ಅನುಶ್ರೀ ಗ್ರಾಂಡ್ ಎಂಟ್ರಿಗೆ ಒಮ್ಮೆಲೇ ರೊಚ್ಚಿಗೆ ದ್ದು ಬಿಟ್ಟ ಯುವಕ, ಯಾಕೆ ಏನು ವಿಷ್ಯ ಎಂದ ಅನು
Aug 18, 2024, 17:30 IST
|
ಸೋನಲ್ ಮಾಂತೆರೋ ಹಾಗೂ ತರುಣ್ ಸುಧೀರ್ ಅವರ ಮದುವೆ ಹಿಂದೂ ಸಂಪ್ರದಾಯದಂತೆ ನಡೆದಿದೆ. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಜರುಗಿದ ವಿವಾಹ ಸಮಾರಂಭದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆದರು. ನವಜೋಡಿಗೆ ಎಲ್ಲರೂ ಆಶೀರ್ವಾದ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಗಣ್ಯರು ಬಂದು ಸೋನಲ್ ಮತ್ತು ತರುಣ್ಗೆ ಹಾರೈಸಿದ್ದಾರೆ.
ಹಿರಿಯ ನಟಿಯರಾದ ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್, ನಟ ನೆನಪಿರಲಿ ಪ್ರೇಮ್ ಸೇರಿದಂತೆ ಅನೇಕ ಕಲಾವಿದರು ಈ ಮದುವೆಗೆ ಸಾಕ್ಷಿಯಾದರು. ಚಿತ್ರರಂಗದ ಬಹುತೇಕ ಎಲ್ಲರ ಜೊತೆಗೂ ತರುಣ್ ಸುಧೀರ್ ಅವರು ಆತ್ಮೀಯತೆ ಹೊಂದಿದ್ದಾರೆ. ತರುಣ್ ಸುಧೀರ್ ಹಾಗೂ ಸೋನಲ್ ಮಾಂತೆರೋ ಅವರ ಬಾಳಿನಲ್ಲಿ ಈಗ ಹೊಸ ಅಧ್ಯಾಯ ಆರಂಭ ಆಗಿದೆ. ಸಂಗೀತ ನಿರ್ದೇಶಕ ಹರಿಕೃಷ್ಣ, ಜನಪ್ರಿಯ ಗಾಯಕ ವಿಜಯ್ ಪ್ರಕಾಶ್ ಮುಂತಾದವರು ಕೂಡ ವಿವಾಹಕ್ಕೆ ಹಾಜರಿ ಹಾಕಿದರು.
ಇನ್ನು ನಟಿ ನಿರೂಪಕಿ ಅನುಶ್ರೀ ಕೂಡ ಹಾಜರಾಗಿದ್ದರು ಅವರ ಆಗಮಿಸುವಾಗ ನೂಕು ನುಗ್ಗಲು ಉಂಟಾಗಿ ಅನುಶ್ರೀ ಮೈಮೇಲೆ ಯುವಕರು ಬೀಳುವಂತಾಗಿತ್ತು. ಅದನ್ನು ಕಂಡು ಅನುಶ್ರೀ ನಸುನಕ್ಕು ಮುಂದೆ ಸಾಗಿದ್ದಾರೆ. ನಟಿ ನಿಶ್ವಿಕಾ ನಾಯ್ಡು, ರಚಿತಾ ರಾಮ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ತರುಣ್-ಸೋನಲ್ ಮದುವೆಗೆ ಬಂದು ಶುಭ ಕೋರಿದ್ದಾರೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಅಭಿನಂದನೆ ತಿಳಿಸುತ್ತಿದ್ದಾರೆ.
ಕಲ್ಯಾಣ ಮಂಟವನ್ನೂ ಕೂಡ ಬೆರಗುಗೊಳಿಸುವ ಕೆಂಪು ಥೀಮ್‌ನಿಂದ ಅಲಂಕರಿಸಲಾಗಿತ್ತು, ಆರತಕ್ಷತೆಯಲ್ಲಿ ದೋಸೆ, ರಾಗಿ ರೊಟ್ಟಿ, ಜಿಲೇಬಿ, ರಸಮಲೈ, ನೀರ್ ದೋಸೆ ಸೇರಿದಂತೆ 300ಕ್ಕೂ ಹೆಚ್ಚು ಖಾದ್ಯಗಳನ್ನು ಅದ್ದೂರಿಯಾಗಿ ವಿತರಿಸಲಾಗಿದ್ದು, ಇದು ಅತಿಥಿಗಳ ಗಮನ ಸೆಳೆಯಿತು.
ತಮ್ಮ ಬಹುಸಂಸ್ಕೃತಿಯ ಆಚರಣೆಯ ಭಾಗವಾಗಿ, ಸೋನಾಲ್ ಮೊಂಥೆರೋ ಮುಂದಿನ ತಿಂಗಳು ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಎರಡನೇ ವಿವಾಹ ಸಮಾರಂಭವನ್ನು ನಡೆಸಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.