹಿರಿಜೀವ.  ನಾನು ನಿಮ್ಮ ಮೊಮ್ಮಗಳು ಇದ್ದಂಗೆ ಅಲ್ವಾ? ನೀವು ಏನೂ ಅಂದುಕೊಳ್ಳಲ್ಲ ಅಂದರೆ, ಇನ್ಮೇನೆ ನೀವು ಸಾಯೋವರೆಗೂ ನಿಮ್ಮ ಮನೆ ಬಾಡಿಗೆ ನಾನೇ ಕಟ್ತೀನಿ. ಈ ಒಂದು ಅವಕಾಶ ಮಾಡಿಕೊಡಿ ಎಂದು ಅನುಶ್ರೀ ಕಣ್ಣೀರಾಗಿದ್ದಾರೆ. ನೀವು ಯಾವ ಮನೆಯಲ್ಲಾದರೂ ಇರಿ, ಆ ಮನೆ ಬಾಡಿಗೆ ನಾನೇ ಕಟ್ತೀನಿ ಎಂದು ಭರವಸೆ ನೀಡಿದ್ದಾರೆ.‌ (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.