ಅರ್ಜುನ್ ಜನ್ಯಗೆ ಪ್ರಪೋಸ್ ಮಾಡಿದ ಅನುಶ್ರೀ; 'ನನ್ನ ಎದೆಯಲ್ಲಿ ನೀವಿದ್ದೀರಿ ಎಂದ ಅನು'

 | 
ಹಗ೭

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಿರುವ... ಆಗುತ್ತಿರುವ ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಗಳನ್ನ ಬಿಟ್ಟೂಬಿಡದೆ ನೋಡುತ್ತಿರುವವರಿಗೆ ಅರ್ಜುನ್ ಜನ್ಯ ಹಾಗೂ ಅನುಶ್ರೀ ನಡುವಿನ ಕೆಮಿಸ್ಟ್ರಿ ಹಾಗೂ ಕಾಲೆಳೆಯುವ ಪ್ರೋಗ್ರಾಂ ಗೊತ್ತೇ ಇರುತ್ತೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ರವರನ್ನ ಅನುಶ್ರೀ 'ಪ್ರೀತಿ'ಯಿಂದ ಮಾತನಾಡಿಸುವುದು... ಪ್ರಪೋಸ್ ಮಾಡುವುದು... ಡಾರ್ಲಿಂಗ್ ಎಂದು ಕರೆಯುವುದು... ಉಂಗುರ ತೊಡಿಸುವುದು... ಈ ಎಲ್ಲವೂ ತಮಾಷೆಗಾಗಿ, ಕಾರ್ಯಕ್ರಮದ ಫನ್ ಎಲಿಮೆಂಟ್ ಗಾಗಿ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿಯೇ.

ಮೊದಮೊದಲು 'ಡಾರ್ಲಿಂಗ್' ಸಂಚಿಕೆ ನೋಡಿ ಶಾಕ್ ಆಗಿದ್ದ ಅರ್ಜುನ್ ಜನ್ಯ ಪತ್ನಿ, ನಂತರ ಕಾರ್ಯಕ್ರಮದಲ್ಲಿಯೇ ಅನುಶ್ರೀ-ಅರ್ಜುನ್ ಜನ್ಯ ಬ್ರೇಕಪ್ ಆದ್ಮೇಲೆ ಖುಷಿ ಪಟ್ಟರಂತೆ. ಅಷ್ಟಕ್ಕೂ, ಇದೆಲ್ಲ ಸ್ಕ್ರಿಪ್ಟೆಡ್ ಅಂತ ಗೊತ್ತಿರುವುದರಿಂದ ಅರ್ಜುನ್ ಜನ್ಯ ಪತ್ನಿ ಅಷ್ಟೇನು ತಲೆಗೆ ಹಾಕೊಂಡಿಲ್ಲ. ಹೀಗಾಗಿಯೇ, ಅನುಶ್ರೀ ಬಗ್ಗೆ ಯಾರು ಏನೇ ಕೇಳಿದರೂ, ಕೊಂಚ ಕೂಡ ಅಂಜಿಕೆ-ಅಳುಕು ಇಲ್ಲದೇ ಅರ್ಜುನ್ ಜನ್ಯ ಉತ್ತರ ಕೊಡುತ್ತಾರೆ. ಎಕೆಂದರೆ ಈ ತಮಾಷೆಗೆ ಅವರೂ ಕೂಡ ಒಗ್ಗಿ ಹೋಗಿದ್ದಾರೆ.

ಇನ್ನು ಇತ್ತೀಚಿಗೆ ನಡೆದ ಸರಿಗಮಪ 20ಅಲ್ಲಿ ಅರ್ಜುನ್ ಜನ್ಯ ಅವರ ಬಳಿ ನಿಮ್ಮ ಹಾರ್ಟಿನಲ್ಲಿ ಚೇರ್ ಹಾಕಿ ಕುಳಿತುಕೊಳ್ಳುವುದು ನಾನೇನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅದಕ್ಕೆ ಒಂದಿಷ್ಟು ಬೇಸರ ಮಾಡಿಕೊಳ್ಳದೆ ಅರ್ಜುನ್ ಜನ್ಯ ಅವರು ಕೂಡ ಮಾತಿನ ಮೂಲಕ ನಗುವನ್ನು ಹೊಮ್ಮಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸೂಪರ್ ಹಿಟ್ ಸಾಂಗ್ ಪುಷ್ಪಾಗೆ ಅರ್ಜುನ್ ಜನ್ಯ ಮತ್ತು ಅನುಶ್ರೀ ಜಬರ್‌ದಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ವೀಡಿಯೋವನ್ನ ಅನುಶ್ರೀ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಭರ್ಜರಿ ಲೈಕ್ಸ್ ಮತ್ತು ಕಾಮೆಂಟ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಇನ್ನೂ ಶಿವಣ್ಣ ಮುಂಬರುವ ಸಿನಿಮಾಗೆ ಅರ್ಜುನ್ ಜನ್ಯ ಕೂಡ ಡೈರೆಕ್ಷನ್ ಮಾಡ್ತಿದ್ದಾರೆ. ಈ ಡೆಡ್ಲಿ ಕಾಂಬಿನೇಷನ್ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಅಂತಾ ಕಾದುನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.