ಅನುಶ್ರೀ ಅವರ ನಿಜವಾದ ತಂದೆ ಮುಖ ನೋಡಿ ಬೆಚ್ಚಿಬಿ ದ್ದ ಕನ್ನಡಿಗರು

 | 
Ha

ಮಾತಿನ ಮಲ್ಲಿ ಅನುಶ್ರೀ ಇತ್ತೀಚಿಗೆ ದಿ ಪವರ್‌ಹೌಸ್‌ ವೈನ್ಸ್‌ ತುಳು ಯೂಟ್ಯೂಬ್‌ ಚಾನೆಲ್‌ಗೆ ಆಂಕರ್‌, ನಟಿ ಅನುಶ್ರೀ ಸಂದರ್ಶನ ನೀಡಿದ್ದಾರೆ. ಇದೇ ಮೊದಲ ಬಾರಿಗೆ ತುಳು ಭಾಷೆಯಲ್ಲಿ ಯೂಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ನಟಿ ಅನುಶ್ರೀ ಪ್ರಯಾಣ ಆರಂಭವಾದದ್ದು ಮಂಗಳೂರಿನಲ್ಲಿ. ಮಂಗಳೂರು ಟಿವಿಯಲ್ಲಿ ಕರಿಯರ್‌ ಆರಂಭಿಸಿದ್ದರು. ಇವರು ಮೊದಲು ಮಂಗಳೂರು ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. 

ಬಳಿಕ ಬೆಂಗಳೂರಿನಲ್ಲಿ ತರಕಾರಿ ಮಾರಾಟ ಮಾಡುವವರಲ್ಲಿ ಸೇರಿದಂತೆ ಬೀದಿಬದಿ ವ್ಯಾಪಾರಿಗಳಲ್ಲಿ ಮಾತನಾಡುತ್ತ ಬೆಂಗಳೂರು ಕನ್ನಡದ ಸ್ಲಾಂಗ್‌ ಅರ್ಥಮಾಡಿಕೊಂಡರಂತೆ. ಇವರ ಬಾಲ್ಯದಲ್ಲಿ ಬಡತನವಿತ್ತು. ತಾಯಿ ಕೆಲಸಕ್ಕೆ ಹೋಗುತ್ತಿದ್ದರು. 25 ವರ್ಷದ ಹಿಂದೆಯೇ ತಂದೆ ಮನೆ ಬಿಟ್ಟಿದ್ದರು. ಎಲ್ಲರ ಬಾಲ್ಯವೂ ಕಷ್ಟದಲ್ಲಿ ಇರುತ್ತಿತ್ತು. ಹೀಗಾಗಿ ಬಾಲ್ಯದ ಕಷ್ಟದ ಕುರಿತು ಹೆಚ್ಚು ಹೇಳೋದಿಲ್ಲಎಂದು ಹೇಳುತ್ತಾ ಅನುಶ್ರೀ ಸಾಕಷ್ಟು ವಿಚಾರಗಳನ್ನು ತುಳು ಯೂಟ್ಯೂಬ್‌ ಚಾನೆಲ್‌ ದಿ ಪವರ್‌ ಹೌಸ್‌ ಜತೆ ಮುಕ್ತವಾಗಿ ಮಾತನಾಡಿದ್ದಾರೆ.

ನನ್ನ ಜೀವನದ ಬಹುದೊಡ್ಡ ಹಿರೋ ಅಮ್ಮ. ಯಾವ ನೆಂಟರ ಮನೆಯಲ್ಲೂ ಅಲ್ಲ, ಬಾಡಿಗೆ ಮನೆಯಲ್ಲಿ ನಾವಿದ್ದೆವು. ಅಮ್ಮನ ಬಳಿ ಕೇವಲ 4 ಸೀರೆ ಇತ್ತು ಎಂದು ಹೇಳಿದ್ದಾರೆ. ನನ್ನ ತಮ್ಮ ಅಂಗನವಾಡಿಗೆ ಹೋಗುತ್ತಿದ್ದಾಗ ಪೌಷ್ಟಿಕ ಆಹಾರದ 2 ಪ್ಯಾಕೇಟ್‌ ಕೊಡ್ತಿದ್ದರು. ನಾನು ಅವರಲ್ಲಿ ರಿಕ್ವೆಸ್ಟ್‌ ಮಾಡಿ ಎರಡು ಪ್ಯಾಕೆಟ್‌ ಹೆಚ್ಚಿಗೆ ತರುತ್ತಿದೆ ಎಂದು ಅನುಶ್ರೀ ಹೇಳಿದ್ದಾರೆ. ಎಷ್ಟೋ ಬಾರಿ ಊಟ ಇರುತ್ತಿರಲಿಲ್ಲ. ಈ ಪುಡಿಯನ್ನ ನೀರಿನಲ್ಲಿ ಕಲಸಿ ರೊಟ್ಟಿ ತರ ಮಾಡಿ ತಿನ್ನುತ್ತಿದ್ದೆವು. ಆಗ ಬರದವರು, ಈಗ ಬಂದು ನಾನು ಅಪ್ಪ ಎಂದರೆ ಅದನ್ನು ಒಪ್ಪಿಕೊಳ್ಳಲು ನಾನು ರೆಡಿ ಇಲ್ಲ ಎಂದು ಅನುಶ್ರೀ ಹೇಳಿದ್ದಾರೆ.

ನನ್ನ ಅಮ್ಮನೇ ನನಗೆ ಅಪ್ಪ. ಹುಟ್ಟಿಸಿದಿರಿ ಅನ್ನುವ ಕಾರಣಕ್ಕೆ ಅಪ್ಪ-ಅಮ್ಮ ಆಗುವುದಿಲ್ಲ. ಮಕ್ಕಳ ಭವಿಷ್ಯದ ಬೆಳವಣಿಗೆಗೆ ಕಾರಣವಾದರೆ ಮಾತ್ರ ಪೋಷಕರು. ಇದು ಬಹಳ ದೊಡ್ಡ ಜವಾಬ್ದಾರಿ ಎಂದಿದ್ದಾರೆ. ಒಂದು ಹೆಣ್ಣು ನಿಮ್ಮನ್ನು ನಂಬಿ ತನ್ನವರಮನೆ ಬಿಟ್ಟು ಬರುತ್ತಾಳೆ. ಅವರನ್ನು ನೀವು ಬಿಡುವಂತೆಯೇ ಇಲ್ಲ. ಮಕ್ಕಳನ್ನು ಹುಟ್ಟಿಸಿ, ಆ ನಂತರದಲ್ಲಿ ನಾನು ಮಕ್ಕಳನ್ನು ನೋಡಿಕೊಳ್ಳಲು ತಯಾರಿಲ್ಲ ಎಂದರೆ ಅವರೇನು ಮಾಡಬೇಕು ಎಂದು  ಅಪ್ಪನ ಕುರಿತಾಗಿ ಸಿಟ್ಟನ್ನು ಹೊರಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.