ಅರ್ಜುನ್ ಜನ್ಯ ಅನುಶ್ರೀ ನಡುವೆ ಯಾ ವ ಸಂಬಂಧ; ಜನ್ಯ ಪತ್ನಿ ಗರಂ
Oct 8, 2024, 13:15 IST
|
ಸಾಮಾನ್ಯವಾಗಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಗಳನ್ನ ಬಿಟ್ಟೂಬಿಡದೆ ನೋಡುತ್ತಿರುವವರಿಗೆ ಅರ್ಜುನ್ ಜನ್ಯ ಹಾಗೂ ಅನುಶ್ರೀ ನಡುವಿನ ಕೆಮಿಸ್ಟ್ರಿ ಹಾಗೂ ಕಾಲೆಳೆಯುವ ಪ್ರೋಗ್ರಾಂ ಗೊತ್ತೇ ಇರುತ್ತೆ. ಆಗಾಗ ಕಾಲೆಳೆಯುತ್ತ ಫನ್ ಮಾಡ್ತಾ ನೋಡುಗರಿಗೆ ನಗೆ ಮೂಡಿಸುತ್ತಾರೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ರವರನ್ನ ಅನುಶ್ರೀ ಪ್ರೀತಿಯಿಂದ ಮಾತನಾಡಿಸುವುದು... ಪ್ರಪೋಸ್ ಮಾಡುವುದು... ಡಾರ್ಲಿಂಗ್ ಎಂದು ಕರೆಯುವುದು... ಉಂಗುರ ತೊಡಿಸುವುದು... ಈ ಎಲ್ಲವೂ ತಮಾಷೆಗಾಗಿ, ಕಾರ್ಯಕ್ರಮದ ಫನ್ ಎಲಿಮೆಂಟ್ ಗಾಗಿ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಈ ಕುರಿತಾಗಿ ಹೇಳಿರುವ ಅರ್ಜುನ್ ಜನ್ಯ ಇದರಿಂದಾಗಿ ತನ್ನ ಹೆಂಡತಿಗೆ ಕೋಪ ಬರುತ್ತದೆ ಎಂದು ಹೇಳಿದ್ದಾರೆ.
ಮೊದಮೊದಲು 'ಡಾರ್ಲಿಂಗ್' ಸಂಚಿಕೆ ನೋಡಿ ಶಾಕ್ ಆಗಿದ್ದ ಅರ್ಜುನ್ ಜನ್ಯ ಪತ್ನಿ, ನಂತರ ಕಾರ್ಯಕ್ರಮದಲ್ಲಿಯೇ ಅನುಶ್ರೀ-ಅರ್ಜುನ್ ಜನ್ಯ ಬ್ರೇಕಪ್ ಆದ್ಮೇಲೆ ಖುಷಿ ಪಟ್ಟರಂತೆ. ಅಷ್ಟಕ್ಕೂ, ಇದೆಲ್ಲ ಸ್ಕ್ರಿಪ್ಟೆಡ್ ಅಂತ ಗೊತ್ತಿರುವುದರಿಂದ ಅರ್ಜುನ್ ಜನ್ಯ ಪತ್ನಿ ಅಷ್ಟೇನು ತಲೆಗೆ ಹಾಕೊಂಡಿಲ್ಲ. ಹೀಗಾಗಿಯೇ, ಅನುಶ್ರೀ ಬಗ್ಗೆ ಯಾರು ಏನೇ ಕೇಳಿದರೂ, ಕೊಂಚ ಕೂಡ ಅಂಜಿಕೆ-ಅಳುಕು ಇಲ್ಲದೇ ಅರ್ಜುನ್ ಜನ್ಯ ಉತ್ತರ ಕೊಡುತ್ತಾರೆ.
ಈ ಹಿಂದೆ ನೀವು ಬೆಳಗ್ಗೆ ಎದ್ದಾಗ, ನಿಮ್ಮ ಮುಂದೆ ಅನುಶ್ರೀ ಕಾಫಿ ಕಪ್ ಹಿಡ್ಕೊಂಡ್ ನಿಂತಿದ್ರೆ, ಏನ್ ಮಾಡ್ತೀರಾ.?ಎಂಬ ಪ್ರಶ್ನೆಯನ್ನ ಅಕುಲ್ ಬಾಲಾಜಿ, ಅರ್ಜುನ್ ಜನ್ಯ ಮುಂದಿಟ್ಟಿದ್ದರು.ಕೊಂಚ ಕೂಡ ಅಂಜಿಕೆ ಇಲ್ಲದೇ ಪಕ್ಕದಲ್ಲಿ ನನ್ನ ಹೆಂಡತಿ ಇದ್ದಾರಾ ಅಂತ ನೋಡ್ತೀನಿ ಎಂದರು ಅರ್ಜುನ್ ಜನ್ಯ.ಹೆಂಡತಿ ಇದ್ದಾಗಲೂ ಕುಡಿಯಬೇಕು ಅಂತ ಆಸೆ ಆಗುತ್ತೆ. ಆದ್ರೆ ಬಿಡುವುದಿಲ್ಲ ಎಂದು ನಗುನಗುತ್ತಾ ಹೇಳಿದರು ಅರ್ಜುನ್ ಜನ್ಯ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.