ದರ್ಶನ್ ಬರುತ್ತಿದ್ದಂತೆ ಮುಖಾಮುಖಿಯಾದ ಪವಿತ್ರ, ಆನೆಯನ್ನೇ ನೋಡುತ್ತಾ ನಿಂತ ಪವಿತ್ರ ಗೌಡ
Feb 26, 2025, 12:47 IST
|

ಈ ಮೊದಲು ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರು ಆಪ್ತರಾಗಿದ್ರು. ಪವಿತ್ರಾಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾಸ್ವಾಮಿಯನ್ನು ದರ್ಶನ್ ಥಳಿಸಿದ್ರು ಅನ್ನೋದು ಪೊಲೀಸ್ ವರದಿಯಿಂದ ತಿಳಿದು ಬಂದಿದೆ. ಕೊಲೆ ಕೇಸ್ ನಲ್ಲಿ ಜೈಲು ಸೇರಿ ಬೇಲ್ ಮೇಲೆ ರಿಲೀಸ್ ಆದ ಬಳಿಕ ದರ್ಶನ್-ಪವಿತ್ರಾ ಗೌಡ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನಲಾಗ್ತಿದೆ.
ಜಾಮೀನು ಪಡೆದು ಹೊರಗೆ ಬಂದ ಬಳಿಕ ಇಬ್ಬರೂ ಮಾತಾಡಿಲ್ಲ ಎನ್ನಲಾಗ್ತಿದೆ. ಇಂದು ಕೋರ್ಟ್ ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಮುಖಾಮುಖಿ ಆಗಿದ್ರು. ಆದ್ರೆ ಈ ವೇಳೆ ಒಬ್ಬರಿಗೊಬ್ಬರು ಮಾತಾಡಿಲ್ಲ ಎನ್ನಲಾಗ್ತಿದೆ. ಪರಿಚಯವೇ ಇಲ್ಲದಂತೆ ನಿಂತಿದ್ರು ಎನ್ನಲಾಗ್ತಿದೆ. ರೇಣುಕಾ ಸ್ವಾಮಿ ಪ್ರಕರಣದಲ್ಲಿ ದರ್ಶನ್ ನಿರ್ಧಾರ ಪವಿತ್ರ ಗೌಡ ಅವರಿಗೆ ಸಾಕಷ್ಟು ನೋವು ನೀಡಿತ್ತು.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ 17 ಮಂದಿಯನ್ನು ಪೊಲೀಸರು ಬಂಧಿಸಿದ್ರು. ಹೈಕೋರ್ಟ್ 17 ಮಂದಿಗೂ ಜಾಮೀನು ನೀಡಿತ್ತು. ನ್ಯಾಯಾಲಯದ ಷರತ್ತಿನಂತೆ ಆರೋಪಿಗಳು ಪ್ರತಿ ತಿಂಗಳು ಕೋರ್ಟ್ ಗೆ ಹಾಜರಿ ಹಾಕಬೇಕಿದೆ. ಹೀಗಾಗಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಗೆ ಆಗಮಿಸಿದ್ರು.
ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ 17 ಆರೋಪಿಗಳ ವಿಚಾರಣೆ ನಡೆಯಿತು. ಮೊದಲು ಜಡ್ಜ್ ಎಲ್ಲಾ ಆರೋಪಿಗಳ ಹೆಸರು ಕರೆದಿದ್ದಾರೆ. ಇದೇ ವೇಳೆ ಕೋರ್ಟ್ನಲ್ಲಿ ಆರೋಪಿ ದರ್ಶನ್ ಹಾಗೂ ಪವಿತ್ರಾಗೌಡ ಮುಖಾಮುಖಿ ಆಗಿದ್ದಾರೆ.ಕೋರ್ಟ್ ನಲ್ಲಿ ಇಬ್ಬರು ಅಕ್ಕ-ಪಕ್ಕ ನಿಂತಿದ್ರೂ ಇಬ್ಬರೂ ಮಾತನಾಡಿಲ್ಲ. ಕಳೆದ ಬಾರಿ ಕೋರ್ಟ್ಗೆ ಬಂದಾಗ ದರ್ಶನ್ ಹಾಗೂ ಪವಿತ್ರಾ ಮಾತಾಡಿದ್ರಂತೆ. ಈ ಬಾರಿ ಕೋರ್ಟ್ ನಲ್ಲಿ ಮಾತನಾಡಿಲ್ಲ ಎನ್ನಲಾಗ್ತಿದೆ. ಇಬ್ಬರ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.