ಅಪ್ಪು ಕೊನೆ ಕ್ಷಣದಲ್ಲಿ ಪತ್ನಿ ತೊಡೆ ಮೇಲೆ ಪ್ರಾಣ ಹೋಯಿತು, ಇ.ಲ್ಲಿದೆ ವಿಡಿಯೋ ರೆಕಾರ್ಡ್

 | 
Bcf

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿ ಇಂದಿಗೆ ಎರಡು ವರ್ಷ. ಸದಾ ಲವಲವಿಕೆಯಿಂದ ಇರುತ್ತಿದ್ದ ಅಪ್ಪು ಅವರ ಹಠಾತ್ ಅಗಲಿಕೆ ರಾಜ್ಯಕ್ಕೆ ದೊಡ್ಡ ಶಾಕ್ ನೀಡಿತ್ತು. ಅಷ್ಟೇ ಅಲ್ಲದೆ ದೇಶ, ವಿದೇಶಗಳಲ್ಲಿರುವ ಅಪ್ಪು ಅಭಿಮಾನಿಗಳು ಕೂಡ ಮಮ್ಮಲ ಮರುಗಿದ್ದರು.

ಇಡೀ ರಾಜ್ಯಕ್ಕೆ 2021 ರ ಅಕ್ಟೋಬರ್ 29 ಕರಾಳ ದಿನವಾಗಿತ್ತು. ಅಂದು ಬೆಳಗ್ಗೆ ಸದಾಶಿವನಗರದ ಪಾರ್ಕ್​ನಲ್ಲಿ ವಾಕಿಂಗ್ ಮಾಡಿ ನಂತರ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದ ವೇಳೆ ಪುನೀತ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರು ಪತ್ನಿ ಜೊತೆ ಮನೆ ಸಮೀಪವೇ ಇದ್ದ ಫ್ಯಾಮಿಲಿ ಡಾಕ್ಟರ್​ ರಮಣಶ್ರೀ ಅವರ ಕ್ಲಿನಿಕ್​ಗೆ ಆಗಮಿಸಿದ್ದರು. ಈ ವೇಳೆ ಅಪ್ಪು ಆರೋಗ್ಯವನ್ನು ವೈದ್ಯರು ಪರಿಶೀಲಿಸಿದ್ದರು. 

ಆಗ ಅಪ್ಪು ಅವರ ಇಸಿಜಿ ರಿಪೋರ್ಟ್​ನಲ್ಲಿ ಏರುಪೇರು ಕಂಡು ಬಂದಿತ್ತು. ಆಗ ಅಲ್ಲಿನ ವೈದ್ಯರು, ತಕ್ಷಣವೇ ವಿಕ್ರಂ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದರು. ಆಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ತಮ್ಮ ಕಾಲಮೇಲೆ ಪುನೀತ್ ರಾಜಕುಮಾರ್ ಅವರನ್ನು ಮಲಗಿಸಿಕೊಂಡು ವಿಕ್ರಂ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಪುನೀತ್​ಗೆ ತೀವ್ರ ಹೃದಯಾಘಾತವಾಗಿ ಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಿದರಾದರೂ ಫಲಕಾರಿಯಾಗದೆ ಪುನೀತ್ ರಾಜ್ ಕುಮಾರ್ ಅಂದು ಇಹಲೋಕ ತ್ಯಜಿಸಿದ್ದರು.

ವರನಟ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಕಿರಿಯ ಪುತ್ರನಾಗಿ 1975 ರಲ್ಲಿ ಜನಿಸಿದ ಪುನೀತ್ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇವರ ಮೊದಲ ಹೆಸರು ಲೋಹಿತ್ ಎಂದಾಗಿತ್ತು. ನಂತರ ಅಪ್ಪು ಚಿತ್ರದ ಮೂಲಕ ನಾಯಕನಟನಾಗಿ ಪಾದಾರ್ಪಣೆ ಮಾಡಿದ ಪುನೀತ್, ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಬಾಲನಟನಿಂದ ನಾಯಕನಾಗಿ ಜನಮನ ಗೆದ್ದರು. 

46ನೇ ವಯಸ್ಸಿನೊಳಗೆ ಅದೆಷ್ಟೋ ಸಾಧನೆ ಮಾಡಿದ್ದರು. ಆದರೆ, ಅಷ್ಟರಲ್ಲೇ ವಿಧಿ ಬೇರೆಯದೆ ಆಟ ಆಡಿತ್ತು. ಪುನೀತ್ ಅವರಿಗೆ ಹೃದಯಾಘಾತವಾಗಲು ಕಾರಣ ಏನೆಂಬುದನ್ನು ತಜ್ಞರು ಹೇಳಿರುವ ಪ್ರಕಾರ, ಹೃದಯದ ಮುಂದಿನ ಭಾಗದ ರಕ್ತನಾಳ ಮುಚ್ಚಿ ಹೃದಯಾಘಾತ ಆಗಿದೆ. ಹೃದಯಾಘಾತವಾದಾಗ ಹೃದಯ ತನ್ನ ಕೆಲಸ ನಿಲ್ಲಿಸಿದ್ರೆ ಕಾರ್ಡಿಯಾಕ್ ಅರೆಸ್ಟ್ ಎನ್ನುತ್ತಾರೆ. 

ಪುನೀತ್ ಸಾವಿಗೆ ಕಾರ್ಡಿಯಾಕ್ ಅರೆಸ್ಟ್ ಕಾರಣ. ಹೃದಯಾಘಾತ ಆಗುವ ಮುನ್ನ ಎದೆನೋವು ಕಾಣಿಸಿಕೊಳ್ಳುತ್ತದೆ. ತಕ್ಷಣ ಚಿಕಿತ್ಸೆ ಪಡೆದರೆ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತಾರೆ. ಒಟ್ಟಿನಲ್ಲಿ ದೇವರಿಗೆ ಪ್ರೀತಿಪಾತ್ರರಾದ ಇವರು ನಮ್ಮೆಲ್ಲರನ್ನು ಅಗಲಿ ಅಭಿಮಾನಿಗಳ ಮನದಲ್ಲಿ ಸದಾ ಕಾಲ ಜೀವಂತವಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.

News Hub