ವಿನಯ್ ವಿನ್ ಆಗೋದು ಖಚಿತವಾಗುತ್ತಿದ್ದಂತೆ, ಆಪ್ತ ಸ್ನೇಹಿತ ಬಿಚ್ಚಿಟ್ಟ ವಿನ.ಯ್ ಮುಖವಾಡ
ಬಿಗ್‌ಬಾಸ್ ಕನ್ನಡ ಸೀಸನ್ 10 ಕೊನೇ ಹಂತಕ್ಕೆ ಬಂದಿದೆ. ಈ ಸೀಸನ್‌ನ ಕೊನೆಯ ಪಂಚಾಯ್ತಿ ನಡೆಸಿಕೊಟ್ಟಿದ್ದಾರೆ ಕಿಚ್ಚ ಸುದೀಪ್. ಮತ್ತೊಂದು ಕಡೆಗೆ ಉಳಿದ ಬೆರಳೆಣಿಕೆ ಸದಸ್ಯರಲ್ಲಿ ಗೆಲುವಿನ ಮೆಟ್ಟಿಲೇರಲು ಕಾತರರಾಗಿದ್ದಾರೆ. ಇತ್ತ ತಮ್ಮ ಆಟದ ವೈಖರಿಯಿಂದಲೇ ಬಿಗ್ ಬಾಸ್ ಮನೆಯಲ್ಲಿ ಕಿಚ್ಚು ಹಚ್ಚಿದ್ದ ಸಂಗೀತಾ ಶೃಂಗೇರಿ ಮತ್ತು ವಿನಯ್ ಗೌಡ ಅವರಿಗೆ ಕಿಚ್ಚನಿಂದ ಕೊನೇ ಚಪ್ಪಾಳೆ ಸಿಕ್ಕಿದೆ.
ಈ ವಾರ ಯಾರಿಗೆ ಕಿಚ್ಚನ ಚಪ್ಪಾಳೆ ಸಿಗಲಿದೆ ಎಂಬ ಕೌತುಕ ಮನೆ ಮಂದಿಯವರ ತಲೆಯಲ್ಲಿ ಓಡುತ್ತಿದ್ದರೆ, ಇತ್ತ ವೀಕ್ಷಕರಿಗೂ ಆ ಕುತೂಹಲವಿತ್ತು. ಅದರಂತೆ ಇದೇ ಮೊದಲ ಬಾರಿ, ಬಿಗ್ ಬಾಸ್ ಇತಿಹಾಸದಲ್ಲಿಯೇ ಒಂದೇ ವಾರದಲ್ಲಿ ಇಬ್ಬರಿಗೆ ಕಿಚ್ಚನ ಚಪ್ಪಾಳೆ ನೀಡಿದ ಉದಾಹರಣೆ ಇರಲಿಲ್ಲ. ಇದೀಗ ಅದೂ 10ನೇ ಸೀಸನ್‌ನಲ್ಲಿ ಘಟಿಸಿದೆ. ವಿನಯ್ ಗೌಡಗೆ ಕೊನೇ ವಾರದ ಕಿಚ್ಚನ ಚಪ್ಪಾಳೆ ಲಭಿಸಿದೆ.
ಅಲ್ಲದೆ ವಿನಯ್ ಗೌಡ ಪರ ಹರ ಹರ ಮಹಾದೇವ ಧಾರವಾಹಿಅಲ್ಲಿ ಅವರೊಂದಿಗೆ ನಟಿಸಿರುವ ಪವನ್ ಮಧುಕರ್ ಇದೀಗ ಅವರ ಪರವಾಗಿ ಮಾತನಾಡಿದ್ದಾರೆ. ಹೌದು ಹರಹರ ಮಹಾದೇವ ಧಾರವಾಹಿಯಲ್ಲಿ ಸುಬ್ರಹ್ಮಣ್ಯ ಪಾತ್ರದಲ್ಲಿ ನಟಿಸಿದ್ದ ಇವರು ವಿನಯ್ ಅವರಿಗೆ ಗೆದ್ದು ಬನ್ನಿ ಅಣ್ಣಾ ಎಂದು ಹಾರೈಸಿದ್ದಾರೆ.
ವಿನಯ್ ಗೌಡ ಅವರ ಆಟ, ಕಿರುಚಾಟ ಎಲ್ಲವನ್ನೂ ನೋಡುತ್ತಿದ್ದರೆ ಅವರು ಗೆಲ್ಲುತ್ತಾರೆ ಇಲ್ಲವೇ ಫೈನಲ್ ತಲುಪುತ್ತಾರೆ ಎಂದು ಮೊದಲೇ ಅನ್ನಿಸಿತ್ತು. ಅವರು ಏಷ್ಟು ಒರಟು ಸ್ವಭಾವವೋ ಅಷ್ಟೇ ಒಳ್ಳೆಯವರು ಅಂದಿದ್ದಾರೆ ಅವರ ಜೊತೆಯಾಗಿ ನಟಿಸಿದ್ದ ಪವನ್ ಮಧುಕರ್ ಅವರು. ಇದನ್ನೆಲ್ಲ ನೋಡುತ್ತಿದ್ದರೆ ವಿನಯ್ ಗೌಡ ಗೆಲುವು ಸಾಧಿಸೋದ್ರದಲ್ಲಿ ಅನುಮಾನವಿಲ್ಲ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.