// custom css

ಮೊದಲ ಬಾರಿ ಮದುವೆ ಬಗ್ಗೆ ಮಾತನಾಡಿದ ಅನುಶ್ರೀ; ಕನ್ನಡಿಗರು ಫಿದಾ

 | 
Gu

ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ನಟಿ, ನಿರೂಪಕಿ ಅನುಶ್ರೀ ಮದುವೆ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತೆ. ಚಟಪಟ ಮಾತನಾಡುವ ಅನುಶ್ರೀ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಮದುವೆ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಮಾತಾಡದ ಅನುಶ್ರೀ ಇದೀಗ ತಮ್ಮ ಫ್ಯಾನ್ಸ್​ಗೆ ಗುಡ್​ನ್ಯೂಸ್ ಕೊಟ್ಟಿದ್ದಾರೆ.

ಜೀ ಕನ್ನಡ ಖಾಸಗಿ ವಾಹಿನಿಯಲ್ಲಿ ಇತ್ತೀಚೆಗೆ ಮಹಾನಟಿ ಕಾರ್ಯಕ್ರಮ ಶುರುವಾಗಿದ್ದು, ಕಿರುತೆರೆ ಲೋಕದಲ್ಲಿ ಹೊಸ ಟ್ರೆಂಡ್ ಶುರು ಮಾಡಿದೆ. ಈ ವೇದಿಕೆಯಲ್ಲಿ ಅನುಶ್ರೀ ನನ್ನ ಮದುವೆ ಆಗೇ ಆಗುತ್ತೆ, ನೀವು ನೋಡೇ ನೋಡ್ತೀರಾ ನೋಡ್ರೋ ಅಂತ ಹೇಳಿದ್ದಾರೆ. ಅಲ್ಲದೆ ಇದೇ ವೇಳೆ ತಮ್ಮ ಮದುವೆ ಆಗುವ ಹುಡುಗ ಹೇಗಿರಬೇಕು ಅಂತ ಕೂಡ ತಿಳಿಸಿದ್ದಾರೆ.

ಅಕ್ಕ ನಿನ್ ಗಂಡ ಹೇಗಿರಬೇಕು ಅಂತ ತರುಣ್ ಸುಧೀರ್ ಕೇಳಿದ ಪ್ರಶ್ನೆಗೆ ಅನುಶ್ರೀ ನೋಡೋಕೆ ಟಾಲ್.. ಡಾರ್ಕ್ & ಹ್ಯಾಂಡ್ಸಮ್ ಆಗಿ ಇರಬೇಕು. ಎಲ್ಲದ್ದಕ್ಕಿಂತ ಹೆಚ್ಚಾಗಿ ನನ್ನನ್ನು ಗೌರವದಿಂದ ನೋಡಬೇಕು. ನನ್ನನ್ನ ಯಾರು ರೆಸ್ಪೆಕ್ಟ್ ಮಾಡ್ತಾರೋ ಆ ಥರ ಹುಡುಗಾನೇ ನನ್ಗೆ ಬಹಳ ಇಷ್ಟ ಅಂತ ಹೇಳಿ ನಾಚಿ ನೀರಾಗಿದ್ದಾರೆ.

ಮುಂದಿನ ವರ್ಷ ಮದುವೆ ಆಗ್ಲಿ ಅಂತ ಆಶೀರ್ವಾದ ಮಾಡಿ ಸರ್ ಎಂದು ಕೇಳಿದ ಅನುಶ್ರೀಗೆ ನಟ ರಮೇಶ್ ಅರವಿಂದ್ ಮುಂದಿನ ವರ್ಷ ಅಲ್ಲ ಮಹಾನಟಿ ಸೀಸನ್ ಮುಗಿತಿದ್ದ ಹಾಗೆ ನಿನ್ನ ಮದುವೆ ಆಗಲಿ ಎಂದು ವಿಶ್ ಮಾಡಿದ್ದಾರೆ. ರಮೇಶ್ ಅರವಿಂದ್ ಅವರ ಮಾತು ಕೇಳಿ ಅನುಶ್ರೀ ಫುಲ್ ಚಪ್ಪಾಳೆ ಹೊಡೆದು ಖುಷಿ ಪಟ್ಟಿದ್ದಾರೆ. ನನ್ನ ಮದುವೆ ಆಗೇ ಆಗುತ್ತೆ, ನೀವು ನೋಡೇ ನೋಡ್ತೀರಾ ನೋಡ್ರೋ ಅಂತ ವೇದಿಕೆ ಮೇಲೆ ಆ್ಯಂಕರ್ ಅನುಶ್ರೀ ಚಾಲೆಂಜ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ