ಬಿಗ್ ಬಾಸ್ ಮನೆಯಿಂದ ಹೊರಬಂದ ತಕ್ಷಣ ಮದುವೆಗೆ ರೆಡಿಯಾದ ಸ್ಪರ್ಧಿ, ಕರುನಾಡಿಗೆ ಹಬ್ಬದೂಟ
ಬಿಗ್‌ಬಾಸ್ ತೆಲುಗಿನಲ್ಲಿ ಕಾಣಿಸಿಕೊಂಡಿದ್ದ ಕರ್ನಾಟಕದ ಚೆಲುವೆ ಶೋಭಾ ಶೆಟ್ಟಿಗೂ ಯಶವಂತ್ ರೆಡ್ಡಿಗೂ ಶೀಘ್ರದಲ್ಲೇ ವಿವಾಹ ಜರುಗಲಿದೆ. ಇವರಿಬ್ಬರ ನಿಶ್ವಿತಾರ್ಥ ಇತ್ತೀಚೆಗೆ ನಡೆದಿದೆ. ಈ ಸಂದರ್ಭದ ಫೋಟೋಗಳನ್ನು ಶೋಭಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶೋಭಾ ಶೆಟ್ಟಿ ಕನ್ನಡದ ಅಗ್ನಿಸಾಕ್ಷಿ ಸೀರಿಯಲ್‌ನಲ್ಲಿ ನಟಿಸಿದ್ದರು.
ತೆಲುಗಿನಲ್ಲಿ ಶೋಭಾ ಶೆಟ್ಟಿ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಸದ್ಯ ಕಾರ್ತಿಕ ದೀಪಂ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಇವರು ಬಿಗ್‌ಬಾಸ್ ತೆಲುಗು ಸೀಸನ್ 7ನಲ್ಲೂ ಸ್ಪರ್ಧಿಸಿದ್ದರು.ಬಿಗ್‌ಬಾಸ್‌ನಲ್ಲಿ ಟಾಪ್ 7ರ ತನಕ ಬಂದಿದ್ದ ಶೋಭಾ ಶೆಟ್ಟಿ ಎಂಗೇಜ್‌ಮೆಂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಎರಡೂ ಕುಟುಂಬದವರೂ ಮದುವೆಗೆ ಸಮ್ಮತಿಸಿ ತಾಂಬೂಲ ಬದಲಾಯಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬಿಗ್‌ಬಾಸ್ ಕಾರ್ಯಕ್ರಮದಲ್ಲಿಯೇ ಶೋಭಾ ಶೆಟ್ಟಿ ಅವರು ತನ್ನ ಬಾಯ್‌ಫ್ರೆಂಡ್ ಯಶವಂತ್ ರೆಡ್ಡಿಯನ್ನು ಪರಿಚಯಿಸಿದ್ದರು. ಇವರಿಬ್ಬರೂ ಕಾರ್ತಿಕ ದೀಪಂ ಸೀರಿಯಲ್‌ನಲ್ಲಿ ಜತೆಯಾಗಿ ನಟಿಸಿದ್ದರು. ಹಲವು ಶಾರ್ಟ್ ಫಿಲ್ಮ್‌ಗಳಲ್ಲೂ ಇವರು ಜತೆಯಾಗಿ ನಟಿಸಿದ್ದಾರೆ.ನಟನೆಯ ಸಂದರ್ಭದಲ್ಲಿ ಇವರಿಬ್ಬರು ಫ್ರೆಂಡ್ಸ್ ಆಗಿದ್ದರು. ಸ್ನೇಹ ಬಳಿಕ ಪ್ರೀತಿಗೆ ತಿರುಗಿದೆ. ಕಳೆದ ವರ್ಷವೇ ಇವರಿಬ್ಬರ ಎಂಗೇಜ್‌ಮೆಂಟ್ ಆಗಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಎಂಗೇಜ್‌ಮೆಂಟ್ ಮುಂದಕ್ಕೆ ಹಾಕಲಾಗಿತ್ತು.
ಇತ್ತೀಚಿಗೆ ಇವರಿಬ್ಬರು ಎಂಗೇಜ್‌ಮೆಂಟ್ ಆಗಿದ್ದಾರೆ. ಇವರ ಎಂಗೇಜ್‌ಮೆಂಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವರದಿಗಳ ಪ್ರಕಾರ ಇವರ ಎಂಗೇಜ್‌ಮೆಂಟ್ ಬೆಂಗಳೂರಿನಲ್ಲಿರುವ ಶೋಭಾ ಶೆಟ್ಟಿ ಮನೆಯಲ್ಲಿಯೇ ಜರುಗಿದೆ.ಎಂಗೇಜ್‌ಮೆಂಟ್ ಕುರಿತು ಶೋಭಾ ಶೆಟ್ಟಿ ಅಧಿಕೃತವಾಗಿ ಇನ್ನೂ ಎಲ್ಲೂ ಪ್ರಕಟಿಸಿಲ್ಲ. ಸದ್ಯ ಎಂಗೇಜ್ಮೆಂಟ್ ಡ್ರೆಸ್‌ನಲ್ಲಿರುವ ಸುಂದರ ಫೋಟೋಗಳನ್ನಷ್ಟೇ ಹಂಚಿಕೊಂಡಿದ್ದಾರೆ.
ಶೋಭಾ ಶೆಟ್ಟಿ ಅವರು ಕನ್ನಡದ ಅಗ್ನಿಸಾಕ್ಷಿ ಸೀರಿಯಲ್‌ನಲ್ಲಿ ನಟಿಸಿದ್ದರು. 2013ರಲ್ಲಿ ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಮನರಂಜನಾ ಕ್ಷೇತ್ರಕ್ಕೆ ಆಗಮಿಸಿದರು. ಅದಕ್ಕೂ ಮೊದಲು ಅವರು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಂಜನಿಪುತ್ರ ಸಿನೆಮಾದಲ್ಲಿ ಪುನೀತ್ ರಾಜ್‌ಕುಮಾರ್ ಸಹೋದರಿಯಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ನಟಿಸುವ ಸಲುವಾಗಿ ಅಗ್ನಿಸಾಕ್ಷಿ ಸೀರಿಯಲ್ ಅರ್ಧಕ್ಕೆ ಬಿಟ್ಟಿದ್ದರು. ಕಾವೇರಿ, ನಮ್ಮ ರುಕ್ಕು ಸೀರಿಯಲ್‌ಗಳಲ್ಲೂ ಇವರು ನಟಿಸಿದ್ದಾರೆ. ಬಳಿಕ ಇವರು ತೆಲುಗು ಸೀರಿಯಲ್‌ಗಳತ್ತ ತೆರಳಿದರು. ಇದೀಗ ತೆಲುಗು ಹುಡುಗನನ್ನೇ ಮದುವೆಯಾಗಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.