ಇಷ್ಟವಿಲ್ಲದಿದ್ದರೂ ಕೂಡ ತನ್ನ ಮಗಳನ್ನು ವಿದೇಶಿ ವರನ ಜೊತೆ ನಿಶ್ಚಿತಾರ್ಥ ಮಾಡಿಸಿಕೊಂಡ ಅರ್ಜುನ್ ಸರ್ಜಾ

 | 
Nkk
ಹೆಮ್ಮೆಯ ಕನ್ನಡಿಗ ಅರ್ಜುನ್ ಸರ್ಜಾ ಕಳೆದ ಐದು ದಶಕಗಳಿಂದ ಭಾಷೆಯ ಭೇದ ಭಾವ ಇಲ್ಲದೇ ಕನ್ನಡ, ತೆಲುಗು, ತಮಿಳು ಹೀಗೆ ಹಲವು ಭಾಷೆಯಲ್ಲಿ ನಟಿಸಿದ್ದಾರೆ. ಅರ್ಜುನ್‌ ಜರ್ನಿ ಅವರ ದೊಡ್ಡ ಮಗಳು ಐಶ್ವರ್ಯ ಅವರು ಈಗಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಕನ್ನಡದಲ್ಲಿ ಪ್ರೇಮ ಬರಹ ಎಂಬ ಚಿತ್ರವನ್ನು ಕೂಡ ಮಾಡಿದ್ದಾರೆ. ಕನ್ನಡದಲ್ಲಿ ಪ್ರೇಮ ಬರಹ ಎಂಬ ಚಿತ್ರವನ್ನು ಕೂಡ ಮಾಡಿದ್ದಾರೆ. ಆದರೆ ಅರ್ಜುನ್ ಸರ್ಜಾ ಅವರನ್ನು ಹರಸಿ ಹಾರೈಸಿದಂತೆ ಕನ್ನಡಿಗರು ಐಶ್ವರ್ಯ ಕೈ ಹಿಡಿಯಲಿಲ್ಲ.
ಅರ್ಜುನ್‌ ಸರ್ಜಾ ಅವರ ಮೊದಲ ಮಗಳ ಚಿತ್ರರಂಗಕ್ಕೆ ಐಶ್ವರ್ಯ ಬಂದರೂ ಕೂಡ ಅಂಜನಾ ಯಾಕೆ ಬರಲಿಲ್ಲ ಎನ್ನುವ ಪ್ರಶ್ನೆ ಇದೆ. ಅರ್ಜುನ್ ಸರ್ಜಾ ಅವರ ಮೊದಲ ಮಗಳ ಕಳೆದ ವರ್ಷ ಮದುವೆಯಾಗಿದ್ದು, ಇದೀಗ ಅರ್ಜುನ್‌ ಸರ್ಜಾ ಅವರ ಎರಡನೇ ಮಗಳು ಅಂಜನಾ ಸದ್ದು ಇಲ್ಲದೇ ಇಟಲಿಯಲ್ಲಿ ತಮ್ಮ ಬಹುಕಾಲದ ಗೆಳೆಯನ ಪ್ರೀತಿಗೆ ಸಮ್ಮತಿಯನ್ನು ಸೂಚಿಸಿದ್ದಾರೆ. ಚಿತ್ರರಂಗ, ಕ್ಯಾಮರಾ ಮತ್ತು ಇಲ್ಲಿನ ಪಾರ್ಟಿಗಳಿಂದ ತುಂಬಾನೇ ಅಂತರವನ್ನು ಕಾಪಾಡಿಕೊಂಡಿರುವ ಅರ್ಜುನ್ ಸರ್ಜಾ ಅವರ ಎರಡನೇ ಮಗಳು ಅಂಜನಾ ಫಾರಿನ್ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.
ಅಂಜನಾ ಹಾಗೂ ಎಶಾಯ್ ಅವರು ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ವಿದ್ಯಾಭ್ಯಾಸಕ್ಕೆ ತೆರಳಿದ್ದ ಅಂಜನಾ ಸದ್ಯ ಇಟಲಿಯಲ್ಲೇ ನೆಲೆಸಿದ್ದಾರೆ.ಇಟಲಿಯ ಲೇಕ್ ಕೊಮೊದಲ್ಲಿ ಅಂಜನಾ ಮತ್ತು ಎಶಾಯ್ ಉಂಗುರ ಬದಲಿಸಿಕೊಂಡಿದ್ದಾರೆ. ಅಂಜನಾ ಅವರು ಕಲಾವಿದೆ ಹಾಗೂ ಫ್ಯಾಷನ್ ಡಿಸೈನರ್ ಕೂಡ ಹೌದು. ಎಶಾಯ್ ಅವರು ಇಟಲಿಯಲ್ಲಿ ಮನರಂಜನಾ ಕ್ಷೇತ್ರದ ಉದ್ಯಮಿಯಾಗಿದ್ದಾರೆ.
ಅಂಜನಾ ಎಂಗೇಜ್‌ಮೆಂಟ್ ಫೋಟೊಗಳು ಈಗ ವೈರಲ್ ಆಗಿದ್ದು, ಕುಟುಂಬದ ಆಪ್ತರು ಮಾತ್ರ ಭಾಗವಹಿಸಿದಂತೆ ಕಾಣುತ್ತಿದೆ. ಫೋಟೊದಲ್ಲಿ ಅರ್ಜುನ್‌ ಸರ್ಜಾ, ಪತ್ನಿ ನಿವೇದಿತಾ, ಐಶ್ವರ್ಯಾ ಅರ್ಜುನ್, ಪತಿ ಉಮಾಪತಿ ರಾಮಯ್ಯ ಅವರನ್ನು ಫೋಟೊದಲ್ಲಿ ಕಾಣಬಹುದು. ಚಿತ್ರರಂಗದಿಂದ ದೂರವಿರುವ ಅಂಜನಾ ಈಗ ವಿದೇಶ ಹುಡುಗನನ್ನು ವರಲಿಸಲು ಸಜ್ಜಾಗಿದ್ದಾರೆ. 
13 ವರ್ಷಗಳ ತಮ್ಮ ಪ್ರೀತಿಗೆ ಮನೆಯವರಿಂದ ಒಪ್ಪಿಗೆ ಮುದ್ರೆ ಪಡೆದು ಮುಂದಡಿ ಇಟ್ಟಿದ್ದಾರೆ.ಪ್ರಿಯಕರನ ಜೊತೆ ರೊಮ್ಯಾಂಟಿಕ್ ಆಗಿ ಫೋಟೊಶೂಟ್ ಮಾಡಿಸಿದ್ದಾರೆ ಅಂಜನಾ. ಮಗಳ ಪ್ರೀತಿಗೆ ಅರ್ಜುನ್ ಗ್ರೀನ್ ಸಿಗ್ನಲ್ ಕೊಟ್ಟು, ಮನೆಯಲ್ಲಿ ಮತ್ತೊಂದು ಮದುವೆ ಮಾಡಿಸಲು ರೆಡಿಯಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.