'ಆನಂದ್' ಸಿನಿಮಾಗೆ ಮೊದಲು ಆಯ್ಕೆ ಆಗಿದ್ದು ಅಪರ್ಣಾ; ಕೊನೆ ಕ್ಷಣ ಆಕೆ ಬೇಡ ಎಂದಿದ್ದ ಪರ್ವತಮ್ಮ
Aug 3, 2024, 08:33 IST
|

ಪತ್ರಕರ್ತ ಕೆ. ಎಸ್. ನಾರಾಯಣಸ್ವಾಮಿ ಮಗಳಾದ ಅಪರ್ಣಾಗೆ ಮೊದಲ ಪ್ರಯತ್ನದಲ್ಲೇ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಖುದ್ದು ತಂದೆ ಪುಟ್ಟಣ್ಣ ಬಳಿ ಮಗಳನ್ನು ಕರೆದುಕೊಂಡು ಹೋಗಿ ಅವಕಾಶ ಕೊಡುವಂತೆ ಕೇಳಿದ್ದರು.ಚಿತ್ರದಲ್ಲಿ ಪಾರ್ವತಿ ಎನ್ನುವ ಪಾತ್ರದಲ್ಲಿ ಅಪರ್ಣಾ ನಟಿಸಿದ್ದರು. ಆಕೆಯ ನಟನೆಗೆ ಒಳ್ಳೆ ಪ್ರಶಂಸೆ ವ್ಯಕ್ತವಾಗಿತ್ತು.
ಅದರ ಮರುವರ್ಷ ಶಿವರಾಜ್‌ಕುಮಾರ್ ಆನಂದ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆ ಚಿತ್ರಕ್ಕೆ ಮೊದಲಿಗೆ ಅಪರ್ಣಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಬಳಿಕ ಆ ಅವಕಾಶ ಸುಧಾರಾಣಿ ಪಾಲಾಗಿತ್ತು. ಸಿನಿಮಾ ಹಿಟ್ ಆಗಿ ಶಿವಣ್ಣ- ಸುಧಾರಾಣಿ ಇಬ್ಬರೂ ಸೂಪರ್ ಸಕ್ಸಸ್ ಕಂಡರು.ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿಯನ್ನು ಪಾರ್ವತಮ್ಮ ವಹಿಸಿಕೊಂಡಿದ್ದರು.
ಸಿಂಗೀತಂ ಶ್ರೀನಿವಾಸ್ ರಾವ್ ಆನಂದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಅಣ್ಣಾವ್ರ ಮಗ ಚಿತ್ರರಂಗಕ್ಕೆ ಹೀರೊ ಆಗಿ ಎಂಟ್ರಿಗೆ ವೇದಿಕೆ ಸಿದ್ಧವಾಗುತ್ತಿತ್ತು. ಆಗ ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿತ್ತು. ಮುದ್ದು ಮುಖದ ಅಪರ್ಣಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಚಿ. ಉದಯಶಂಕರ್ ಅವರೇ ಅಪರ್ಣಾ ಅವರನ್ನು ಚಿತ್ರಕ್ಕೆ ನಾಯಕಿ ಎಂದು ಆಯ್ಕೆ ಮಾಡಿದ್ದರು. ಈ ಸುದ್ದಿ ಪತ್ರಿಕೆಗಳಲ್ಲಿ ಕೂಡ ಬಂದಿತ್ತು.
ಆನಂದ್' ಶಿವಣ್ಣನ ಮೊದಲ ಸಿನಿಮಾ. ಅಪರ್ಣಾ ಈಗಾಗಲೇ ಒಂದು ಚಿತ್ರದಲ್ಲಿ ನಟಿಸಿದ್ದಾರೆ. ಹೊಸ ಮುಖ ನಾಯಕಿ ಆದ್ರೆ ಚೆನ್ನಾಗಿರುತ್ತದೆ ಎಂದು ಪಾರ್ವತಮ್ಮ ನಿರ್ಧರಿಸಿದರು. ಹಾಗಾಗಿ ಆ ಅವಕಾಶ ಸುಧಾರಾಣಿ ಪಾಲಾಯಿತು. ಬಳಿಕ 'ಸಂಗ್ರಾಮ' ಹಾಗೂ 'ನಮ್ಮೂರ ರಾಜ' ಸಿನಿಮಾಗಳಲ್ಲಿ ಕೂಡ ಅಪರ್ಣಾ ನಟಿಸಿದ್ದರು.
'ಮಸಣದ ಹೂವು' ಸಿನಿಮಾ ಸಮಯದಲ್ಲೇ ನನ್ನ ಮುಂದಿನ 3 ಸಿನಿಮಾಗಳಿಗೆ ನೀನೇ ನಾಯಕಿ, ಆಮೇಲೆ ಬೇರೆ ಸಿನಿಮಾಗಳಲ್ಲಿ ನಟಿಸು ಎಂದು ಅಪರ್ಣಾಗೆ ಪುಟ್ಟಣ್ಣ ಹೇಳಿದ್ದರಂತೆ. ಆದರೆ ಆ ಸಿನಿಮಾ ಮುಗಿಯುವ ವೇಳೆಗೆ ಪುಟ್ಟಣ್ಣ ಕೂಡ ನಿಧನರಾಗಿಬಿಟ್ಟರು ಎನ್ನುವುದೇ ಬೇಸರದ ಸಂಗತಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,6 Jul 2025